Advertisement

ನಟರಾಜನ್ ಶಸ್ತ್ರಚಿಕಿತ್ಸೆ ಯಶಸ್ವಿ : ಫಿಟ್ ಆಗಿ ಮತ್ತೆ ಬರುತ್ತೇನೆ ಎಂದ ವೇಗಿ

05:26 PM Apr 27, 2021 | Team Udayavani |

ಮುಂಬೈ: ಟೀಂ ಇಂಡಿಯಾ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ. ನಟರಾಜನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಐಪಿಎಲ್ ಪಂದ್ಯದ ವೇಳೆ ಅವರು ಗಾಯಗೊಂಡಿದ್ದರು.

Advertisement

ಈ ಬಾರಿಯ ಐಪಿಎಲ್ ನಲ್ಲಿ ಮೊದಲೆರಡು ಪಂದ್ಯಗಳಲ್ಲಿ ನಟರಾಜನ್ ಹೈದರಾಬಾದ್ ತಂಡದ ಪರ ಕಣಕ್ಕಿಳಿದಿದ್ದರು. ಆದರೆ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದ ಅವರು ಕೂಟದಿಂದಲೇ ಹೊರಬಿದ್ದಿದ್ದರು.

ಇದನ್ನೂ ಓದಿ:ಐಪಿಎಲ್ ನಲ್ಲಿ ಆಡುತ್ತಿರುವ ತನ್ನ ದೇಶದ ಆಟಗಾರರಿಗೆ ಶಾಕ್ ನೀಡಿದ ಆಸೀಸ್ ಸರ್ಕಾರ!

ನಟರಾಜನ್ ಗೆ ಇಂದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಅವರೇ ಬರೆದುಕೊಂಡಿದ್ದಾರೆ. ನುರಿತ ವೈದ್ಯರು ಮತ್ತು ಸಿಬ್ಬಂದಿಗಳಿಗೆ ನಾನು ಆಭಾರಿಯಾಗಿದ್ದೇನೆ. ನನಗೆ ಹಾರೈಸಿದ ಎಲ್ಲರಿಗೂ ಮತ್ತು ಬೆಂಬಲಿಸಿದ ಬಿಸಿಸಿಐಗೆ ಧನ್ಯವಾದಗಳು. ಮತ್ತೆ ಮೈದಾಕ್ಕೆ ಇಳಿಯಲು ಕೆಲವು ದಿನಗಳು ಬೇಕಾಗಬಹುದು. ಆದರೆ ಹಿಂದೆಂದಿಗಿಂತಲೂ ಫಿಟ್ ಆಗಿ ಮತ್ತೆ ಬರುತ್ತೇನೆ ಎಂದಿದ್ದಾರೆ.

ಕಳೆದ ಬಾರಿಯ ಐಪಿಎಲ್ ನಲ್ಲಿ ಮಿಂಚಿದ್ದ ನಟರಾಜನ್ ಟೀಂ ಇಂಡಿಯಾಗೆ ಪ್ರವೇಶ ಪಡೆದಿದ್ದರು. ಆಸೀಸ್ ಸರಣಿಯಲ್ಲಿ ಮೂರು ಮಾದರಿಯಲ್ಲೂ ಪದಾರ್ಪಣೆ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next