Advertisement
ಫೆಬ್ರವರಿ 15ರಂದೇ ಪಾಸ್‌ಪೋರ್ಟ್ ರದ್ದು ಗೊಳಿಸುವ ನೋಟಿಸ್ ಅನ್ನು ಸಿಬಿಐ ವಿನಂತಿಯ ಮೇರೆಗೆ ಇಂಟರ್‌ಪೋಲ್ ನೀಡಿತ್ತು. ಅದು ಇಂಟರ್‌ಪೋಲ್‌ನ ಡೇಟಾದಲ್ಲಿ ಫೆ.24ರಿಂದಲೇ ದಾಖಲಾಗಿದೆ. ಇದು ಎಲ್ಲ ಸದಸ್ಯ ರಾಷ್ಟ್ರಗಳಿಗೂ ಲಭ್ಯವಿರುತ್ತದೆ. ಈಗಾಗಲೇ ಸಿಬಿಐ ಆರು ದೇಶಗಳನ್ನು ಸಂಪರ್ಕಿಸಿದ್ದು, ನೀರವ್ ಪ್ರಯಾಣದ ವಿವರಗಳನ್ನು ನೀಡುವಂತೆ ಸೂಚಿಸಿದೆ. ಅಲ್ಲದೆ ಏಪ್ರಿಲ್ 25, ಮೇ 22, ಮೇ 24 ಹಾಗೂ ಮೇ 28 ರಂದೂ ಈ ದೇಶಗಳಿಗೆ ಸೂಚನೆ ನೀಡಲಾಗಿತ್ತು ಎಂದು ಸಿಬಿಐ ಹೇಳಿದೆ.
ಉದ್ಯಮಿ ವಿಜಯ ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಹೊಸತಾಗಿ ಚಾರ್ಜ್‌ಶೀಟ್ ಸಲ್ಲಿಸಿದೆ. ಜತೆಗೆ ಅವರನ್ನು ದೇಶಭ್ರಷ್ಟ ಎಂದು ಘೋಷಿಸಲೂ ಮುಂದಾ ಗಿದೆ. ಹೊಸ ಆರೋಪಪಟ್ಟಿಯಲ್ಲಿ ವಿಜಯ ಮಲ್ಯ, ಕಿಂಗ್‌ಫಿಶರ್ ಏರ್‌ಲೈನ್ಸ್, ಯುನೈಟೆಡ್ ಬ್ರೂವರಿಸ್ ಹೋಲ್ಡಿಂಗ್ಸ್ ಲಿಮಿಟೆಡ್ ಸಂಸ್ಥೆಗಳನ್ನು ಪ್ರಮುಖವಾಗಿ ಹೆಸರಿಸಲಾಗಿದೆ. ಪರಾರಿ ಯಾಗಿರುವ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ಸುಗ್ರೀವಾಜ್ಞೆಯ ಅನ್ವಯ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.