Advertisement
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದ್ದು, ಅಗತ್ಯ ಜೀವರಕ್ಷಕ ಚುಚ್ಚುಮದ್ದು ಮತ್ತು ಔಷಧಗಳೂ ಸಿಗದಂತೆ ಆಗಿವೆ. ಆದರೂ ಸರ್ಕಾರ ಕಣ್ಮುಚ್ಚಿ ಕುಳಿತಿದ್ದು, ಸಂಪೂರ್ಣ ನಿಷ್ಕ್ರಿಯವಾಗಿದೆ. ಸರ್ಕಾರಿ ಕೋವಿಡ್, ಅಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆಗಳು ಲಭ್ಯವಾಗುತ್ತಿಲ್ಲ. ಕೊರೊನಾ ರೋಗಿಗಳಿಗೆ ಜೀವರಕ್ಷಕ ಎಂದೇ ಪರಿಗಣಿಸಲಾಗಿರುವ ರೆಮಿಡಿಸಿವೀರ್ ಚುಚ್ಚುಮದ್ದು ಮತ್ತು ಇತರ ಕೆಲವು ಅಗತ್ಯ ಔಷಧಗಳು ಪರವಾನಗಿ ಪಡೆದ ಖಾಸಗಿ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಲಭ್ಯವಾಗುತ್ತಿಲ್ಲ. ಇದಕ್ಕೆ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.
Related Articles
Advertisement
ಕಳೆದ 3 ತಿಂಗಳಿಂದಲೂ ಕೋವಿಡ್ ಕುರಿತ ತಜ್ಞರ ಸಮಿತಿ 2ನೇ ಅಲೆಯ ಬಗ್ಗೆ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡುತ್ತಾ ಬಂದಿದ್ದರೂ ಸರ್ಕಾರ ಸಕಾಲದಲ್ಲಿ ಸೂಕ್ತವಾಗಿ ಸ್ಪಂದಿಸದೇ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೇ ಇದ್ದುದೇ ಈ ಪರಿಪ್ರಮಾಣದಲ್ಲಿ ಸೋಂಕು ಹೆಚ್ಚಳವಾಗಲು ಕಾರಣವಾಯಿತು. ದಿಕ್ಕು ತಪ್ಪಿದ ಸರ್ಕಾರದಿಂದ ಜನ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ನಿತ್ಯ 17-18 ಸಾವಿರ ಪ್ರಕರಣ ದಾಕಲಾಗುತ್ತಿರುವುದಕ್ಕೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ಇದು ಸಂಪೂರ್ಣ ಸರ್ಕಾರದ ವೈಫಲ್ಯವಾಗಿದೆ. ತಕ್ಷಣವೇ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಕೋವಿಡ್ ಸೋಂಕು ಪರೀಕ್ಷಾ ಪ್ರಯೋಗಾಲಯ, ಚಿಕಿತ್ಸಾ ಸೌಲಭ್ಯ ಕೇಂದ್ರ ತೆರೆಯಬೇಕು, ಸೋಂಕಿತರಿಗೆ ಅದರಲ್ಲೂ ರೋಗಲಕ್ಷಣ ಇರುವ ಸೋಂಕಿತರಿಗೆ ತಕ್ಷಣವೇ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಖಾತ್ರಿ ಪಡಿಸಬೇಕು, ಸೋಂಕಿತರ ಸಂಪರ್ಕಿತರ ಪತ್ತೆ, ಪರೀಕ್ಷೆಗೆ ಹೆಚ್ಚಿನ ಗಮನ ಹರಿಸಬೇಕು, ಉಚಿತ ಕರೆಯ ಸಹಾಯವಾಣಿ ಕೇಂದ್ರ ತೆರೆದು ಯಾವ ಯಾವ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದೆ. ಆಕ್ಸಿಜನ್ ಲಭ್ಯತೆ ಕುರಿತಂತೆ ಡ್ಯಾಷ್ ಬೋರ್ಡ್ ನಲ್ಲಿ ಮಾಹಿತಿಯನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.