ನವದೆಹಲಿ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರದ ಜನರು, ಈ ದೇಶದ ಪ್ರಧಾನಿಯಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನೇ ನೋಡಲು ಬಯಸುತ್ತಾರೆಂಬ ವಿಚಾರವನ್ನು “ಎಬಿಪಿ- ಸಿ ವೋಟರ್ – ಐಎಎನ್‌ಎಸ್’ ಸಂಸ್ಥೆಗಳು ಜಂಟಿಯಾಗಿ ನಡೆಸಿರುವ “ಸ್ಟೇಟ್ ಆಫ್ ಸ್ಟೇಟ್ಸ್ 2021′ ಎಂಬ ಸಮೀಕ್ಷೆ ಬಹಿರಂಗಪಡಿಸಿದೆ.
ಈ ರಾಜ್ಯಗಳ ಜೊತೆಗೆ ವಿಧಾನಸಭಾ ಚುನಾವಣೆ ಎದುರಿಸಲಿರುವ ಇನ್ನಿತರ ರಾಜ್ಯಗಳಾದ ಪಂಜಾಬ್‌ನಲ್ಲಿ ಬಹುತೇಕ ಮಂದಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಧಾನಿಯಾಗಬೇಕೆಂದು ಆಶಿಸಿದ್ದಾರೆ.
ಗೋವಾದಲ್ಲಿ ಮೋದಿ ಪರವಾಗಿ ಶೇ. 46.1ರಷ್ಟು ಬೆಂಬಲ ಸಿಕ್ಕಿದ್ದರೆ, ಮಣಿಪುರದಲ್ಲಿ ಶೇ. 45.1, ಉತ್ತರ ಪ್ರದೇಶದಲ್ಲಿ ಶೇ. 43.1 ಹಾಗೂ ಉತ್ತರಾಖಂಡದಲ್ಲಿ ಶೇ. 47.3ರಷ್ಟು ಬೆಂಬಲ ಸಿಕ್ಕಿದೆ.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 451 ಹೊಸ ಪ್ರಕರಣ | 1455 ಸೋಂಕಿತರು ಗುಣಮುಖ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೇ ಎಂಬ ಪ್ರಶ್ನೆಗೆ ಗೋವಾದಲ್ಲಿ ಶೇ. 16.5ರಷ್ಟು ಜನ ಬೆಂಬಲ ಸೂಚಿಸಿದ್ದರೆ, ಮಣಿಪುರದಲ್ಲಿ ಶೇ. 18.3, ಪಂಜಾಬ್‌ನಲ್ಲಿ ಶೇ. 2.1, ಉತ್ತರ ಪ್ರದೇಶದಲ್ಲಿ ಶೇ.5.8 ಹಾಗೂ ಉತ್ತರಾಖಂಡದಲ್ಲಿ ಶೇ. 4.7ರಷ್ಟು ಜನ ಬೆಂಬಲ ಸೂಚಿಸಿದ್ದಾರೆ.
ಮತ್ತೊಂದೆಡೆ, ಕೇಜ್ರಿವಾಲ್ ಅವರಿಗೆ ಪಂಜಾಬ್‌ನಲ್ಲಿ ಮೋದಿಯವರಿಗಿಂತ ಹೆಚ್ಚು ಬೆಂಬಲ (ಶೇ. 26.5) ವ್ಯಕ್ತವಾಗಿದೆ. ಗೋವಾದಲ್ಲಿ ಅವರಿಗೆ ಶೇ.15.7, ಉತ್ತರಾಖಂಡದಲ್ಲಿ ಶೇ.13.6ರಷ್ಟು ಬೆಂಬಲ ಸಿಕ್ಕಿದೆ.