Advertisement
1971ರಲ್ಲಿ ಶೇಖ್ ಮುಜಿಬುರ್ ರೆಹಮಾನ್ ನೇತೃತ್ವದಲ್ಲಿ ನಡೆದ ಬಾಂಗ್ಲಾ ವಿಮೋಚನ ಸ್ಮರಣೆ ದಿನ ಆ.15, ಮಾ.7ರಂದು ಮುಜಿ ಬುರ್ ರೆಹಮಾನ್ ಭಾಷಣ ಮಾಡಿದ ದಿನ ಸೇರಿ 8 ದಿನಗಳ ಆಚರಣೆ ರದ್ದಿಗೆ ತೀರ್ಮಾನಿಸಲಾಗಿದೆ. ಯೂನಸ್ ಫೇಸ್‌ಬುಕ್ ಪೇಜ್‌ನಲ್ಲಿ ಇದನ್ನು ಪ್ರಕಟಿಸಿದ್ದು, ಶೀಘ್ರವೇ ಆದೇಶ ಹೊರ ಡಿಸಲಾಗುತ್ತದೆ ಎನ್ನಲಾಗಿದೆ. ಇದನ್ನು ಮಾಜಿ ಪ್ರಧಾನಿ ಶೇಖ್ ಹಸೀನಾ ಪಕ್ಷ ಅವಾಮಿ ಲೀಗ್ ಟೀಕಿಸಿದೆ.
ದಂಗೆ ಬಳಿಕ ಅ.5ರಿಂದಲೂ ಮಾಜಿ ಪಿಎಂ ಹಸೀನಾ ಭಾರತದಲ್ಲೇ ಇದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಇದೇ ವೇಳೆ, ದಂಗೆ ಸಂಬಂಧ ಹಸೀನಾ ಸೇರಿ 46 ಮಂದಿ ವಿರುದ್ಧ ಬಾಂಗ್ಲಾದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ವಾರಂಟ್ ಹೊರಡಿಸಿದೆ.