ದುಬಾೖ: ಬಾಂಗ್ಲಾದೇಶ ವಿರುದ್ಧದ ಚಿತ್ತಗಾಂಗ್ ಟೆಸ್ಟ್ ಪಂದ್ಯದಲ್ಲಿ 154 ರನ್ನಿಗೆ 13 ವಿಕೆಟ್ ಹಾರಿಸಿ ಸರಣಿ ಸಮಬಲದಲ್ಲಿ ಮಹತ್ವದ ಪಾತ್ರ ವಹಿಸಿದ ಆಸ್ಟ್ರೇಲಿಯದ ಸ್ಪಿನ್ನರ್ ನಥನ್ ಲಿಯೋನ್ ಮೊದಲ ಬಾರಿಗೆ ಟಾಪ್-10 ಬೌಲಿಂಗ್ ರ್‍ಯಾಂಕಿಂಗ್ ಯಾದಿ ಅಲಂಕರಿಸಿದ್ದಾರೆ. 9 ಸ್ಥಾನ ಮೇಲೇರಿದ ಲಿಯೋನ್ 8ನೇ ಸ್ಥಾನಕ್ಕೆ ಬಂದಿದ್ದಾರೆ. ಕಳೆದ ಮೇಯಲ್ಲಿ 12ನೇ ಸ್ಥಾನದಲ್ಲಿದ್ದುದು ಅವರ ಈವರೆಗಿನ ಅತ್ಯುತ್ತಮ ರ್‍ಯಾಂಕಿಂಗ್ ಆಗಿತ್ತು.
2 ಪಂದ್ಯಗಳ ಈ ಕಿರು ಸರಣಿಯಲ್ಲಿ ನಥನ್ ಲಿಯೋನ್ ಒಟ್ಟು 22 ವಿಕೆಟ್ ಉಡಾಯಿಸಿದರು. ಅವರ ಚಿತ್ತಗಾಂಗ್ ಸಾಧನೆ ಎನ್ನುವುದು ಏಶ್ಯದಲ್ಲಿ ಆಸ್ಟ್ರೇಲಿಯ ಬೌಲರ್ ಓರ್ವನ ಸರ್ವಶ್ರೇಷ್ಠ ಬೌಲಿಂಗ್ ಪರಾಕ್ರಮವಾಗಿ ದಾಖಲಾಗಿದೆ.
ಬ್ಯಾಟಿಂಗ್ ವಿಭಾಗದಲ್ಲಿ ಡೇವಿಡ್ ವಾರ್ನರ್ ಒಂದು ಸ್ಥಾನದ ನೆಗೆತದೊಂದಿಗೆ 5ನೇ ಸ್ಥಾನ ತಲುಪಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಒಂದು ಸ್ಥಾನ ಕುಸಿತ ಕಾಣಬೇಕಾಯಿತು. ಇವರಿಬ್ಬರ ನಡುವೆ ಕೇವಲ ಒಂದು ಅಂಕದ ವ್ಯತ್ಯಾಸವಷ್ಟೇ ಇದೆ. ಗ್ಲೆನ್ ಮ್ಯಾಕ್ಸ್‌ವೆಲ್ 16 ಸ್ಥಾನ (88ಕ್ಕೆ), ಆ್ಯಶrನ್ ಅಗರ್ 7 ಸ್ಥಾನ (77ಕ್ಕೆ) ಮೇಲೇರಿದ್ದಾರೆ.
ಬಾಂಗ್ಲಾದೇಶ ಪರ ನಾಯಕ ಮುಶ್ಫಿಕರ್ ರಹೀಂ ಒಂದು ಸ್ಥಾನ (22ಕ್ಕೆ), ಶಕಿಬ್ ಅಲ್ ಹಸನ್ 22 ಸ್ಥಾನಗಳ (73ಕ್ಕೆ) ಪ್ರಗತಿ ಸಾಧಿಸಿದ್ದಾರೆ.
5ಕ್ಕೆ ಇಳಿದ ಆಸ್ಟ್ರೇಲಿಯ
ಆದರೆ ಸರಣಿ ಸಮಬಲದ ಸಾಧನೆಯ ಹೊರತಾಗಿಯೂ ಆಸ್ಟ್ರೇಲಿಯ “ತಂಡ ರ್‍ಯಾಂಕಿಂಗ್’ನಲ್ಲಿ ಒಂದು ಸ್ಥಾನ ಕುಸಿದಿದೆ. ಕಾಂಗರೂ ಪಡೆ ಈಗ 5ನೇ ಸ್ಥಾನದಲ್ಲಿದೆ. 4ನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡಿನಷ್ಟೇ ಅಂಕಗಳನ್ನು ಹೊಂದಿದ್ದರೂ (97) ದಶಮಾಂಶ ಲೆಕ್ಕಾಚಾರದಲ್ಲಿ ಹಿಂದುಳಿದಿದೆ. ಈ ಸರಣಿಗೂ ಮುನ್ನ ಆಸ್ಟ್ರೇಲಿಯ 100 ಅಂಕ ಹೊಂದಿತ್ತು. ಇದೇ ವೇಳೆ ಬಾಂಗ್ಲಾದೇಶ 5 ಅಂಕಗಳೊಂದಿಗೆ ತನ್ನ ಒಟ್ಟು ಅಂಕವನ್ನು 74ಕ್ಕೆ ಏರಿಸಿಕೊಂಡರೂ 9ನೇ ಸ್ಥಾನದಲ್ಲೇ ಉಳಿದಿದೆ.
Related Articles
ಟಾಪ್-10 ಬ್ಯಾಟ್ಸ್‌ಮನ್: 1. ಸ್ಟೀವನ್ ಸ್ಮಿತ್ (936), 2. ಜೋ ರೂಟ್ (902), 3. ಕೇನ್ ವಿಲಿಯಮ್ಸನ್ (880), 4. ಚೇತೇಶ್ವರ್ ಪೂಜಾರ (876), 5. ಡೇವಿಡ್ ವಾರ್ನರ್ (807), 6. ವಿರಾಟ್ ಕೊಹ್ಲಿ (806), 7. ಅಜರ್ ಅಲಿ (769), 8. ಅಲಸ್ಟೇರ್ ಕುಕ್ (765), 9. ಹಾಶಿಮ್ ಆಮ್ಲ (764), 10. ಕೆ.ಎಲ್. ರಾಹುಲ್ (761).
ಟಾಪ್-10 ಬೌಲರ್: 1. ರವೀಂದ್ರ ಜಡೇಜ (884), 2. ಜೇಮ್ಸ್ ಆ್ಯಂಡರ್ಸನ್ (868), 3. ಆರ್. ಅಶ್ವಿನ್ (852), 4. ರಂಗನ ಹೆರಾತ್ (809), 5. ಜೋಶ್ ಹ್ಯಾಝಲ್‌ವುಡ್ (794), 6. ಕಾಗಿಸೊ ರಬಾಡ (785), 7. ಡೇಲ್ ಸ್ಟೇನ್ (763), 8. ನಥನ್ ಲಿಯೋನ್ (752), 9. ಸ್ಟುವರ್ಟ್ ಬ್ರಾಡ್ (747).