Advertisement

ಪ್ರವಾದಿ ಅವಹೇಳನ ವಿವಾದ: ಇಸ್ಲಾಮ್ ರಾಷ್ಟ್ರಗಳ ಟೀಕೆ ಸಂಕುಚಿತ ಮನಸ್ಸಿನದ್ದು: ಭಾರತ

01:09 AM Jun 07, 2022 | Team Udayavani |

ನವದೆಹಲಿ: ಸುದ್ದಿ ವಾಹಿನಿಯೊಂದರಲ್ಲಿ ಪ್ರವಾದಿ ಮುಹಮ್ಮದ್ ಅವರ ಕುರಿತ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಇಸ್ಲಾಮ್ ರಾಷ್ಟ್ರಗಳ ಸಹಕಾರ ಒಕ್ಕೂಟ( ಒಐಸಿ) ನೀಡಿರುವ ಪ್ರತಿಕ್ರಿಯೆಗೆ ಭಾರತ ಸರ್ಕಾರ ಸೋಮವಾರ (ಜೂನ್ 06) ತಿರುಗೇಟು ನೀಡಿದ್ದು, ಐಒಸಿ ಟೀಕೆ “ಅನಗತ್ಯವಾದದ್ದು ಮತ್ತು ಸಂಕುಚಿತ ಮನಸ್ಸಿನದ್ದಾಗಿದೆ” ಎಂದು ಹೇಳಿದೆ.

Advertisement

ಇದನ್ನೂ ಓದಿ:ಚಾಮುಂಡೇಶ್ವರಿಯ ಮತದಾರರು ಸಿದ್ದರಾಮಯ್ಯ ಚಡ್ಡಿ,ಪಂಚೆ ಕಳಚಿದ್ದಾರೆ: ಸಚಿವ ಜೋಶಿ

ನೂಪುರ್ ಅವರ ವಿವಾದಿತ ಹೇಳಿಕೆ ಕುರಿತು ಐಒಸಿಯ ಜನರಲ್ ಸೆಕ್ರೆಟರಿಯೇಟ್ ನೀಡಿರುವ ಪ್ರತಿಕ್ರಿಯೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಾಮ್ ಬಾಗ್ಚಿ, ಭಾರತದ ಬಗ್ಗೆ ಇಸ್ಲಾಮ್ ರಾಷ್ಟ್ರಗಳ ಸಹಕಾರ ಒಕ್ಕೂಟ ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇವೆ. ಆದರೆ ಐಒಸಿಯ ಅನಗತ್ಯವಾದ ಮತ್ತು ಸಂಕುಚಿತ ಮನಸ್ಸಿನ ಟೀಕೆಯನ್ನು ಸಾರಸಗಟಾಗಿ ತಿರಸ್ಕರಿಸುವುದಾಗಿ ತಿಳಿಸಿದ್ದಾರೆ.

ಭಾರತ ಎಲ್ಲಾ ಧರ್ಮದವರ ಬಗ್ಗೆಯೂ ಅಪಾರ ಗೌರವ ಹೊಂದಿದೆ. ಯಾವುದೇ ಒಂದು ಧರ್ಮವನ್ನು ಗುರಿಯಾಗಿರಿಸಿಕೊಂಡು ದ್ವೇಷ ಸಾಧಿಸುತ್ತಿಲ್ಲ ಎಂದು ತಿಳಿಸಿದೆ. ಅಲ್ಲದೇ ಧಾರ್ಮಿಕ ಮುಖಂಡರನ್ನು ನಿಂದಿಸುವ, ಧರ್ಮವನ್ನು ಅವಹೇಳನ ಮಾಡುವ ಆಕ್ಷೇಪಾರ್ಹ ಟ್ವೀಟ್ ಮತ್ತು ಹೇಳಿಕೆಯನ್ನು ಕೆಲವು ವ್ಯಕ್ತಿಗಳು ನೀಡಿದ್ದಾರೆ. ಅವು ಯಾವುದೇ ರೀತಿಯಲ್ಲೂ ಭಾರತ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಅಂತಹ ಹೇಳಿಕೆಯನ್ನು ಕೊಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಾಗ್ಚಿ ಸ್ಪಷ್ಟನೆ ನೀಡಿದ್ದಾರೆ.

