Advertisement

ನರೇಗಾ ಕೆಲಸ; ಹಿರಿಯ ನಾಗರಿಕರಿಗೂ ಅವಕಾಶ

08:49 AM May 25, 2020 | Suhan S |

ಹುಬ್ಬಳ್ಳಿ: ರಾಜ್ಯ ನಿವೃತ್ತ ಸರಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ನಗರದಲ್ಲಿರುವ ಕಚೇರಿ ಸರಕಾರದ ನಿರ್ದೇಶನದಂತೆ ಮೇ 31ರ ವರೆಗೆ ಬಂದ್‌ ಇರುತ್ತದೆ.

Advertisement

ಹಿರಿಯ ನಾಗರಿಕರಿಗಾಗಿ ಸಂಘದಿಂದ ಆಗಬೇಕಾದ ತುರ್ತು ಕೆಲಸಗಳಿಗಾಗಿ ಸಂಘದ ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ ಮೊ: 9845611968 ಅವರನ್ನು ಸಂಪರ್ಕಿಸಬಹುದು. ಗ್ರಾಮಗಳಲ್ಲಿರುವ ಹಿರಿಯ ನಾಗರಿಕರು ನರೇಗಾ ಮತ್ತು ಮಹಾತ್ಮಾ ಗಾಂಧಿ ಖಾತ್ರಿ ಉದ್ಯೋಗ ಯೋಜನೆಯಲ್ಲಿ ಕಾರ್ಯ ಮಾಡಬಯಸಿದರೆ ಅವರಿಗೆ ಅರ್ಧ ದಿವಸದ ಕೆಲಸ ನೀಡಿ ದಿನದ ಪೂರ್ತಿ ಕೆಲಸದ ಹಣ 275 ರೂ. ನೀಡಲಾಗುವುದು. ಈ ಕುರಿತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರಿಂದ ಮಾಹಿತಿ ಪಡೆಯಬಹುದು.

ಪಿಂಚಣಿ ಹಣ ಹೆಚ್ಚಿಸಿ: ಕೋವಿಡ್ ವೈರಸ್‌ ನಿಮಿತ್ತ ಲಾಕ್‌ಡೌನ್‌ದಿಂದಾಗಿ ದುಡಿಮೆ ಇಲ್ಲದ ಕಾರಣ ಪಿಎಫ್‌ ಮಾಸಿಕ ಪಿಂಚಣಿ 1 ಸಾವಿರ ರೂ. ಪಡೆಯುತ್ತಿರುವ ಹಿರಿಯ ನಾಗರಿಕರು ಮತ್ತು ಅವರ ಕುಟುಂಬ ವರ್ಗದವರು ತೊಂದರೆಯಲ್ಲಿದ್ದಾರೆ. ಆದ್ದರಿಂದ 1 ಸಾವಿರ ರೂ. ಪಿಎಫ್‌ ಪೆನ್ಶನ್‌ ಪಡೆಯುವ ಕಾರ್ಮಿಕರಿಗೆ 2 ಸಾವಿರ ರೂ. ಹೆಚ್ಚಿಸಿ 3 ಸಾವಿರ ರೂ. ನಿಗದಿ ಮಾಡಿ ಆದೇಶ ಹೊರಡಿಸಬೇಕೆಂದು ಸಂಘವು ಕೇಂದ್ರ ಸರಕಾರ ಒತ್ತಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next