Advertisement

ದುಡಿಯವ ಕೈಗಳಿಗೆ ಉದ್ಯೋಗ: ಸಿದ್ಧಲಿಂಗೇಶ್ವರ ಪಾಟೀಲ

05:02 AM May 16, 2020 | Suhan S |

ಗದಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೈತರ ಹೊಲಗಳ ಬದು ನಿರ್ಮಾಣ ಮತ್ತು ಮಳೆ ನೀರನ್ನು ಜಮೀನುಗಳಲ್ಲೇ ಇಂಗಿಸಲು ಗುಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಕೋವಿಡ್‌ -19 ರ ಸೋಂಕು ನಿಯಂತ್ರಣ ಸಂದರ್ಭದಲ್ಲಿ ದುಡಿಯುವ ಕೈಗಳಿಗೆ ಕೆಲಸ ಒದಗಿಸಲಾಗಿದೆ ಎಂದು ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಎಚ್‌. ಪಾಟೀಲ ಹೇಳಿದರು.

Advertisement

ಜಿಲ್ಲೆಯ ರೋಣ ತಾಲೂಕಿನ ಇಟಗಿ ಗ್ರಾಮದಲ್ಲಿ ಸುಮಾರು 30 ಎಕರೆ ಜಮೀನುಗಳ ರಿಜ್‌ವ್ಯಾಲಿ ಯೊಜನೆಯಡಿ ಜಲ ಸಂವರ್ಧನೆ, ಸಂರಕ್ಷಣೆಗಾಗಿ ಉದ್ಯೋಗ ಖಾತ್ರಿ ಯೋಜನೆ ಸಮನ್ವಯಗೊಳಿಸಿ ಕೈಕೊಳ್ಳಲಾದ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ಈ ಕಾಮಗಾರಿಯಡಿ 2000 ಜನರಿಗೆ ಉದ್ಯೋಗ ಒದಗಿಸಲಾಗಿದೆ. ಮುಂಗಾರು ಪೂರ್ವ ರೈತರ ಹೊಲಗಳಲ್ಲಿ ಮಳೆ ನೀರು ಇಂಗುವಿಕೆ, ಅಂತರ್ಜಲ ಸಂವರ್ಧನೆಗೆ ಅಗತ್ಯದ ಕಾಮಗಾರಿಗಳನ್ನು ರೈತರು ವೈಯಕ್ತಿಕವಾಗಿ ಕೈಗೊಳ್ಳಲು ಅವಕಾಶವಿದ್ದು ಕಾರ್ಮಿಕರಿಗೆ ಉದ್ಯೋಗ ನೀಡುವ ಈ ಅವಕಾಶ ಬಳಸಿಕೊಳ್ಳಬೇಕು. ಕಾಮಗಾರಿ ಪ್ರದೇಶದಲ್ಲಿ ಕೋವಿಡ್‌-19 ಸೋಂಕು ನಿಯಂತ್ರಣ ಪರಿಣಾಮಕಾರಿ ತಡೆಗೆ ಸದಾ ಕಾಲ ಸಾಮಾಜಿಕ ಅಂತರ ಹಾಗೂ ಸ್ವಸುರಕ್ಷತೆ ಹಾಗೂ ಮುಖಕ್ಕೆ ಮಾಸ್ಕ್ ಹಾಗೂ ಸ್ವಚ್ಛತಾ ಕ್ರಮಗಳಿಗೆ ಗಮನ ನೀಡಲು ಅಧಿಕಾರಿಗಳಿಗೆ ಮತ್ತು ಕಾರ್ಮಿಕರಿಗೆ ತಿಳಿಸಿದರು.

ಜಿಪಂ ಸದಸ್ಯೆ ಮಂಜುಳಾ ಹುಲ್ಲಣ್ಣವರ, ರೋಣ ತಾಪಂ ಸದಸ್ಯ ಪ್ರಭು ಮೇಟಿ, ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ, ಇಟಗಿ ಗ್ರಾಪಂ ಅಧ್ಯಕ್ಷೆ ಭೀಮವ್ವ ಜಡದೇಲಿ, ಉಪಾಧ್ಯಕ್ಷ ಪ್ರಭು ಜಾಲಾಪುರ, ಗ್ರಾಪಂ ಸದಸ್ಯರು ಹಾಗೂ ಪಿಡಿಒ ಮಂಜುನಾಥ ಜಾವೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next