Advertisement

ಆತಂಕ ಬೇಡ ಮುಂಜಾಗ್ರತೆ ಇರಲಿ

12:51 PM Apr 27, 2020 | Naveen |

ನಾರಾಯಣಪುರ: ಸಾಂಕ್ರಾಮಿಕವಾಗಿ ಹರಡುವ ಕೊವೀಡ್‌-19 ಬರದಂತೆ ತಡೆಗಟ್ಟಲು ಸಾರ್ವಜನಿಕರು ಆರೋಗ್ಯ ಇಲಾಖೆ ಸೂಚಿಸಿರುವ ಮುಂಜಾಗ್ರತಾ ಕ್ರಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ವಿದ್ಯಾಧರ ಜಿ. ಬಾಸನ್‌ ಹೇಳಿದರು.

Advertisement

ಇಲ್ಲಿನ ಕೆಬಿಜೆಎನ್‌ಎಲ್‌ ವಸತಿಗೃಹಗಳಲ್ಲಿ ವಾಸವಿರುವ ಸಿಬ್ಬಂದಿ ಸ್ಕ್ರೀನಿಂಗ್‌ ತಪಾಸಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೊವೀಡ್‌-19 ವೈರಸ್‌ ಹರಡುವಿಕೆ ಬಗ್ಗೆ ಜನರಲ್ಲಿನ ಆತಂಕ ನಿವಾರಿಸುವ ನಿಟ್ಟಿನಲ್ಲಿ ಕೆಬಿಜೆಎನ್‌ಎಲ್‌ ವತಿಯಿಂದ ವಸತಿಗೃಹದಲ್ಲಿ ವಾಸವಿರುವ ಸಿಬ್ಬಂದಿಯಲ್ಲಿ ಹಾಗೂ ಸಾರ್ವಜನಿಕರಲ್ಲಿ ವೈರಸ್‌ ಹರಡದಂತೆ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸುವುದು ಹಾಗೂ ಮುಂಜಾಗೃತ ಕ್ರಮಗಳ ಕೈಗೊಳ್ಳವ ಬಗ್ಗೆ ಮಾಹಿತಿ ಒದಗಿಸಿ ಸಿಬ್ಬಂದಿ ಸ್ಕ್ರೀನಿಂಗ್‌ ತಪಾಸಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು. ಎಇ ದೇವಿಂದ್ರಪ್ಪ, ಶಿವಪ್ಪ ಬಿರಾದಾರ, ಮಾಳಪ್ಪ, ನಾಗರಾಜ, ವಿಜಯ, ಮಂಜು, ಗೌಡಪ್ಪ, ರಮೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next