Advertisement

ಕೈದಿಗಳ ಆರೋಗ್ಯ ತಪಾಸಣೆಗೆ ಆರೋಗ್ಯ ಇಲಾಖೆ ಸೂಚನೆ

09:43 PM Mar 03, 2024 | Team Udayavani |

ಬೆಂಗಳೂರು: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನಿರ್ದೇಶನದಂತೆ ಕಾರಾಗೃಹದಲ್ಲಿರುವ ಕೈದಿಗಳಿಗೆ ನಿಯಮಿತವಾಗಿ ಎಚ್‌ಐವಿ, ಕ್ಷಯ, ಲೈಂಗಿಕವಾಗಿ ಹರಡುವ ರೋಗಗಳು ಹಾಗೂ ಇತರ ಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Advertisement

ಜಿಲ್ಲಾ ಮಟ್ಟದಲ್ಲಿ ಕೈದಿಗಳ ಆರೋಗ್ಯವನ್ನು ಜಿಲ್ಲಾಸ್ಪತ್ರೆ ವೈದ್ಯರ ತಂಡ ಮೂಲಕ ಪರಿಶೀಲಿಸಲಿದೆ. ಕೈದಿಗಳ ವೈದ್ಯಕೀಯ ತಪಾಸಣೆ ಕುರಿತು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನೆ ಸಭೆ ನಡೆಸಿ ವರದಿ ಸಲ್ಲಿಸಬೇಕು.
ಇನ್ನೂ ಕಾರ್ಯಕ್ರಮಾಧಿಕಾರಿಗಳು ಜೈಲಿನ ಅಡುಗೆ ಮನೆ, ನೀರು ಸರಬರಾಜು, ಕುಡಿಯುವ ನೀರಿನ ಗುಣಮಟ್ಟ, ತ್ಯಾಜ್ಯ ವಿಲೇವಾರಿ, ಶೌಚಾಲಯ, ಸೊಳ್ಳೆಗಳ ಲಾರ್ವ ಉತ್ಪತ್ತಿ ತಾಣಗಳ ನಾಶ ಸಹಿತ ಆರೋಗ್ಯ ಸಂಬಂಧಿಸಿದ ಇತರ ವ್ಯವಸ್ಥೆಯನ್ನು ಕಾಲ ಕಾಲಕ್ಕೆ ಪರಿಶೀಲಿಸಿ ಜೈಲು ನಿರ್ವಹಣಾಧಿಕಾರಿಗಳು, ಕಾರಾಗೃಹ ಆಸ್ಪತ್ರೆ ಸಿಬಂದಿ ಹಾಗೂ ಶುಶ್ರೂಷಕರಿಗೆ ಸೂಚನೆ ನೀಡಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next