Advertisement

ನಂದೂರ್‌ಬಾರ್‌ ಬೋಟ್‌ ದುರಂತ : ಮೃತರ ಸಂಖ್ಯೆ 7ಕ್ಕೆ

01:56 PM Jan 16, 2019 | udayavani editorial |

ನಂದೂರ್‌ಬಾರ್‌ : ಮಹಾರಾಷ್ಟ್ರದ ನಂದೂರ್‌ಬಾರ್‌ ಜಿಲ್ಲೆಯ ನರ್ಮದಾ ನದಿಯಲ್ಲಿ ಬೋಟ್‌ ಮುಳುಗಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ. 

Advertisement

ಇಂದು ಬುಧವಾರ ಇನ್ನೂ ಇಬ್ಬರು ಮಕ್ಕಳ ಶವಗಳನ್ನು ಮೇಲಕ್ಕೆತ್ತಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಬೋಟ್‌ ಮಾಲಕನ ವಿರುದ್ಧ ಕೊಲೆ ಅಲ್ಲದ ನರಹತ್ಯೆ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದವರು ಹೇಳಿದ್ದಾರೆ. 

ಈ ಬೋಟ್‌ ದುರಂತದಲ್ಲಿ ಮೃತಪಟ್ಟವರಲ್ಲಿ ಆರು ಮಂದಿ ಅಪ್ರಾಪ್ತ ವಯಸ್ಸಿನವರು (ಒಂದರಿಂದ 14 ವರ್ಷ ಪ್ರಾಯದೊಳಗಿನವರು). ಮೃತರಲ್ಲಿ 55ರ ಹರೆಯದ ಓರ್ವ ಮಹಿಳೆ ಕೂಡ ಸೇರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next