ಮುದ್ದೇಬಿಹಾಳ: 2018-19 ಹಾಗೂ 2019-20ನೇ ಸಾಲಿನ ಉದ್ಯೋಗ ಖಾತ್ರಿ (ನರೇಗಾ)ಯೋಜನೆಯಡಿ ದಾಖಲಾತಿ ಯಲ್ಲಿರುವಂತೆಕಾಮಗಾರಿಗಳು ನಡೆದಿಲ್ಲ ಎನ್ನುವ ಗ್ರಾಮಸ್ಥರ ಆರೋಪದ ಹಿನ್ನೆಲೆಯಲ್ಲಿಖುದ್ದು ಪರಿಶೀಲಿಸಲು ತಾಪಂ ಇಒ ಶಶಿಕಾಂತ ಶಿವಪುರೆ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು.
ಕೆಲವು ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದ ಇಒ ಮೇಲ್ನೋಟಕ್ಕೆ ಅವುಗಳಲ್ಲಿನ ವ್ಯತ್ಯಾಸ ಕಂಡುಕೊಂಡು ದಾಖಲೆ ಪರಿಶೀಲಿಸಲು ಮುಂದಾಗಿದ್ದರು. ಆದರೆ ಎನ್‌ಆರ್ ಇಜಿ ವೆಬ್‌ಸೈಟ್ ತಾಂತ್ರಿಕ ದೋಷದಿಂದಬಂದ್ ಆಗಿದ್ದರಿಂದ ಪರಿಶೀಲನೆ ಸಾಧ್ಯವಾಗಲಿಲ್ಲ. ಇನ್ನು ಮೂರ್‍ನಾಲ್ಕುದಿನ ಈ ಕುರಿತು ಪರಿಶೀಲನೆ ನಡೆಸಿ ನಂತರ ವರದಿ ತಯಾರಿಸುವ ಹಾಗೂ ತಪ್ಪುಗಳು ಕಂಡುಬಂದಲ್ಲಿ ಪಿಡಿಒ ವಿರುದ್ಧ ಮೇಲಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಪಿಡಿಒ ಎಸ್.ಐ. ಹಿರೇಮಠ ಅವರು ಎನ್‌ಆರ್‌ಇಜಿ ಕಾಮಗಾರಿಗಳನ್ನು ಯೋಜನಾ ವರದಿಯಲ್ಲಿರುವಂತೆಸರಿಯಾಗಿ ಮಾಡಿಲ್ಲ. ಪ್ರಾಯೋಗಿಕ ಕೆಲಸಕ್ಕೂ, ಯೋಜನಾ ವರದಿಯಲ್ಲಿ ಖರ್ಚಾದ ಹಣಕ್ಕೂ ತಾಳೆ ಆಗುವುದಿಲ್ಲ. ಬೀದಿದೀಪ ವಿಷಯದಲ್ಲಿ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ. ಹಿರೇಮುರಾಳಕ್ಕೇ ಹೆಚ್ಚಿನ ಸೌಲಭ್ಯಒದಗಿಸಿದ್ದು, ಅರೇಮುರಾಳಕ್ಕೆ ಸೌಲಭ್ಯ ಕಲ್ಪಿಸಲು ಹಿಂದೇಟು ಹಾಕುತ್ತಿದ್ದಾರೆ.
ಕಂಪ್ಯೂಟರ್ ಉತಾರಕ್ಕೆ ಹಣ ಕೇಳುತ್ತಾರೆ. ಉದ್ಯೋಗ ಖಾತ್ರಿ ಕೆಲಸಕ್ಕೆ ಜೆಸಿಬಿ ಯಂತ್ರಬಳಸಿದ್ದಾರೆ ಎಂಬೆಲ್ಲ ಆರೋಪಗಳು ಗ್ರಾಮಸ್ಥರಿಂದ ಕೇಳಿಬಂದವು. ಆದರೆ ಆರೋಪಗಳನ್ನು ನಿರಾಕರಿಸಿದ ಪಿಡಿಒ ಹಿರೇಮಠ ಅವರು, 2018-19, 2019-20ನೇ ಸಾಲಿನ ಕಾಮಗಾರಿಗಳು ನರೇಗಾ ನಿಯಮದಂತೆ ಮಾಡಲಾಗಿದೆ. ಅಗತ್ಯ ಇರುವೆಡೆ ಲೇಬರ್‌ಬಳಸಿದ್ದು, ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಸೂಚನೆ ಪಾಲಿಸಿ ಕೆಲಸ ಮಾಡಿಸಲಾಗಿದೆ. ಬೀದಿದೀಪ ವಿಷಯದಲ್ಲಿ ಮಲತಾಯಿ ಧೋರಣೆಮಾಡಿಲ್ಲ. ಕಾನೂನುಬಾಹಿರವಾಗಿ ಕೆಲಸಮಾಡಲು ಕೇಳಿದವರು ನಾನು ಅದಕ್ಕೆ ಆಸ್ಪದ ಕೊಡದೆ ಇದ್ದಾಗ ನನ್ನ ಮೇಲೆ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದು ಸತ್ಯಏನು ಎನ್ನುವುದು ಗೊತ್ತಾಗಲಿ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು.