Advertisement

‘ಮಣಿಕರ್ಣಿಕಾ’ ಚಿತ್ರದ ನಟನೆಗೆ ಕಂಗನಾಗೆ ಒಲಿದ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ

06:43 PM Mar 22, 2021 | Team Udayavani |

ನವ ದೆಹಲಿ : ಕಳೆದ ವರ್ಷ ಘೋಷಿಸಬೇಕಾಗಿದ್ದ 67 ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯನ್ನು ಇಂದು(ಸೋಮವಾರ)  ಘೋಷಿಸಲಾಗಿದೆ.

Advertisement

ಕೋವಿಡ್ ಸೋಂಕಿನ ಕಾರಣದಿಂದಾಗಿ ಕಾರಣ ವಿಳಂಬವಾಗಿದ್ದ 2019 ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ 67 ನೇ ರಾಷ್ಟ್ರೀಯ ಚಲನ ಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಸಾಲಿನಲ್ಲಿ ಘೋಷಿಸಲಾಗಿದೆ.

ಓದಿ : ಕೇರಳ  ‘ಲವ್ ಜಿಹಾದ್’, ‘ದೇಶ ವಿರೋಧಿ ಚಟುವಟಿಕೆ’ಗಳ ಕೇಂದ್ರ : ಸದಾನಂದ ಗೌಡ

ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ‘ಚಿಚೋರ್’ ಅತ್ಯುತ್ತಮ ಹಿಂದಿ ಚಲನಚಿತ್ರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಿದೆ. ಕಂಗನಾ ರನೌತ್ ಅವರು ‘ಮಣಿಕರ್ಣಿಕಾ’ ದಿ ಕ್ವೀನ್ ಆಫ್ ಝಾನ್ಸಿ ಮತ್ತು ‘ಪಂಗಾ’ ಚಿತ್ರಗಳಿಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಮನೋಜ್ ಬಾಜ್ ಪೇಯಿ ಮತ್ತು ಧನುಷ್ ಹಿಂದಿ ಚಿತ್ರ ‘ಭೋನ್ಸ್ಲೆ’ ಮತ್ತು ತಮಿಳು ಚಿತ್ರ ‘ಅಸುರನ್’ ಚಿತ್ರಕ್ಕೆ ಅತ್ಯುತ್ತಮ ನಟರಾಗಿ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಚಲನಚಿತ್ರಕ್ಕಾಗಿ ಪ್ರಶಸ್ತಿಯನ್ನು ಮಲಯಾಳಂ ಚಿತ್ರ ‘ಮರಕ್ಕರ್ : ಅರಬಿಕಡಲಿಂಟೆ ಸಿಮ್ಹ್ಯಾಮ್’ ಗೆ ನೀಡಲಾಗಿದ್ದು, ಇದು ಅತ್ಯುತ್ತಮ ಸ್ಪೆಶಲ್ ಎಫೆಕ್ಟ್ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ.

Advertisement

‘ಸೂಪರ್ ಡಿಲಕ್ಸ್’ ಚಿತ್ರಕ್ಕಾಗಿ ವಿಜಯ್ ಸೇತುಪತಿ ಅತ್ಯುತ್ತಮ ಪೋಷಕ ನಟ  ಮತ್ತು ಪಲ್ಲವಿ ಜೋಶಿ ‘ದಿ ತಾಷ್ಕೆಂಟ್ ಫೈಲ್ಸ್’ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.

ಈ ವರ್ಷ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದಿದ್ದ  ‘ಜಲ್ಲಿಕಟ್ಟು’ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ಪಡೆದಿದೆ. ಇನ್ನು, ಕನ್ನಡದ ರಕ್ಷಿತ್​ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಹಾಗೂ ತುಳು ಭಾಷೆಯ ಪಿಂಗಾರಾ ಚಿತ್ರಗಳು ಪ್ರಶಸ್ತಿ ಗಿಟ್ಟಿಸಿಕೊಂಡಿವೆ.

ಚಂದನವನದಲ್ಲಿ ಅಮೋಘ ಪ್ರದರ್ಶನ ಕಂಡು ಬ್ಲಾಕ್ ಬಸ್ಟರ್ ಚಿತ್ರಗಳ ಪೈಕಿಗೆ ಸೇರಿದ್ದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಸಾಹಸ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ ಲಭಿಸಿದೆ. ಈ ಚಿತ್ರಕ್ಕೆ ವಿಕ್ರಮ್ ಮೋರ್​ ಅವರು ಸಾಹಸ ನಿರ್ದೇಶನ ಮಾಡಿದ್ದರು.

ಬೆಸ್ಟ್​ ಬುಕ್​ ಆನ್​ ಸಿನಿಮಾ ವಿಭಾಗದಲ್ಲಿ ಎರಡನೇ ವಿಜೇತರಾಗಿ ಪಿ.ಆರ್ ರಾಮದಾಸ್ ನಾಯ್ಡು ಆಯ್ಕೆ ಆಗಿದ್ದಾರೆ.  ಅವರು ‘ಜಾಗತಿಕ ಸಿನಿಮಾ’ ಹೆಸರಿನ ಪುಸ್ತಕ ಬರೆದಿದ್ದರು.

ಇನ್ನು, 66 ನೇ  ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಲೋಕಸಭಾ ಚುನಾವಣೆಯ ಕಾರಣದಿಂದ ಏಪ್ರಿಲ್, ಮೇ ನಲ್ಲಿ ನಡೆಯಬೇಕಾಗಿದ್ದನ್ನು ಆಗಸ್ಟ್ ವರೆಗೆ ಮುಂದೂಡಲಾಗಿತ್ತು.

ಓದಿ : ಮಾಜಿ ಶಾಸಕರ ಮಗನಿಗೆ ನಕಲಿ ಅಶ್ಲೀಲ ವಿಡಿಯೋ ಬಳಸಿ ಬ್ಲಾಕ್‌ ಮೇಲ್!

Advertisement

Udayavani is now on Telegram. Click here to join our channel and stay updated with the latest news.

Next