Advertisement

1st Test; ನ್ಯೂಜಿಲ್ಯಾಂಡ್‌ ವಿರುದ್ಧ ಆಸ್ಟ್ರೇಲಿಯಕ್ಕೆ ಅಮೋಘ ಜಯ

10:35 AM Mar 03, 2024 | Team Udayavani |

ವೆಲ್ಲಿಂಗ್ಟನ್‌: 2 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಆಸ್ಟ್ರೇಲಿಯ 172 ರನ್ ಗಳ ಜಯ ಸಾಧಿಸಿದೆ.

Advertisement

4ನೇ ದಿನದಾಟಕ್ಕೆ ಪಂದ್ಯ ಮುಗಿದಿದ್ದು, ಪಾರ್ಟ್‌ಟೈಮ್‌ ಆಫ್ಸ್ಪಿನ್ನರ್‌ ಗ್ಲೆನ್‌ ಫಿಲಿಪ್ಸ್‌ 5 ವಿಕೆಟ್‌ ಉಡಾಯಿಸಿ ಆಸ್ಟ್ರೇಲಿಯವನ್ನು ಸಣ್ಣ ಮೊತ್ತಕ್ಕೆ ಹಿಡಿದು ನಿಲ್ಲಿಸಿದ್ದರು. ಆದರೆ ನ್ಯೂಜಿಲ್ಯಾಂಡ್‌ ಹಾದಿ ಕಠಿನವಾಯಿತು. 369 ರನ್‌ ಪಡೆದಿರುವ ಆತಿಥೇಯ ಕಿವೀಸ್‌ 3ನೇ ದಿನದ ಅಂತ್ಯಕ್ಕೆ 3 ವಿಕೆಟಿಗೆ 111 ರನ್‌ ಗಳಿಸಿತ್ತು. ಟಾಮ್‌ ಲ್ಯಾಥಂ (8), ವಿಲ್‌ ಯಂಗ್‌ (15) ಮತ್ತು ಕೇನ್‌ ವಿಲಿಯಮ್ಸನ್‌ (9) ಅವರ ಆಟ ಮುಗಿಸಿದ್ದರು. ಗೆಲ್ಲಲು 258 ರನ್‌ ಗಳಿಸಬೇಕಾದ ಸವಾಲಿತ್ತು. 56 ರನ್‌ ಮಾಡಿ ಆಡುತ್ತಿದ್ದ ಭರವಸೆಯ ಆಟಗಾರ ರಚಿನ್‌ ರವೀಂದ್ರ ಅವರನ್ನು ನಥನ್ ಲಿಯಾನ್ ಪೆವಿಲಿಯನ್ ಗೆ ಕಳುಹಿಸಿದರು. 12 ರನ್‌ ಗಳಿಸಿದ್ದ ಡ್ಯಾರಿಲ್‌ ಮಿಚೆಲ್‌ 38 ರನ್ ಗಳಿಸಿ ಔಟಾದರು.

ಆಸೀಸ್ ಪರ ಬಿಗಿ ದಾಳಿ ನಡೆಸಿದ ನಥನ್ ಲಿಯಾನ್ 6 ವಿಕೆಟ್ ಕಬಳಿಸಿ ನ್ಯೂಜಿಲ್ಯಾಂಡ್‌ ಗೆ ಘಾತಕವಾಗಿ ಪರಿಣಮಿಸಿದರು. ಲಿಯಾನ್ ಎರಡು ಇನ್ನಿಂಗ್ಸ್ ಗಳಲ್ಲಿ ಒಟ್ಟು 10 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ನಲ್ಲಿ ಅಜೇಯ 174 ರನ್ , ಎರಡನೇ ಇನ್ನಿಂಗ್ಸ್ ನಲ್ಲಿ 34 ರನ್ ಗಳಿಸಿದ್ದ ಆಸೀಸ್ ನ ಕ್ಯಾಮರೂನ್ ಗ್ರೀನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ 383 & 164
ನ್ಯೂಜಿಲ್ಯಾಂಡ್‌ 179 & 196

Advertisement
Advertisement

Udayavani is now on Telegram. Click here to join our channel and stay updated with the latest news.

Next