Advertisement

ನಾಸಿಕ್‌ನಿಂದ ಟೊಮೇಟೊ: ದರ ಕೊಂಚ ಇಳಿಕೆ

01:10 AM Nov 25, 2021 | Team Udayavani |

ಉಡುಪಿ: ಜಿಲ್ಲೆಯ ಮಾರುಕಟ್ಟೆಗಳಿಗೆ ಮಂಗಳವಾರ ಮಹಾರಾಷ್ಟ್ರದ ನಾಸಿಕ್‌ನಿಂದ ಟೊಮೇಟೊ ಪೂರೈಕೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಏರಿಕೆ ಕಂಡಿದ್ದ ಟೊಮೇಟೊ ದರ ಕೊಂಚ ಇಳಿಕೆಯಾಗಿದೆ.

Advertisement

ಮಂಗಳವಾರ ತಡರಾತ್ರಿ ಜಿಲ್ಲೆಗೆ ಆಗಮಿಸಿದ ಟೊಮೇಟೊ ಟ್ರಕ್‌ಗಳು ಉಡುಪಿ ಜಿಲ್ಲಾ ಮಾರುಕಟ್ಟೆ, ಕಾರ್ಕಳ, ಕುಂದಾಪುರ ಭಾಗದ ಮಾರುಕಟ್ಟೆಗೂ ಪೂರೈಕೆ ಮಾಡಲಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ನಗರದ ಮಾರುಕಟ್ಟೆಯಲ್ಲಿ 100-110 ರೂ., ಇದ್ದ ಟೊಮೇಟೊ ದರ 80-90 ರೂ.ಗಳಿಗೆ ಇಳಿಕೆಯಾಗಿದೆ. ಕೆಲವು ತರಕಾರಿ ಅಂಗಡಿಗಳಲ್ಲಿ ಸ್ಥಳೀಯ ಟೊಮೇಟೊ 110-120 ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯ ಟೊಮೇಟೊ ಪೂರೈಕೆಯಲ್ಲಿ ಕೊರತೆಯಾದರೆ ದರ ಹೆಚ್ಚಳವಾಗುತ್ತದೆ.

ಮಹಾರಾಷ್ಟ್ರ ನಾಸಿಕ್‌ನಿಂದ ಪೂರೈಕೆಯಾದಾಗ ಸ್ವಲ್ಪ ಮಟ್ಟಿಗೆ ದರ ಕಡಿಮೆಯಾಗುತ್ತದೆ ಎಂದು ನಗರದ ತರಕಾರಿ ವ್ಯಾಪಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಕೋವಿಡ್ ಸೋಂಕು ಪರೀಕ್ಷೆ ಕಡಿಮೆಯಾಗಿದೆ; 13 ರಾಜ್ಯಗಳಿಗೆ ಕೇಂದ್ರದ ಮುನ್ನೆಚ್ಚರಿಕೆ

Advertisement

ತರಕಾರಿಯಲ್ಲಿ ಬೀನ್ಸ್‌ 80 ರೂ., ತೊಂಡೆಕಾಯಿ 100, ಸೌತೆಕಾಯಿ 50, ಅಳಸಂಡೆ 80, ಸೌತೆಕಾಯಿ 50-60, ಬೀಟ್‌ರೂಟ್‌ 50, ದೊಣ್ಣೆ ಮೆಣಸು 100, ಹೀರೆಕಾಯಿ 80, ಹೂಕೋಸು 60 ರೂ., ದರವಿದೆ.

ಕರಾವಳಿ ಜಿಲ್ಲೆಗಳಿಗೆ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ ನ್ಯಾಮತಿ ಭಾಗದಿಂದ ಹೆಚ್ಚು ತರಕಾರಿ ಪೂರೈಕೆಯಾಗುತ್ತದೆ.

ಘಟ್ಟ ಭಾಗದಲ್ಲಿ ಅಕಾಲಿಕ ಮಳೆ ಪರಿಣಾಮ ತರಕಾರಿ ಕೃಷಿ ಬೆಳೆಗಳಿಗೆ ಹಾನಿಯಾಗಿ ಇಳುವರಿ ಕೊರತೆ ಸಂಭವಿಸಿರುವುದು ದರ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next