Advertisement

ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ನರೇಗಾ ಕಾಮಗಾರಿ

05:09 PM Apr 30, 2020 | Suhan S |

ಬೈಲಹೊಂಗಲ: ಕೋವಿಡ್ 19  ಲಾಕ್‌ಡೌನಿಂದಾಗಿ ತೊಂದರೆಗೊಳಗಾದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಹೊಲಗಳಲ್ಲಿ ಹಾಗೂ ಹಳ್ಳಗಳಲ್ಲಿ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.

Advertisement

ಬುಧವಾರ ತಾಲೂಕಿನ ನೇಸರಗಿ ಮತ್ತು ಹಣಬರಹಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಜಲಾಮೃತ ಯೋಜನೆ ಹಾಗೂ ಗ್ರಾಮ ಪಂಚಾಯಿತಿಗಳಿಂದ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹೊಲಗಳಲ್ಲಿ ಹಾಗೂ ಹಳ್ಳಗಳಲ್ಲಿ ಹೂಳೆತ್ತುವ ಕಾರ್ಯಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಬೇಕು. ಹಣಬರಟ್ಟಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕೃಷಿ ಇಲಾಖೆಯಿಂದ ಜಲಾಮೃತ ಯೋಜನೆಯಡಿ 789 ಹೆಕ್ಟೇರ್‌ ಪ್ರದೇಶದಲ್ಲಿ 6ಕೋಟಿ 8ಲಕ್ಷ ವೆಚ್ಚದಲ್ಲಿ ಉದ್ಯೋಗ ಖಾತ್ರಿ ಕಾರ್ಯ ನಡೆಯುತ್ತಿದೆ. ಸುಮಾರು 310 ಜನರು ಕಾರ್ಯ ಮಾಡುತ್ತಿದ್ದಾರೆ ಎಂದರು.

ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸುತ್ತೇವೆಂದು ಪ್ರತಿಜ್ಞೆ ಮಾಡಿ ಯೋಜನೆಗೆ ಚಾಲನೆ ನೀಡಲಾಯಿತು. ಎಲ್ಲ ಕೂಲಿ ಕಾರ್ಮಿಕರಿಗೆ ಮಾಸ್ಕ್, ಕೈ ತೊಳೆಯುವ ಸೋಪ್‌ ಹಾಗೂ ಬಿಸ್ಕಿಟ್‌ ವಿತರಿಸಲಾಯಿತು. ತಹಶೀಲ್ದಾರ ಡಾ| ದೊಡ್ಡಪ್ಪ ಹೂಗಾರ, ತಾ.ಪಂ ಇಒ ಸಮೀರ ಮುಲ್ಲಾ, ಸಹಾಯಕ ಕೃಷಿ ನಿರ್ದೇಶಕ ವಿಜಯಕುಮಾರ ಪಾಟೀಲ, ತಾ.ಪಂ ಸದಸ್ಯೆ ಲಕ್ಷ್ಮಿ ತಳವಾರ, ಕೃಷಿ ಅಧಿಕಾರಿಗಳಾದ ಪ್ರತಿಭಾ ಹೂಗಾರ, ಆರ್‌.ಐ. ಕುಂಬಾರ,ಬಿ. ಎನ್‌.ಕಸಾಳೆ, ಬಿ.ಎಫ್‌. ಕೊಳದೂರ, ಗ್ರಾ.ಪಂ ಅಧ್ಯಕ್ಷೆ ನಿರ್ಮಲಾ ಬಾಗೇವಾಡಿ, ಪಿಡಿಓ ಶಿವಾನಂದ ಕಲ್ಲೂರ, ಕಂದಾಯ ನಿರೀಕ್ಷಕ ಆರ್‌.ಎಂ.ಕೋಲಕಾರ, ಗ್ರಾ.ಪಂ ಸದಸ್ಯರು, ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next