Advertisement
ನರಿಕೊಂಬು ಗ್ರಾಮವು ನಗರದ ಸನಿಹ ದಲ್ಲೇ ಇದ್ದರೂ ಸದ್ಯದ ಪರಿಸ್ಥಿತಿ ಯಲ್ಲಿ ಯಾವುದೇ ಬಸ್ಸುಗಳು ಗ್ರಾಮವನ್ನು ಪ್ರವೇಶಿಸುತ್ತಿಲ್ಲ. ಹೀಗಾಗಿ ಸಾಕಷ್ಟು ಮಂದಿಗೆ ಕೆಲಸಕ್ಕೆ ಹೋಗು ವು ದಕ್ಕೆ ತೊಂದರೆ ಯಾಗುತ್ತದೆ. ಗ್ರಾಮದ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಬರುವು ದಕ್ಕೂ ತೊಂದರೆ ಇದೆ. ಕೊರೊನಾ ಪೂರ್ವ ದಲ್ಲಿ ಖಾಸಗಿ ಬಸ್ಸು ಗಳಿದ್ದರೂ ಅದರ ಬಳಿಕ ನಿಂತು ಹೋಗಿದೆ. ಹೀಗಾಗಿ ದಿನದ ಮೂರು ಹೊತ್ತಾ ದರೂ ನಮ್ಮೂರಿಗೆ ಸರಕಾರಿ ಬಸ್ಸು ಬರ ಬೇಕು ಎಂಬ ಬೇಡಿಕೆ ಸ್ಥಳೀಯ ನಾಗರಿಕರದ್ದಾಗಿದೆ.
Related Articles
Advertisement
ಕೃಷಿಯೇ ಗ್ರಾಮದ ಜನತೆಯ ಪ್ರಧಾನ ಆದಾಯದ ಮೂಲ ವಾಗಿದ್ದು, ಒಂದಷ್ಟು ಮಂದಿ ಹೊರಗಡೆ ಯಲ್ಲಿ ಉದ್ಯಮವನ್ನೂ ನಡೆಸುವವರಿದ್ದಾರೆ. ಗ್ರಾಮವು ನಗರಕ್ಕೆ ಹೊಂದಿ ಕೊಂಡಿ ರುವು ದರಿಂದ 94ಸಿ ನಿವೇಶನ ವಿತರಣೆಗೆ ಇಲ್ಲಿ ಅವಕಾಶವಿಲ್ಲ. ಇದೇ ಕಾರಣಕ್ಕೆ ಇನ್ನೂ ಒಂದಷ್ಟು ತಾಂತ್ರಿಕ ತೊಂದರೆಗಳು ಗ್ರಾಮ ಸ್ಥರನ್ನು ಕಾಡುತ್ತಿರುವುದು ಕೂಡ ಸುಳ್ಳಲ್ಲ.
ಧಾರ್ಮಿಕ ತಾಣಗಳ ಗ್ರಾಮ
ಗ್ರಾಮದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವುದಾದರೆ ಗ್ರಾಮದಲ್ಲಿ ಶ್ರೀ ನಾರಿಕೊಂಬೇಶ್ವರ ದೇವಸ್ಥಾನವಿದ್ದು, ಹೀಗಾಗಿ ನರಿಕೊಂಬು ಆಗಿದೆ ಎಂದು ಪ್ರತೀತಿ ಇದೆ. ಇನ್ನು ಕೆಲವು ಪ್ರತೀತಿ ಗಳಿದ್ದರೂ ಅದಕ್ಕೆ ಪೂರಕವಾದ ಅಂಶ ಗಳು ಕಾಣಿಸುತ್ತಿಲ್ಲ. ಗ್ರಾಮದ ಮತ್ತೂಂದು ವಿಶೇಷವೆಂದರೆ ಗ್ರಾಮ ದಲ್ಲಿ 28ಕ್ಕೂ ಅಧಿಕ ದೇವಸ್ಥಾನ, ಧಾರ್ಮಿಕ ಕೇಂದ್ರಗಳಿವೆ. ಬಹುತೇಕ ಕ್ಷೇತ್ರಗಳು ಜೀರ್ಣೋದ್ಧಾರಗೊಂಡು ಸುಸಜ್ಜಿತವಾಗಿರುವುದು ಗ್ರಾಮದ ಜನತೆಯ ಧಾರ್ಮಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ. ಗ್ರಾಮದಲ್ಲಿ 2 ಮಸೀದಿಗಳಿವೆ.
ಪ್ರಧಾನ ಸಮಸ್ಯೆಗಳೇನು?
