Advertisement

ಕಾರ್ಮಿಕರಿಗೆ ವರವಾದ ನರೇಗಾ

05:55 PM Jul 28, 2018 | |

ಯಾದಗಿರಿ: ಜನವರಿಯಿಂದ ಜುಲೈ 26ರ ವರೆಗೆ 223 ಮಿ. ಮೀಟರ್‌ ಜಿಲ್ಲಾದ್ಯಂತ ಮಳೆ ಸುರಿದಿದ್ದು, ವಾಡಿಕೆಗಿಂತ ಶೇ. 25ರಷ್ಟು ಕಡಿಮೆ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಶೇ. 56ರಷ್ಟು ಬಿತ್ತನೆ ಕಾರ್ಯ ಕೂಡ ಮುಕ್ತಾಯಗೊಂಡಿದ್ದು, 2,69,224 ಹೆಕ್ಟೇರ್‌ ಪ್ರದೇಶದಲ್ಲಿ 1,51,270 ಹೆಕ್ಟೇರ್‌ ಪ್ರದೇಶ ಮಾತ್ರ ಬಿತ್ತನೆ ಗುರಿ ಸಾಧಿಸಲಾಗಿದೆ.

Advertisement

ಯಾದಗಿರಿಯಲ್ಲಿ 71,700 ಹೆಕ್ಟೇರ್‌ ಬಿತ್ತನೆ ಗುರಿಯಲ್ಲಿ 58,140 ಹೆಕ್ಟೇರ್‌ ಪ್ರದೇಶ ಬಿತ್ತನೆಯಾಗಿದೆ. ಶಹಾಪುರಲ್ಲಿ 99,922 ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿಯಲ್ಲಿ 60,780 ಹೆಕ್ಟೇರ್‌ ಪ್ರದೇಶ ಬಿತ್ತನೆಯಾಗಿದ್ದು, ಇನ್ನು ಸುರಪುರ ತಾಲೂಕಿನಲ್ಲಿ 97,602 ಹೆಕ್ಟೇರ್‌ ಗುರಿಯಲ್ಲಿ 32,350 ಹೆಕ್ಟೇರ್‌ ಪ್ರದೇಶದಲ್ಲಿ ಶೇ. 33.34ರಷ್ಟು ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ಹೆಚ್ಚಾಗಿ ಗುರುಮಠಕಲ್‌, ಯಾದಗಿರಿ ತಾಲೂಕಿನ ರೈತರು ಮಳೆ ಆಶ್ರಿತ ಬೇಸಾಯ ಅವಲಂಭಿಸಿದ್ದು, ಸೂಕ್ತ ನೀರಾವರಿ ಸೌಲಭ್ಯವಿಲ್ಲದೇ ಅತಿವೃಷ್ಟಿ ಅನಾವೃಷ್ಟಿಗೆ ತುತ್ತಾಗುವುದು ಸಾಮಾನ್ಯವಾಗಿದೆ. ಸುರಪುರ ಮತ್ತು ಶಹಾಪುರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಾಗಿ ರೈತರು ನೀರಾವರಿ ಅವಲಂಭಿಸಿದ್ದಾರೆ.
 
ನೂತನ ತಾಲೂಕು ಕೇಂದ್ರವಾದ ಗುರುಮಠಕಲ್‌ ಮತ್ತು ಯಾದಗಿರಿ ಜನರು ಸೂಕ್ತ ಕೆಲಸ ಸಿಗದೇ ಬೆಂಗಳೂರು, ಮುಂಬೈ ಇನ್ನಿತರ ನಗರಗಳಿಗೆ ಗುಳೆ ಹೋಗುವುದು ತಪ್ಪಿಲ್ಲ. ಇನ್ನು ನರೇಗಾ ಯೋಜನೆಯಿಂದ ಕೂಲಿ ಕಾರ್ಮಿಕರಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ. ಎಪ್ರಿಲ್‌ನಿಂದ ಜೂನ್‌ ವರೆಗೆ ಕೆರೆ ಹೂಳೆತ್ತುವುದು, ಕೃಷಿ ಹೊಂಡ ನಿರ್ಮಾಣ, ನಮ್ಮ ಹೊಲ ನಮ್ಮ ರಸ್ತೆ, ತಡೆಗೋಡೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿ ನಿರ್ವಹಿಸಲು ಪ್ರಸಕ್ತ ಸಾಲಿನಲ್ಲಿ 1,39,005 ಕುಟುಂಬಗಳು ಜಾಬ್‌ ಕಾರ್ಡಗಾಗಿ ನೋಂದಣಿಯಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದಂತೆ ಒಟ್ಟು 1,35,482 ಜಾಬ್‌ ಕಾರ್ಡ್‌ ವಿತರಿಸಲಾಗಿದೆ.

13,473 ಕುಟುಂಬದ 18,722 ಜನರು 2,77,784 ದಿನ ಕೆಲಸ ಮಾಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ
ಅಸಂಖ್ಯಾತ ಸಂಖ್ಯೆಯಲ್ಲಿ ಗುರುಮಠಕಲ್‌ ಮತ್ತು ಯಾದಗಿರಿ ತಾಲೂಕಿನ ಜನರು ಕೆಲಸ ಅರಿಸಿ ಗುಳೆ ಹೋಗುತ್ತಿರುವುದನ್ನು ತಪ್ಪಿಸಲು ನರೇಗಾ ಯೋಜನೆ ಸಾಕಷ್ಟು ಅನುಕೂಲವಾಗಿದ್ದು, ಮಹಾನಗರಗಳಲ್ಲಿ ಕಟ್ಟಡ ಕಾರ್ಮಿಕ ಕೆಲಸ ಮಾಡುವವರಿಗೆ ಹೆಚ್ಚಿನ ಬೇಡಿಕೆ ಮತ್ತು ದುಡಿಮೆಗೆ ತಕ್ಕ ಸಂಬಳ ಸಿಗುವುದರಿಂದ ಕಟ್ಟಡ ಕಾರ್ಮಿಕರು ಮಾತ್ರ ವಲಸೆ ಹೋಗುತ್ತಿರುವುದು ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ನರೇಗಾ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಹೆಚ್ಚಿನ ಉದ್ಯೋಗ ದಿನ ಸೃಷ್ಟಿಯಾಗಿರುವುದರಿಂದ ಕೂಲಿ ಕಾರ್ಮಿಕರು ಗುಳೆ ಹೋಗುವುದು ಹೆಚ್ಚಾಗಿ ಕಾಣುತ್ತಿಲ್ಲ. ಕೂಲಿ ಕಾರ್ಮಿಕರಿಗೆ ನರೇರಾ ಯೋಜನೆ ವರದಾನವಾಗಿದೆ. ಸ್ಥಳೀಯವಾಗಿಯೇ ನಿತ್ಯ ಕೆಲಸಕ್ಕೆ 249 ರೂ. ಕೂಲಿ ಪಡೆಯಬಹುದು. 
 ವಸಂತರಾವ್‌ ಕುಲಕರ್ಣಿ, ಜಿಪಂ ಉಪ ಕಾರ್ಯದರ್ಶಿ 

Advertisement

„ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next