Advertisement

ಕಾಂಗ್ರೆಸ್‌ಗೆ ಡಾ|ನಸೀರ್‌ ಅಹ್ಮದ್‌ ವಿದಾಯ 

05:23 PM Mar 23, 2022 | Team Udayavani |

ದಾವಣಗೆರೆ: ಕಾಂಗ್ರೆಸ್‌ ನಡೆಯಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮೌಲಾನಾ ಆಜಾದ್‌ ಸಂಸ್ಥೆಯ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ| ಸಿ.ಆರ್‌. ನಸೀರ್‌ ಅಹ್ಮದ್‌ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಶಕಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿ ಕೇಂದ್ರ ಮತ್ತು ರಾಜ್ಯದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಕೆಲವು ವಿಚಾರಗಳಲ್ಲಿ ಬೇಸರವಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ದಾವಣಗೆರೆ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ ಅವರಿಗೆ ಇ-ಮೇಲ್‌ ಮೂಲಕ ರವಾನಿಸಿದ್ದೇನೆ. ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವ ಬಗ್ಗೆ ಈವರೆಗೆ ನಿರ್ಧಾರ ಮಾಡಿಲ್ಲ ಎಂದರು.

ಮುಸ್ಲಿಮರು ಕೆಲವೇ ಪಕ್ಷಗಳಿಗೆ ಸೀಮಿತವಾಗಬಾರದು. ಎಲ್ಲ ರಾಜಕೀಯ ಪಕ್ಷಗಳಲ್ಲಿರಬೇಕು. ಆಗ ಮಾತ್ರ ಎಲ್ಲ ಪಕ್ಷಗಳಿಂದ ನಮ್ಮ ಸಮುದಾಯದ ಅಭಿವೃದ್ಧಿಗೆ ಸಹಕಾರ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂಗೀತ ಸಂಜೆ

ಗಾನಕೋಗಿಲೆ ದಿ| ಲತಾ ಮಂಗೇಶ್ಕರ್‌ ಸ್ಮರಣಾರ್ಥ ನಗರದ ಶಿವಯೋಗಿ ಮಂದಿರದಲ್ಲಿ ಸಂಗೀತ ಸಂಜೆ ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಕಿಶೋರ್‌ಕುಮಾರ್‌ ಅವರ ಪುತ್ರ ಅಮಿತ್‌ಕುಮಾರ್‌, ಶಬ್ಬೀರ್‌ ಕುಮಾರ್‌, ಆಶಾ ಭೋಸ್ಲೆ ಅವರನ್ನು ಆಹ್ವಾನಿಸಲಾಗಿದೆ. ಅವರ ದಿನಾಂಕ ಅಂತಿಮಗೊಂಡ ನಂತರ ಕಾರ್ಯಕ್ರಮದ ದಿನಾಂಕ ನಿಗದಿಪಡಿಸಲಾಗುವುದು ಎಂದು ಡಾ| ಸಿ.ಆರ್‌. ನಸೀರ್‌ ಅಹ್ಮದ್‌ ತಿಳಿಸಿದರು.

Advertisement

ಮೌಲಾನಾ ಆಜಾದ್‌ ಸಂಸ್ಥೆಯಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪರೀಕ್ಷಾ ಪರಿಕರಗಳನ್ನು ವಿತರಿಸಲಾಗುವುದು. ಪ್ರತಿ ವರ್ಷ ಹತ್ತು ಸಾವಿರ ಮಕ್ಕಳಿಗೆ ಪರೀಕ್ಷಾ ಪರಿಕರಗಳನ್ನು ನೀಡಲಾಗುತ್ತಿದೆ. ಈ ಬಾರಿ ಸಹ ಮಕ್ಕಳಿಗೆ ಪರೀಕ್ಷಾ ಪರಿಕರಗಳನ್ನು ವಿತರಿಸಲಾಗುವುದು. ಮಾ. 28ರಂದು ವಿರಕ್ತ ಮಠದ ಬಸವಪ್ರಭು ಶ್ರೀಗಳಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು. ಮೌಲಾನಾ ಆಜಾದ್‌ ಸಂಸ್ಥೆಯ ನಿರ್ದೇಶಕ ಬರ್ಕತ್‌ ಅಲಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next