Advertisement

200 ಕೆಂದ್ರಗಳಲ್ಲಿ ನೇಷನ್‌ ವಿತ್‌ ನಮೋ ಅಭಿಯಾನ

06:36 AM Jan 20, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಬಿಜೆಪಿ ಯುವ ಮೋರ್ಚಾ ಘಟಕ, ದೇಶದೆಲ್ಲೆಡೆ ನೇಷನ್‌ ವಿತ್‌ ನಮೋ ಅಭಿಯಾನ ಹಮ್ಮಿಕೊಂಡಿದೆ. ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ಪೂನಂ ಮಹಾಜನ್‌ ಅವರು ವೀಡಿಯೋ ಕಾನ್ಫರೆನ್ಸ್‌ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

Advertisement

ಯುವಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಇರುವ ಅಭಿಮಾನವನ್ನು ಮತಗಳನ್ನಾಗಿ ಪರಿವರ್ತಿಸುವುದು ಮತ್ತು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡಲು ದೇಶಾದ್ಯಂತ ಲಕ್ಷಾಂತರ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಅಭಿಯಾನ ಇದಾಗಿದೆ.

50 ಲಕ್ಷ ಯುವಕರನ್ನು ಜೋಡಿಸುವ ಗುರಿಯನ್ನು ಈ ಅಭಿಯಾನ ಹೊಂದಿದ್ದು, ಕರ್ನಾಟಕದಲ್ಲಿ 10 ಲಕ್ಷ ಯುವಕರು ಈ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ. ಚುನಾವಣೆ ತಯಾರಿಗೆ ಬಿಜೆಪಿ ರಾಷ್ಟ್ರೀಯ ಘಟಕದಿಂದ ನೀಡಿರುವ ಕಾರ್ಯ ಯೋಜನೆ ಭಾಗವಾಗಿ ಈ ಅಭಿಯಾನ ನಡೆಯುತ್ತಿದೆ.

ದೇಶದ 200 ಕೇಂದ್ರಗಳಲ್ಲಿ ನೇಷನ್‌ ವಿತ್‌ ನಮೋ ಅಭಿಯಾನ ಆರಂಭವಾಗಿದೆ ಎಂದು ಬಿಜೆಪಿ ತಿಳಿಸಿದೆ. ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ತಮ್ಮೇಶ್‌ಗೌಡ, ಉಪಾಧ್ಯಕ್ಷೆ ನಿಶ್ಚಿತಾ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಕರುಣಾಕರ್‌ ಅವರು ಭಾಗಿಯಾಗಿ ನೇಷನ್‌ ವಿತ್‌ ನಮೋ ಅಭಿಯಾನದ ವಿವರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next