Advertisement
ತಾಲೂಕಿನ ಸಾತನೂರು ಹೋಬಳಿ ವ್ಯಾಪ್ತಿಯ ಅರೆಕಟ್ಟೆದೊಡ್ಡಿ ಗ್ರಾಮ ಪಂಚಾಯ್ತಿಯಲ್ಲಿ 2014-15ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಿಸಲಾದ ದನ ಕೊಟ್ಟಿಗೆ ಹಾಗೂ ಕೃಷಿ ಹೊಂಡಗಳನ್ನು ದಾಳಿಂಬ ಮತ್ತು ಕಚುವನಹಳ್ಳಿ ಗ್ರಾಮಸ್ಥರು ನಿರ್ಮಿಸಿಕೊಂಡಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಗಳು ಉಳಿದಿದೆ. ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಕಟ್ಟುಕತೆ: ರೈತರಿಗೆ ಬರಬೇಕಿದ್ದ ಸಾಮಗ್ರಿ ವೆಚ್ಚವನ್ನು ಗುತ್ತಿಗೆದಾರರ ಹೆಸರಿಗೆ ಪಂಚಾಯತಿ ಅಧಿಕಾರಿ ಮತ್ತು ಅಧ್ಯಕ್ಷರು ಹಾಕಿಸಿದ್ದು ಆ ಹಣವನ್ನು ಎಲ್ಲರೂ ಸೇರಿ ಹಂಚಿಕೊಂಡಿದ್ದಾರೆ. ರೈತರು ಕೇಳಿದರೆ ಕಟ್ಟು ಕತೆ ಹೇಳಿ ವಂಚಿಸುತ್ತಿದ್ದಾರೆ ಎಂದು ದೂರಿದರು.
Related Articles
ಹೀಗಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Advertisement
ಕಚುವನಹಳ್ಳಿ ಡಿ.ಶಿವಲಿಂಗೇಗೌಡ ಮಾತನಾಡಿ, ಅರೆಕಟ್ಟೆದೊಡ್ಡಿ ಗ್ರಾಪಂನಲ್ಲಿ ಸಾರ್ವಜನಿಕರಿಗೆ ವಂಚನೆಯಾಗುತ್ತಿದೆ. ದನದ ಕೊಟ್ಟಿಗೆ ಮತ್ತು ಕೃಷಿ ಹೊಂಡ ನಿರ್ಮಾಣಕ್ಕೆ ಹೆಚ್ಚಿನ ಅಸಕ್ತಿ ತೋರಿ ಕೆಲಸ ಮಾಡಿಸಿದ್ದಾರೆ. ಆದರೆ, ಪೂರ್ತಿ ಹಣ ಕೊಡುತ್ತಿಲ್ಲವೆಂದು ಆರೋಪಿಸಿದ್ದಾರೆ.
ಅಂದಾಜು ವೆಚ್ಚಕ್ಕೆ ಶೇ. 10ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕಾಮಗಾರಿ ಬೋರ್ಡ್ ಹಾಕಲು 1200 ರೂ. ಖರ್ಚು ತೆಗೆದು ಸಾಮಗ್ರಿ ವೆಚ್ಚವನ್ನು ಸಂಪೂರ್ಣ ಹಿಡಿದುಕೊಳ್ಳುತ್ತಿದ್ದಾರೆ. ಪಂಚಾಯತಿಯಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದ್ದು, ಲೋಕಾಯುಕ್ತ ಮತ್ತು ಎಸಿಬಿ ಅಧಿಕಾರಿಗಳು ಇದರ ವಿರುದ್ಧ ದೂರು ದಾಖಲಿಸಿಕೊಂಡು ಅನ್ಯಾಯ ತಡೆಗಟ್ಟಬೇಕೆಂದು ಮನವಿ ಮಾಡಿದ್ದಾರೆ. ವಿಎಸ್‌ಎಸ್‌ಎನ್ ನಿರ್ದೇಶಕ ಡಿ.ಕೆ.ರವಿ, ಡಿ.ಎಂ.ಚಿಕ್ಕಸಿದ್ದೇಗೌಡ,
ವಿ.ಜಿ. ಶಂಕರ್, ಕೆ. ಬಸವೇಗೌಡ, ಕಾಳಿರೇಗೌಡ, ಶಿವಮರೀಗೌಡ, ಬೋರೇಗೌಡ, ಶಿವಣ್ಣ, ಬಸವಣ್ಣ, ಮಹೇಶ್, ರಾಮು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪರಿಶೀಲಿಸಲಾಗುವುದು: 2014ರಿಂದ ಇಲ್ಲಿವರಗೆ ನಡೆದಿರುವ ಎಲ್ಲಾ ಕಾಮಗಾರಿಗಳ ಸಾಮಗ್ರಿ ವೆಚ್ಚ ವೆಂಟರ್ ಅಕೌಂಟ್‌ಗೆ ಇನ್ನೂ ಬಂದಿಲ್ಲ. ನರೇಗಾ ಯೋಜನೆಯಡಿಯಲ್ಲಿ ಶೇ. 60:40ರಷ್ಟು ಅನುಪಾತವು ಪಾಲನೆಯಾಗದ
ಕಾರಣ ಜಿಲ್ಲಾ ಪಂಚಾಯತಿಯಲ್ಲಿ ಲಾಕ್ ಆಗಿದೆ. ಪಂಚಾಯತಿಯಿಂದ ಯಾವುದೇ ಮೋಸವಾಗಿಲ್ಲವೆಂದು ಪಿಡಿಒ ಲೋಕೇಶ್ ತಿಳಿಸಿದ್ದಾರೆ. ನರೇಗಾ ಯೋಜನೆಯಲ್ಲಿ 60:40ರಷ್ಟು ಅನುಪಾತ ಪಾಲನೆಯಾಗದ ಹಿನ್ನೆಲೆಯಲ್ಲಿ ಹಣ ಸಂದಾಯ ಮಾಡುವುದು
ಸ್ವಲ್ಪ ವಿಳಂಬವಾಗುತ್ತದೆ. 2ರಿಂದ 3 ವರ್ಷಗಳ ವರೆಗೆ ವಿಳಂಬವಾಗುವುದಿಲ್ಲ. ಅರೆಕಟ್ಟೆದೊಡ್ಡಿ ಗ್ರಾಪಂನಲ್ಲಿ 2
ವರ್ಷದಿಂದ ಸಾಮಗ್ರಿ ವೆಚ್ಚ ನೀಡದಿರುವುದು ಇಲ್ಲಿವರೆಗೆ ತಿಳಿದಿಲ್ಲ. ಪರಿಶೀಲನೆ ನಡೆಸಲಾಗುವುದು.
ರಾಮಕೃಷ್ಣಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