Advertisement

ಹೊಸ ಅಧ್ಯಾಯ ಶುರು; ಭಾರತ, ಇಸ್ರೇಲ್ ನಡುವೆ 7 ಮಹತ್ವದ ಒಪ್ಪಂದಕ್ಕೆ ಸಹಿ

06:06 PM Jul 05, 2017 | Sharanya Alva |

ಜೆರುಸಲೇಂ(ಇಸ್ರೇಲ್):ವಿಮಾನಯಾನ, ಬಾಹ್ಯಾಕಾಶ, ಕೃಷಿ, , ಕುಡಿಯುವ ನೀರು, ಗ್ರಾಮ ನೈರ್ಮಲ್ಯ, ಗಂಗಾನದಿ ಸ್ವಚ್ಛತೆ ಸೇರಿದಂತೆ 7  ಮಹತ್ವದ ಒಪ್ಪಂದಕ್ಕೆ ಭಾರತ ಮತ್ತು ಇಸ್ರೇಲ್ ಸಹಿ ಹಾಕಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರ 2ನೇ ದಿನದ ಇಸ್ರೇಲ್ ಪ್ರವಾಸದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್  ನೇತನ್ಯಾಹು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಭಯೋತ್ಪಾದಕರನ್ನು ಮಟ್ಟ ಹಾಕುವ  ಬಗ್ಗೆ ಉಭಯ ದೇಶಗಳ ನಾಯಕರು ಸುದೀರ್ಘ ಚರ್ಚೆ ಮಾತುಕತೆ ನಡೆಸಿದರು.

ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ಬುಧವಾರ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. 

ಇಸ್ರೇಲ್ ತಂತ್ರಜ್ಞಾನದಲ್ಲಿ ಮುಂದುವರಿದ ದೇಶವಾಗಿದೆ. ಹೊಸ, ಹೊಸ ಆವಿಷ್ಕಾರಗಳ ದೇಶವಾಗಿದೆ. ಹಾಗಾಗಿ ಮೇಕ್ ಇನ್ ಇಂಡಿಯಾ ಯೋಜನೆಯ ಆರಂಭಕ್ಕೆ ಇಸ್ರೇಲ್ ತಂತ್ರಜ್ಞಾನ ನಮಗೆ ಬಹಳಷ್ಟು ಸಹಕಾರಿಯಾಗಬಲ್ಲದು ಎಂದು ಈ ಸಂದರ್ಭದಲ್ಲಿ ಹೇಳಿದರು.

ಭಾರತ ಮತ್ತು ಇಸ್ರೇಲ್ ಸೇರಿ ಇತಿಹಾಸ ನಿರ್ಮಿಸುತ್ತೇವೆ. ತಮ್ಮನ್ನು ಇಸ್ರೇಲ್ ಗೆ ಆಹ್ವಾನಿಸಿದ್ದಕ್ಕೆ ಇಸ್ರೇಲ್ ಪ್ರಧಾನಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟಕ್ಕೆ ನಿರ್ಧರಿಸಲಾಗಿದೆ..ಇದರಿಂದಾಗಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭವಾದಂತಾಗಿದೆ ಎಂದರು.
 
ಇಸ್ರೇಲ್ ನ ನೀರಿನ ಬಳಕೆ ಮತ್ತು ಉಳಿತಾಯ ಮಹತ್ವದ್ದಾಗಿದೆ. ಈ ಕುರಿತು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಬೇಕಾಗಿದೆ. ಇದರಿಂದ ಭಾರತಕ್ಕೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

Advertisement

ಬೇಬಿ ಮೋಶೆಯನ್ನು ಭೇಟಿಯಾದ ಪ್ರಧಾನಿ ಮೋದಿ:
ಮುಂಬೈನ ಭಯೋತ್ಪಾದನಾ ದಾಳಿಯಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡಿದ್ದ ಬೇಬಿ ಮೋಶೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿಯಾದರು. ಮೋಶೆ 2008ರ ಮುಂಬೈ ದಾಳಿ ಪ್ರಕರಣದ ಸಂತ್ರಸ್ತ ಬಾಲಕ. ದಾಳಿ ನಡೆದ ಸಂದರ್ಭದಲ್ಲಿ ಮೋಶೆ 2ವರ್ಷದ ಮಗುವಾಗಿದ್ದ. ಮುಂಬೈಗೆ ಮತ್ತೆ ಭೇಟಿ ನೀಡುವುದಾಗಿ ಮೋಶೆ ಈ ಸಂದರ್ಭದಲ್ಲಿ ಹೇಳಿದ್ದು, ಮುಂದಿನ ಬಾರಿ ಭಾರತಕ್ಕೆ ಭೇಟಿ ನೀಡುವ ವೇಳೆ ಮೋಶೆಯನ್ನು ಕರೆತರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ಭರವಸೆ ನೀಡಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next