ವಿವಾದಿತ ಹೇಳಿಕೆ ಬಗ್ಗೆ ಇಸ್ಲಾಮ್ ರಾಷ್ಟ್ರಗಳ ಸಹಕಾರ ಒಕ್ಕೂಟ ಮತ್ತೊಮ್ಮೆ ಇಂತಹ ಪ್ರತಿಕ್ರಿಯೆ ನೀಡಿರುವುದು ದುರದೃಷ್ಟಕರವಾಗಿದೆ. ಇದೊಂದು ಭಾರತದ ಕುರಿತ ಪೂರ್ವಾಗ್ರಹ ಪೀಡಿತ ಟೀಕೆಯಾಗಿದೆ ಎಂದು ಭಾರತ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಕಾನ್ಪುರ್ ಹಿಂಸಾಚರಕ್ಕೆ ಕಾರಣವಾದ ನೂಪುರ್ ಶರ್ಮಾ ಅವರನ್ನು ಬಿಜೆಪಿ ತನ್ನ ವಕ್ತಾರೆ ಸ್ಥಾನದಿಂದ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿತ್ತು. ಅಷ್ಟೇ ಅಲ್ಲ ದಿಲ್ಲಿ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ವಜಾ ಮಾಡಿ ಆದೇಶ ಹೊರಡಿಸಿತ್ತು.

ನಿಮ್ಮಿಂದ ಪಾಠ ಕಲಿಯಬೇಕಿಲ್ಲ:
ಪಾಕಿಸ್ಥಾನಕ್ಕೆ ಭಾರತ ತಿರುಗೇಟು
ಬಿಜೆಪಿ ನಾಯಕರ ಹೇಳಿಕೆಯನ್ನು ಖಂಡಿಸಿ ಪಾಕ್‌ ಪ್ರಧಾನಿ ಶೆಹಬಾದ್‌ ಶ‌ರೀಫ್ ಟ್ವೀಟ್‌ ಮಾಡಿದ್ದು, ಅದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. “ಅಲ್ಪಸಂಖ್ಯಾಕರ ಹಕ್ಕುಗಳ ಉಲ್ಲಂಘನೆಯಲ್ಲಿ ದಾಖಲೆ ಬರೆದಿರುವ ದೇಶದಿಂದ ಪಾಠ ಕಲಿಯಬೇಕಾದ ಆವಶ್ಯಕತೆ ನಮಗಿಲ್ಲ. ಹಿಂದೂಗಳು, ಸಿಕ್ಖರು, ಕ್ರೈಸ್ತರು ಮತ್ತು ಅಹ್ಮದಿಯಾಗಳನ್ನು ಪಾಕಿಸ್ಥಾನದಲ್ಲಿ ಹೇಗೆ ವ್ಯವಸ್ಥಿತವಾಗಿ ಹಿಂಸಿಸಲಾಗುತ್ತಿದೆ ಎನ್ನುವುದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಗಿc ಹೇಳಿದ್ದಾರೆ. ಭಾರತದಲ್ಲಿ ಕೋಮುಸಾಮರಸ್ಯ ಕದಡಲು ಯತ್ನಿಸುವ ಬದಲು ನಿಮ್ಮ ದೇಶದಲ್ಲಿರುವ ಅಲ್ಪಸಂಖ್ಯಾಕರ ಸುರಕ್ಷತೆ, ಕ್ಷೇಯೋಭಿವೃದ್ಧಿಯ ಕಡೆಗೆ ಗಮನ ಕೊಡಿ. ಭಾರತ ಸರಕಾರವು ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ. ನಿಮ್ಮಂತೆ ಮತಾಂಧರನ್ನು ಸ್ತುತಿಸುತ್ತಾ, ಅವರಿಗಾಗಿ ಸ್ಮಾರಕಗಳನ್ನು ನಿರ್ಮಿಸುವುದಿಲ್ಲ ಎಂದೂ ಬಗಿc ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next