ಯಾವ ಗ್ರಾಮದಲ್ಲಿಯೂ ಇರದ ಸಮಸ್ಯೆ ಯೊಂದು ನರಿಕೊಂಬಿನ ಜನರನ್ನು ಕಾಡುತ್ತಿದೆ. ನರಿಕೊಂಬು ಗ್ರಾಮದಲ್ಲಿ ಹಾದುಹೋಗಿರುವ ಪಾಣೆಮಂಗಳೂರು-ದಾಸಕೋಡಿ ಜಿಲ್ಲಾ ಮುಖ್ಯರಸ್ತೆಯ ಎರಡೂ ಬದಿ 25 ಮೀ.ನಷ್ಟು ಪ್ರದೇಶದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ, ವಸತಿಗಾಗಿ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಹೀಗಾಗಿ ರಸ್ತೆ ಬದಿ ಜಾಗವಿದ್ದರೂ ಖಾಲಿ ಬಿಡುವ ಪರಿಸ್ಥಿತಿ ಇದೆ. ಇದು ಇಲ್ಲಿನ ಸ್ಥಳೀಯಾಡಳಿತಕ್ಕೆ ದೊಡ್ಡ ಹೊಡೆತ ನೀಡುತ್ತಿದೆ ಎಂಬುದು ಪಂಚಾಯತ್‌ನ ಅಭಿಪ್ರಾಯವಾಗಿದೆ.
ಗ್ರಾಮದ ನೆಹರೂನಗರ ಪ್ರದೇಶ ಪುರ ಸಭೆಯ ವ್ಯಾಪ್ತಿಗೆ ಹೊಂದಿಕೊಂಡಿದ್ದು, ಇಲ್ಲಿನ ಕಸದ ಸಮಸ್ಯೆ ಗ್ರಾ.ಪಂ.ಗೆ ಬಹು ದೊಡ್ಡ ಸವಾಲಾಗಿದೆ. ಇಲ್ಲಿ ಲೋಡು ಗಟ್ಟಲೆ ಕಸ ರಾಶಿ ಬೀಳುತ್ತಿದ್ದು, ಈಗಾಗಲೇ ಸಾಕಷ್ಟು ಬಾರಿ ಲಾರಿಯ ಮೂಲಕ ಸಾಗಿಸಿದರೂ ಮತ್ತೆ ಮತ್ತೆ ಅದೇ ಸ್ಥಿತಿ ಉಂಟಾಗುತ್ತಿದೆ. ಜತೆಗೆ ಗ್ರಾಮದ ಒಂದಷ್ಟು ಪ್ರದೇಶ ಹೆದ್ದಾರಿಗೆ ಹೊಂದಿಕೊಂಡಿದ್ದು, ಅಲ್ಲೂ ಅನಧಿಕೃತ ತ್ಯಾಜ್ಯದ ರಾಶಿಯ ಸವಾಲನ್ನು ಗ್ರಾಮ ಎದುರಿಸುತ್ತಿದೆ.
ಘನ ತ್ಯಾಜ್ಯ ಘಟಕ ನಿರ್ಮಾಣ: ಗ್ರಾಮದಲ್ಲಿ ಪ್ರಮುಖವಾಗಿ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ 25 ಮೀ. ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲದೇ ಇರುವುದು ಬಹಳ ತೊಂದರೆಯಾಗಿದೆ. ಉಳಿದಂತೆ ಬಹುತೇಕ ಮೂಲ ಸೌಕರ್ಯಗಳು ಉತ್ತಮವಾಗಿದ್ದು, ಘನ ತ್ಯಾಜ್ಯ ಘಟಕ ಕೂಡ ಶೀಘ್ರದಲ್ಲಿ ನಿರ್ಮಾಣಗೊಳ್ಳಲಿದೆ. -ವಿನುತಾ ಪುರುಷೋತ್ತಮ ಅಧ್ಯಕ್ಷರು, ನರಿಕೊಂಬು ಗ್ರಾ.ಪಂ.
ಬಸ್ ಸೌಕರ್ಯ ಬೇಕು: ಗ್ರಾಮವು ಅಭಿವೃದ್ಧಿಯ ವಿಚಾರದಲ್ಲಿ ಪ್ರಗತಿ ಸಾಧಿಸುತ್ತಿದ್ದರೂ ನಮ್ಮ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲ ಎಂಬ ಕೊರಗು ಇದೆ. ಇದರಿಂದ ಗ್ರಾಮದ ಜನತೆಗೆ ಕೆಲಸಕ್ಕೆ ಹೋಗುವುದಕ್ಕೂ ತೊಂದರೆಯಾಗುತ್ತಿದೆ. ಹಿಂದೆ ಇದ್ದ ಖಾಸಗಿ ಬಸ್ ನಿಂತು ಹೋಗಿದೆ. ಹೀಗಾಗಿ ಸರಕಾರಿ ಬಸ್ ಬರಲಿ ಎಂಬುದು ನಮ್ಮ ಬೇಡಿಕೆಯಾಗಿದೆ. -ಪುರುಷೋತ್ತಮ ಬಂಗೇರ ನಾಟಿ ಗ್ರಾಮಸ್ಥರು