Advertisement

ನೇತಾಜಿ ಹೆಸರಲ್ಲಿ ಮೋದಿ ಚುನಾವಣೆ ಗಿಮಿಕ್‌: ಖರ್ಗೆ

06:45 AM Oct 23, 2018 | Team Udayavani |

ಯಾದಗಿರಿ: ನೇತಾಜಿ ಸುಭಾಶ್ಚಂದ್ರ ಭೋಸ್‌ ಅವರ ಆಜಾದ್‌ ಹಿಂದ್‌ ಫೌಜ್‌ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಾಣೆ ಗಿಮಿಕ್‌ ಮಾಡುತ್ತಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್‌ ಸಂಸದೀಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, 13 ವರ್ಷ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ಆವಾಗ ಎಲ್ಲಿದ್ದ ಎಂದು ಏಕವಚನದಲ್ಲಿ ಹರಿಹಾಯ್ದಿದ್ದಾರೆ.

Advertisement

ಯಾದಗಿರಿ ಹೊರ ವಲಯದಲ್ಲಿನ ಗುಲಸರಂ ಸೇತುವೆ ಬಳಿಯ ಭೀಮಾ ಪುಷ್ಕರದಲ್ಲಿ ಸೋಮವಾರ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರಿಗೆ ಈಗ ನೇತಾಜಿ ನೆನಪಾಗಿದೆ. 13 ವರ್ಷ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ಆವಾಗ ಎಲ್ಲಿದ್ದ? ಸಂಘ ಹಾಗೂ ಬಿಜೆಪಿ ಕಚೇರಿಗಳಲ್ಲಿ ನೇತಾಜಿ, ಪಟೇಲ್‌ ಭಾವಚಿತ್ರವೂ ಇರಲಿಲ್ಲ. ಪ್ರಧಾನಿಗೆ ನೇತಾಜಿ, ನೆಹರು, ವಲ್ಲಭಭಾಯಿ ಪಟೇಲ್‌ ಅವರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ದೇಶಕ್ಕಾಗಿ ಪ್ರಾಣ ಕೊಟ್ಟರವರ ಬಗ್ಗೆ ಮೋದಿ ಗೌರವ ಕೊಡುವುದನ್ನು ಕಲಿಯಲಿ ಎಂದರು.

ಸಿಬಿಐ ವಿಶೇಷ ನಿರ್ದೇಶಕರ ಮೇಲೆ ಸಿಬಿಐ ಕೇಸ್‌ ದಾಖಲಿಸಿರುವುದರ ಬಗ್ಗೆ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಂಡ ನಂತರ ಪ್ರತಿಕ್ರಿಯೆ ನೀಡುತ್ತೇನೆ. ದೇಶದಲ್ಲಿ ಕಾಂಗ್ರೆಸ್‌ ಅ ಧಿಕಾರಕ್ಕೆ ಬರುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಸಲ್ಮಾನ ಖುರ್ಷಿದ್‌ ಹೇಳಿಕೆಗೆ ವೈಯಕ್ತಿಕ ಅಭಿಪ್ರಾಯ. ಕಳೆದ 4 ವರ್ಷ ಬಿಜೆಪಿ ಆಡಳಿತದಿಂದ ರೈತಾಪಿ ವರ್ಗ, ಕೂಲಿ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್‌ ಪರ ಜನತೆ ಒಲವು ವ್ಯಕ್ತಪಡಿಸುತ್ತಿದ್ದು, ಪಕ್ಷವನ್ನು ಟೀಕಿಸುತ್ತಿರುವ ನಾಯಕರಿಗೆ 2019ರ ಲೋಕಸಭಾ ಚುನಾವಣೆ ಫಲಿತಾಂಶ ಉತ್ತರ ನೀಡಲಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next