Advertisement

ಕಂದಕೂರರ “ಬೈಟ್‌ ಆಫ್‌ಲವ್‌’ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ

05:26 PM Mar 05, 2021 | Team Udayavani |

ಕೊಪ್ಪಳ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ಗ್ರೀನ್‌ ಗೋ ಕ್ಲಬ್‌ ವತಿಯಿಂದ ನಡೆದ ಪಿನ್‌ ಪಾಯಿಂಟ್‌-2021 ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ.

Advertisement

ಸ್ಪರ್ಧೆಯ”ತಾಯಿ ಮತ್ತು ಮಗು’ ವಿಭಾಗದಲ್ಲಿ ಅವರ ಬೈಟ್‌ ಆಫ್‌ಲವ್‌ ಶೀರ್ಷಿಕೆಯ ಚಿತ್ರ ಫೆಡರೇಷನ್‌ ಆಫ್‌ ಇಂಡಿಯನ್‌ ಫೋಟೋಗ್ರಾಫಿ ರಿಬ್ಬನ್‌ ಗೌರವಕ್ಕೆ ಪಾತ್ರವಾಗಿದೆ. ಇದಲ್ಲದೆ ವಿವಿಧ ವಿಭಾಗಗಳಲ್ಲಿ ಅವರ ಒಟ್ಟು ಏಳು ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.

ದೇಶದ ವಿವಿಧ ರಾಜ್ಯಗಳ ಜನ ಛಾಯಾಗ್ರಾಹಕರ 3,900ಕ್ಕೂ ಹೆಚ್ಚು ಛಾಯಾಚಿತ್ರಗಳು ಸ್ಪರ್ಧೆಗೆ ಆಗಮಿಸಿದ್ದವು. ಅಂತಾರಾಷ್ಟ್ರೀಯ ತೀರ್ಪುಗಾರರಾದ ಡಾ| ಬಿ.ಕೆ.ಸಿನ್ಹಾ, ಮಾನಸಿ ಚಟರ್ಜಿ,ಸುಬ್ರತ್‌ ಕುಮಾರ, ಸೌನಕ್‌ ಬ್ಯಾನರ್ಜಿ, ಸೌಗತ ಲಾಹಿರಿ, ಮಾನಸಿ ರಾಯ್‌,ಪಾರ್ಥಸಾರಥಿ ಸರ್ಕಾರ, ಅಸೀಮ್‌ ಕುಮಾರ್‌ ಚೌಧರಿ, ಶರ್ಮಾಲಿ ದಾಸ್‌ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ್ದರು.

ಏ.20ರಂದು ಕೋಲ್ಕತ್ತಾದಲ್ಲಿಛಾಯಾಚಿತ್ರ ಪ್ರದರ್ಶನ ಹಾಗೂ ಬಹುಮಾನ ವಿತರಣೆ ಸಮಾರಂಭನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next