Advertisement

ಸ್ಥೂಲ ಕಾಯದ ಮಹಿಳೆಯರು ಕರ್ನಾಟಕಕ್ಕೆ 2ನೇ ಸ್ಥಾನ: ಶೇ.6.9ರಷ್ಟು ಏರಿಕೆ

10:16 AM Sep 11, 2022 | Team Udayavani |

ಹೈದರಾಬಾದ್‌: ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟದಲ್ಲಿ ಎರಡನೇ ಅತಿ ಹೆಚ್ಚು ಸ್ಥೂಲಕಾಯದ ಮಹಿಳೆಯರಿದ್ದಾರೆ. 2019ಕ್ಕೆ ಹೋಲಿಸಿದರೆ 2021ರಲ್ಲಿ ರಾಜ್ಯದಲ್ಲಿ ಸ್ಥೂಲಕಾಯದ ಮಹಿಳೆಯರ ಪ್ರಮಾಣ ಶೇ. 6.9ರಷ್ಟು ಏರಿಕೆಯಾಗಿದೆ.

Advertisement

ಹೈದರಾಬಾದ್‌ನ ಸಾಮಾಜಿಕ ಅಭಿವೃದ್ಧಿ ಮಂಡಳಿ (ಸಿಎಸ್‌ಡಿ)ಯ ಹೊಸ ವರದಿಯಲ್ಲಿ ಈ ಅಭಿಪ್ರಾಯಪಡಲಾಗಿದೆ. ಅದರ ಪ್ರಕಾರ ದಕ್ಷಿಣ ರಾಜ್ಯಗಳ ಪೈಕಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಮಹಿಳೆಯರು ಸ್ಥೂಲಕಾಯ ಹೊಂದಿದ್ದಾರೆ.  2019ಕ್ಕೆ ಹೋಲಿಸಿದರೆ 2021ರಲ್ಲಿ ತಮಿಳುನಾಡಿನಲ್ಲಿ ಸ್ಥೂಲಕಾಯದ ಮಹಿಳೆಯರ ಪ್ರಮಾಣ ಶೇ. 9.5ರಷ್ಟು ಏರಿಕೆಯಾಗಿದೆ. ಅದೇ ರೀತಿ ಕೇರಳದಲ್ಲಿ ಶೇ. 5.7ರಷ್ಟು ಏರಿಕೆಯಾಗಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್ಎಚ್‌ಎಸ್‌ 4 ಮತ್ತು 5)ಯ ಸಮೀಕ್ಷೆಯನ್ನು ಆಧರಿಸಿ ಸಿಎಸ್‌ಡಿ ಈ ಅಧ್ಯಯನ ನಡೆಸಿದೆ.  ಎನ್‌ಎಫ್ಎಚ್‌ಎಸ್‌  ಪ್ರಕಾರ ದೇಶದಲ್ಲಿ ಒಟ್ಟಾರೆ ಸ್ಥೂಲಕಾಯದ ಮಹಿಳೆಯರ ಪ್ರಮಾಣ ಶೇ. 24ರಷ್ಟಿದೆ. ಅದೇ ರೀತಿ ಸ್ಥೂಲಕಾಯದ ಪುರುಷರ ಪ್ರಮಾಣ ಶೇ. 22.9ರಷ್ಟಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರೇ ಅತಿ ಹೆಚ್ಚು ಬೊಜ್ಜು ಹೊಂದಿದವರಾಗಿದ್ದಾರೆ.

ದಕ್ಷಿಣ ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ ಮತ್ತು ತಮಿಳುನಾಡಿನ 15ರಿಂದ 49 ವರ್ಷದೊಳಗಿನ ಮಹಿಳೆಯರಲ್ಲಿ ಸ್ಥೂಲಕಾಯದ ಕುರಿತು ಅಧ್ಯಯನ ನಡೆಸಲಾಗಿತ್ತು. ಇನ್ನೊಂದಡೆ ಗ್ರಾಮೀಣ ಮಹಿಳೆಯರಿಗೆ ಹೋಲಿಸಿದರೆ ನಗರದ ಮಹಿಳೆಯರಲ್ಲಿ ಸ್ಥೂಲಕಾಯ ಸಮಸ್ಯೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next