Advertisement

ಮದುವೆ ಮೆರವಣಿಗೆಯಲ್ಲಿ ಕುದುರೆ ಗಾಡಿಗೆ ಬೆಂಕಿ : ಸ್ವಲ್ಪದರಲ್ಲೇ ಪಾರಾದ ಮದುಮಗ

01:09 PM Dec 16, 2021 | Team Udayavani |

ಗುಜರಾತ್ : ಮದುವೆಗೆ ಮದುಮಗನನ್ನು ಕರೆತರುತ್ತಿದ್ದ ಕುದುರೆ ಗಾಡಿಗೆ ಬೆಂಕಿ ಹತ್ತಿಕೊಂಡು ಮದುಮಗ ಹಾಗೂ ಸಂಬಂಧಿಕರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಘಟನೆ ಗುಜರಾತ್ ನ ಪಂಚಮಹಲ್ ಜಿಲ್ಲೆಯಲ್ಲಿ ನಡೆದಿದೆ.

Advertisement

ಮದುವೆಯಲ್ಲಿ ವದು, ವರರು ಮದುವೆ ಮಂಟಪಕ್ಕೆ ಬರುವಾಗ ವಿಶೇಷವಾದ ರೀತಿಯಲ್ಲಿ ಪ್ರವೇಶಿಸುತ್ತಾರೆ ಕೆಲವರು ತೆರೆದ ವಾಹನದ ಮೂಲಕ ಬರುತ್ತಾರೆ, ಇನ್ನು ಕೆಲವರು ಬೈಕ್ ಮೂಲಕ ಹಾಗೆ ನಾನಾ ರೀತಿಯಲ್ಲಿ ಬರುವುದು ವಿಶೇಷ. ಅದೇ ರೀತಿ ಗುಜರಾತ್ ನಲ್ಲಿ ನಡೆದ ಮದುವೆಯೊಂದರಲ್ಲಿ ಮದುಮಗ ಕುದುರೆ ಗಾಡಿಯಲ್ಲಿ ಬಂದಿದ್ದಾನೆ. ಕುದುರೆ ಗಾಡಿಯ ಎದುರು ವರನ ಕಡೆಯವರು ಮೆರವಣಿಗೆಯಲ್ಲಿ ಪಟಾಕಿ ಸಿಡಿಸುತ್ತಾ ನೃತ್ಯ ಮಾಡುತ್ತಾ ಸಂಭ್ರಮದಲ್ಲಿ ಹೆಜ್ಜೆ ಹಾಕುತ್ತ ಮುಂದೆ ಸಾಗಿದರೆ ಹಿಂದಿನಿಂದ ಬರುತ್ತಿದ್ದ ವರನ ಗಾಡಿಗೆ ಅದೆಲ್ಲಿಂದಲೋ ಬೆಂಕಿ ಹತ್ತಿಕೊಂಡಿದೆ. ಇತ್ತ ಕುದುರೆ ಗಾಡಿಯಲ್ಲಿ ಮದುಮಗ ಹಾಗೂ ಮದುಮಗನ ಹತ್ತಿರದ ಸಂಬಂಧಿಗಳ ಮಕ್ಕಳು ಗಾಡಿಯೊಳಗಿದ್ದರು. ಬೆಂಕಿ ಆವರಿಸಿದ ಕೂಡಲೇ ಅಲ್ಲಿದ್ದವರು ಮದುಮಗ ಹಾಗೂ ಗಾಡಿಯಲ್ಲಿದ್ದವರನ್ನು ಪಾರು ಮಾಡಿದ್ದರಿಂದ ಕೊದಲೆಳೆಯ ಅಂತರದಲ್ಲಿ ಮದುಮಗ ಪಾರಾಗಿದ್ದಾನೆ.

ಬೆಂಕಿಹತ್ತಿಕೊಳ್ಳುತ್ತಿದ್ದಂತೆ ಗಾಡಿಗೆ ಕಟ್ಟಿದ್ದ ಕುದುರೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿ ಸಂಭವನೀಯ ಅಪಾಯವನ್ನು ತಪ್ಪಿಸಿದ್ದಾರೆ.

ಇದನ್ನೂ ಓದಿ : ಸುವರ್ಣ ವಿಧಾನಸೌಧದೆದುರು ಹೈಡ್ರಾಮಾ : ಕೈ ನಾಯಕರಿಂದ ಮುತ್ತಿಗೆ ಯತ್ನ

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next