Advertisement
ಇಲಾಖೆಯ ಪ್ರಗತಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಗೆ ಈ ವರ್ಷ 4.45 ಲಕ್ಷ ಉದ್ಯೋಗ ಕಾರ್ಡ್ ವಿತರಿಸುವ ಮೂಲಕ 10.68 ಲಕ್ಷ ಜನರು ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ವರ್ಷದಲ್ಲಿ 31.45 ಲಕ್ಷ ಕುಟುಂಬಗಳ 58.96 ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿದ್ದು, ಈಗಾಗಲೇ 46 ಸಾವಿರ ಕುಟುಂಬಗಳು 100 ದಿನಗಳ ಕೂಲಿ ಪೂರ್ಣಗೊಳಿಸಿವೆ. ಈ ವರ್ಷ ಈ ಯೋಜನೆ ಅಡಿಯಲ್ಲಿ 29.15 ಲಕ್ಷ ಮಹಿಳೆಯರು, 4.83 ಲಕ್ಷ ಹಿರಿಯರು, 22 ಸಾವಿರಕ್ಕೂ ಹೆಚ್ಚು ವಿಕಲಚೇತನರಿಗೆ ಉದ್ಯೋಗ ನೀಡಲಾಗಿದೆ ಎಂದರು
Related Articles
Advertisement
ಪಂಚಾಯತಿ ಮಟ್ಟದಲ್ಲಿ ಅರಣ್ಣೀಕರಣ ಹೆಚ್ಚಳ, ರೈತರ ಆದಾಯ ಹೆಚ್ಚಿಸಲು ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ ನೀಡಲಾಗಿದೆ ಎರೆ ಹುಳು ತೊಟ್ಟಿ ನಿರ್ಮಿಸಲು ರೈತ ಬಂಧು ಅಭಿಯಾನ ಆರಂಭಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯತಿಗೆ 25 ಎರೆ ಹುಳು ತೊಟ್ಟಿ ನಿರ್ಮಿಸಲಾಗುವುದು. ನರೇಗಾ ಯೋಜನೆ ಮೂಲಕ ಅಂಗನವಾಡಿ ಕಟ್ಟಡ ನಿರ್ಮಾಣ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ದೇವಸ್ಥಾನ ನಿರ್ವಹಣೆಗೆ ಸಮಿತಿ :
ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ, ದೇವಸ್ಥಾನದ ಹಣ ಬಳಕೆಗೆ ಭಕ್ತರೇ ಆಯ್ಕೆ ಮಾಡುವ ಸಮಿತಿ ರಚನೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯದ ಹಣ ಇದ್ಧರೂ ಅದನ್ನು ದೇವಾಲಯಕ್ಕೇ ಬಳಸಿಕೊಳ್ಳಲು ಈಗ ಅವಕಾಶ ಇಲ್ಲ. ಆ ಹಣಕ್ಕೆ ಸರ್ಕಾರ ಕೈ ಹಾಕದೆಯೇ ದೇವಸ್ಥಾನದಲ್ಲೇ ಭಕ್ತರೇ ಆಯ್ಕೆ ಮಾಡುವ ಸಮಿತಿ ಮೂಲಕ ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಸಮಿತಿಗೆ ಹೆಚ್ಚು ಅಧಿಕಾರ ಕೊಡುವ ವ್ಯವಸ್ಥೆ ಮಾಡಲಾಗುವುದು. ಆದರೆ, ಸರ್ಕಾರದ ಉಸ್ತುವಾರಿ ಇರುತ್ತದೆ ಎಂದು ಹೇಳಿದರು.