Advertisement

ಹೆಗಡೆ ಸೇರಿ 13 ಮಂದಿ ಪ್ರಮಾಣ ವಚನ;ನಾಲ್ವರಿಗೆ ಬಡ್ತಿ  

10:35 AM Sep 03, 2017 | |

ಹೊಸದಿಲ್ಲಿ: ಬಹುನಿರೀಕ್ಷಿತ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ವಿಸ್ತರಣೆ ಭಾನುವಾರ ಬೆಳಗ್ಗೆ ನಡೆದಿದ್ದು ,ಉತ್ತರ ಕನ್ನಡದ ಸಂಸದ ಅನಂತ್‌ಕುಮಾರ್‌ ಸೇರಿದಂತೆ 9 ಮಂದಿ ಸಂಸದರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ವೇಳೆ ನಾಲ್ವರು ರಾಜ್ಯ ಖಾತೆ ಹೊಂದಿದ್ದ ಸಚಿವರಿಗೆ ಸಂಪುಟ ದರ್ಜೆ ಸಚಿವರನ್ನಾಗಿ ಬಡ್ತಿ ನೀಡಲಾಗಿದೆ. 

Advertisement

ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರು 9 ಮಂದಿ ಸಂಸದರಿಗೆ ಪ್ರಮಾಣವಚನ ಬೋಧಿಸಿದರು. 

ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸೇರಿದಂತೆ ಕೇಂದ್ರದ ಪ್ರಮುಖ ಸಚಿವರು ಉಪಸ್ಥಿತರಿದ್ದರು. 

ನೂತನ ಸಚಿವರ ಪಟ್ಟಿ 

ಬಿಹಾರದ ಅರ್‌ಹಾ ಕ್ಷೇತ್ರದ ಸಂಸದ ರಾಜ್‌ ಕುಮಾರ್‌ ಸಿಂಗ್‌, ನಿವೃತ್ತ  ಐಎಫ್ಎಸ್‌ ಅಧಿಕಾರಿ ಹರ್ದಿಪ್‌ ಸಿಂಗ್‌ ಪುರಿ, ಉತ್ತರ ಪ್ರದೇಶದ ರಾಜ್ಯ ಸಭಾ ಸದಸ್ಯ ಶಿವ್‌ ಪ್ರತಾಪ್‌ ಶುಕ್ಲಾ , ಭಾಗ್‌ಪತ್‌ ಕ್ಷೇತ್ರದ ಸಂಸದ ಸತ್ಯಪಾಲ್‌ ಸಿಂಗ್‌, ನಿವೃತ್ತ ಐಎಎಸ್‌ ಅಧಿಕಾರಿ ಅಲ್ಫೋನ್ಸ್‌ ಕನ್ನಂಥಾನಮ್‌ , ಬಕ್ಸಾರ್‌ನ ಸಂಸದ ಅಶ್ವಿ‌ನ್‌ ಕುಮಾರ್‌ ಚೌಬೆ, ಜೋಧ್‌‌ಪುರ್‌ ಸಂಸದ ಗಜೇಂದ್ರ ಸಿಂಗ್‌ ಶೆಖಾವತ್‌ ,ಮಧ್ಯಪ್ರದೇಶದ ಸಂಸದ ಡಾ.ವಿರೇಂದ್ರ ಕುಮಾರ್‌ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 

Advertisement

ಬಡ್ತಿ ಪಡೆದ ಸಚಿವರು

ರಾಜ್ಯ ಖಾತೆ ಹೊಂದಿದ್ದ ನಾಲ್ವರು ಬಿಜೆಪಿ ನಾಯಕರಿಗೆ ಖಾತೆಗಳಲ್ಲಿ ಸಾಧನೆ ಪರಿಗಣಿಸಿ ಮೋದಿ ಅವರು ಬಡ್ತಿ ನೀಡಿದ್ದು, ಮುಖ್ತಾರ್‌ ಅಬ್ಬಾಸ್‌ ನಖ್ವಿ, ನಿರ್ಮಲಾ ಸೀತಾರಾಮನ್‌‌, ಧರ್ಮೇಂದ್ರ ಪ್ರಧಾನ್‌ ಮತ್ತು ಪಿಯೂಷ್‌ ಗೋಯಲ್‌ ಅವರು  ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಶಿವಸೇನೆ ಬಹಿಷ್ಕಾರ 
ಪ್ರಮಾಣ ವಚನ ಸಮಾರಂಭಕ್ಕೆ ಎನ್‌ಡಿಎ ಮಿತ್ರ ಪಕ್ಷವಾಗಿರುವ ಶಿವಸೇನೆ ಬಹಿಷ್ಕಾರ ಹಾಕಿದೆ. ಶಿವಸೇನೆಗೆ ಯಾವುದೇ ಸಚಿವ ಸ್ಥಾನ ನೀಡದೆ ಇದ್ದುದರಿಂದ ಆಕ್ರೋಶ ಹೊರಹಾಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next