Advertisement

ರಾಷ್ಟ್ರೀಯ ಬ್ಯಾಡ್ಮಿಂಟನ್‌: ಪ್ರಶಸ್ತಿ ಉಳಿಸಿಕೊಂಡ ಸೈನಾ ನೆಹ್ವಾಲ್‌

12:30 AM Feb 17, 2019 | |

ಗುವಾಹಟಿ: ರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೂಟದ ಫೈನಲ್‌ನಲ್ಲಿ ಗೆಲುವು ಸಾಧಿಸಿದ ಸೈನಾ ನೆಹ್ವಾಲ್‌ ಪ್ರಶಸ್ತಿ ಯನ್ನು ತಮ್ಮಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ನಡೆದ ವನಿತಾ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಸೈನಾ ನೆಹ್ವಾಲ್‌ ಅವರು ಪಿ.ವಿ. ಸಿಂಧು ಅವರನ್ನು 21-18, 21-15 ನೇರ ಗೇಮ್‌ಗಳಿಂದ ಸೋಲಿಸಿದರು. ಕಳೆದ ವರ್ಷ ಕೂಡ ಸಿಂಧು ಅವರನ್ನು ಕೆಡಹಿ ಸೈನಾ ಇಲ್ಲಿ ಪ್ರಶಸ್ತಿ ಜಯಿಸಿದ್ದರು. 2017ರಲ್ಲಿ ನಾಗ್ಪುರದಲ್ಲಿ ನಡೆದ ಫೈನಲ್‌ ಸ್ಪರ್ಧೆಯೇ ಇಲ್ಲಿ ಮರುಕಳಿಸಿದೆ. ಸೈನಾ ಮತ್ತೂಮ್ಮೆ ಈ ಕೂಟದಲ್ಲಿ ಸಿಂಧು ಅವರ ಎದುರು ಮೇಲುಗೈ ಸಾಧಿಸುವಲ್ಲಿ ಸಫ‌ಲರಾದರು. ಈ ಕೂಟದಲ್ಲಿ ಎರಡು ಬಾರಿ ಹಾಗೂ 2016ರ ರಿಯೊ ಒಲಿಂಪಿಕ್ಸ್‌
ನಲ್ಲಿ ಸಿಂಧು ಅವರು ಸೈನಾ ಎದುರು ಮುಗ್ಗರಿಸಿದ್ದಾರೆ.

Advertisement

ಪಂದ್ಯದ ಮೊದಲ ಗೇಮ್‌ನಲ್ಲಿ ಉತ್ತಮ ಆರಂಭ ಪಡೆದರೂ ಸಿಂಧುಗೆ ಸೈನಾರ ಸ್ಟ್ರೋಕ್‌ ಎದುರಿಸಲು ಎಡವಿದರು. ಸೈನಾ ನಿಧಾನಗತಿಯಲ್ಲಿ ಆಟ ಆರಂಭಿಸಿದ್ದರೂ ಸಿಂಧು ಜತೆ ಅವರು ತೀವ್ರ  ಪೈಪೋಟಿ ನಡೆಸಿದರು. ಮೊದಲ ಗೇಮ್‌ ವಿರಾಮದ ವೇಳೆ ಅಂಕಗಳು 11-11ರ ಸಮಬಲದಲ್ಲಿದ್ದವು. ಇದಾದ ಬಳಿಕ ಸಿಂಧು ಅವರ ಮೇಲೆ ಸವಾರಿ ಮಾಡಲಾರಂಭಿಸಿದ ಸೈನಾ 18-15 ಮುನ್ನಡೆ ಕಾಯ್ದುಕೊಂಡರು. ಅನಂತರ ಎರಡು ನೇರ ಪಾಯಿಂಟ್‌ ಗೆದ್ದ ಸಿಂಧು 17-18 ಅಂತರವನ್ನು ತಂದರು. ಆದರೂ ಸೈನಾ 21-18 ಅಂತರದಿಂದ ಮೊದಲ ಗೇಮ್‌ ತನ್ನದಾಗಿಸಿಕೊಂಡರು. 

3ನೇ ಬಾರಿ ಸೌರಭ್‌ಗೆ ಪ್ರಶಸ್ತಿ
ಮಧ್ಯಪ್ರದೇಶದ ಸೌರಭ್‌ ವರ್ಮ “ಹಿರಿಯರ ರಾಷ್ಟ್ರೀಯ ಬ್ಯಾಡ್ಮಿಂಟನ್‌’ ಕೂಟದಲ್ಲಿ 3ನೇ ಬಾರಿ ಚಾಂಪಿಯನ್‌ ಎನಿಸಿಕೊಂಡಿದ್ದಾರೆ.  ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಸೌರಭ್‌ ವರ್ಮ ಲಕ್ಷ್ಯ ಸೇನ್‌ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿದರು.  ಸೌರಭ್‌  ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರಲ್ಲದೇ ಜಾಣ್ಮೆಯ ತಂತ್ರಗಳಿಂದ ಏಶ್ಯನ್‌ ಜೂನಿಯರ್‌ ಚಾಂಪಿಯನ್‌ ಲಕ್ಷ್ಯ ಸೇನ್‌ ಅವರನ್ನು 21-18, 21-13 ಅಂಕಗಳಿಂದ ಮಣಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next