Advertisement
ಇದನ್ನೂ ಓದಿ:ಚಾಮುಂಡೇಶ್ವರಿಯ ಮತದಾರರು ಸಿದ್ದರಾಮಯ್ಯ ಚಡ್ಡಿ,ಪಂಚೆ ಕಳಚಿದ್ದಾರೆ: ಸಚಿವ ಜೋಶಿ
Related Articles
Advertisement
ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಕಾನ್ಪುರ್ ಹಿಂಸಾಚರಕ್ಕೆ ಕಾರಣವಾದ ನೂಪುರ್ ಶರ್ಮಾ ಅವರನ್ನು ಬಿಜೆಪಿ ತನ್ನ ವಕ್ತಾರೆ ಸ್ಥಾನದಿಂದ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿತ್ತು. ಅಷ್ಟೇ ಅಲ್ಲ ದಿಲ್ಲಿ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ವಜಾ ಮಾಡಿ ಆದೇಶ ಹೊರಡಿಸಿತ್ತು.
ನಿಮ್ಮಿಂದ ಪಾಠ ಕಲಿಯಬೇಕಿಲ್ಲ: ಪಾಕಿಸ್ಥಾನಕ್ಕೆ ಭಾರತ ತಿರುಗೇಟು
ಬಿಜೆಪಿ ನಾಯಕರ ಹೇಳಿಕೆಯನ್ನು ಖಂಡಿಸಿ ಪಾಕ್ ಪ್ರಧಾನಿ ಶೆಹಬಾದ್ ಶರೀಫ್ ಟ್ವೀಟ್ ಮಾಡಿದ್ದು, ಅದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. “ಅಲ್ಪಸಂಖ್ಯಾಕರ ಹಕ್ಕುಗಳ ಉಲ್ಲಂಘನೆಯಲ್ಲಿ ದಾಖಲೆ ಬರೆದಿರುವ ದೇಶದಿಂದ ಪಾಠ ಕಲಿಯಬೇಕಾದ ಆವಶ್ಯಕತೆ ನಮಗಿಲ್ಲ. ಹಿಂದೂಗಳು, ಸಿಕ್ಖರು, ಕ್ರೈಸ್ತರು ಮತ್ತು ಅಹ್ಮದಿಯಾಗಳನ್ನು ಪಾಕಿಸ್ಥಾನದಲ್ಲಿ ಹೇಗೆ ವ್ಯವಸ್ಥಿತವಾಗಿ ಹಿಂಸಿಸಲಾಗುತ್ತಿದೆ ಎನ್ನುವುದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗಿc ಹೇಳಿದ್ದಾರೆ. ಭಾರತದಲ್ಲಿ ಕೋಮುಸಾಮರಸ್ಯ ಕದಡಲು ಯತ್ನಿಸುವ ಬದಲು ನಿಮ್ಮ ದೇಶದಲ್ಲಿರುವ ಅಲ್ಪಸಂಖ್ಯಾಕರ ಸುರಕ್ಷತೆ, ಕ್ಷೇಯೋಭಿವೃದ್ಧಿಯ ಕಡೆಗೆ ಗಮನ ಕೊಡಿ. ಭಾರತ ಸರಕಾರವು ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ. ನಿಮ್ಮಂತೆ ಮತಾಂಧರನ್ನು ಸ್ತುತಿಸುತ್ತಾ, ಅವರಿಗಾಗಿ ಸ್ಮಾರಕಗಳನ್ನು ನಿರ್ಮಿಸುವುದಿಲ್ಲ ಎಂದೂ ಬಗಿc ಕಿಡಿಕಾರಿದ್ದಾರೆ.