Advertisement

ಪಾಕಿಸ್ಥಾನ ಅಂಡರ್ 19 ವಿಶ್ವಕಪ್  ತಂಡಕ್ಕೆ ಅಯ್ಕೆಯಾದ ವೇಗಿ ನಸೀಂ ಶಾ

10:07 AM Dec 07, 2019 | Team Udayavani |

ಲಾಹೋರ್: ಪಾಕಿಸ್ಥಾನದ ಯುವ ಬೌಲರ್, ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡಿದ ನಸೀಂ ಶಾ ಅಂಡರ್ 19 ವಿಶ್ವಕಪ್ ಗೆ ಆಯ್ಕೆಯಾಗಿದ್ದಾರೆ.

Advertisement

ಮುಂದಿನ ತಿಂಗಳಿನಲ್ಲಿ ನಡೆಯಲಿರುವ ವಿಶ್ವಕಪ್ ಗೆ ಪಾಕಿಸ್ಥಾನ 15 ಜನರ ತಂಡವನ್ನು ಪ್ರಕಟಿಸಿದ್ದು, ಅದರಲ್ಲಿ ವೇಗಿ ನಸೀಂ ಶಾ ಸ್ಥಾನ ಪಡೆದಿದ್ದಾರೆ.

ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಾಕಿಸ್ಥಾನ ತಂಡದ ಪರವಾಗಿ ಆಡಿದ್ದ 16 ವರ್ಷದ ವೇಗಿ ನಸೀಂ ಶಾ ಮೊದಲ ಪಂದ್ಯದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಪಡೆದು ಮಿಂಚಿದ್ದರು.

ವಿಕೆಟ್ ಕೀಪರ್ ಬ್ಯಾಟ್ಸಮನ್ ರೊಹಾಲಿ ನಝಿರ್ ಪಾಕಿಸ್ಥಾನ ತಂಡವನ್ನು ಮುನ್ನಡೆಸಲಿದ್ದು, ಆರಂಭಿಕ ಆಟಗಾರ ಹೈದರ್ ಆಲಿ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ  ಜನವರಿ 17ರಿಂದ ಫೆಬ್ರವರಿ 9ರವರೆಗೆ  ಕಿರಿಯರ ವಿಶ್ವಕಪ್ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next