Advertisement

 ನಾರಾಯಣ ಭಟ್‌ ಕೃತಿ ಮೋದಿಗೆ ಮೋದಿಯೇ ಸಾಟಿ; ಸಿಎಂ ಬೊಮ್ಮಾಯಿ ಅವರಿಂದ ಬಿಡುಗಡೆ

07:24 PM Sep 26, 2021 | Team Udayavani |

ಕಡಬ: ನಿವೃತ್ತ ಶಿಕ್ಷಕ ಟಿ. ನಾರಾಯಣ ಭಟ್‌ ಅವರು ರಚಿಸಿದ ಮೋದಿಗೆ ಮೋದಿಯೇ ಸಾಟಿ ಕೃತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಲೋಕಾರ್ಪಣೆಗೊಳಿಸಿದರು.

Advertisement

ಪ್ರಧಾನಿ ಮೋದಿ ಅವರ 71ನೇ ಜನ್ಮದಿನೋತ್ಸವದ ಗೌರವಾರ್ಪಣೆಯಾಗಿ ರಚಿಸಲ್ಪಟ್ಟ ಈ ಕೃತಿ ಇಡೀ ರಾಜ್ಯಕ್ಕೇ ಹೆಮ್ಮೆ ತಂದಿದೆ. ಅವರ ಜೀವನ ಸಾಧನೆಗಳನ್ನು ಕೃತಿ ರೂಪಕ್ಕಿಳಿಸಿದ ನಾರಾಯಣ ಭಟ್‌ ಅವರ ಕಾರ್ಯ ಶ್ಲಾಘನೀಯ ಎಂದು ಬೊಮ್ಮಾಯಿ ಶುಭ ಹಾರೈಸಿದರು.

ಬೆಳ್ತಂಗಡಿಯ ಶಾಸಕ ಹರೀಶ್‌ ಪೂಂಜ ಅವರ ಪ್ರಾಯೋಜಕತ್ವದ ಈ ಕೃತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೆಂದ್ರ ಹೆಗ್ಗಡೆಯವರು ಮುನ್ನುಡಿ ಬರೆದಿದಿದ್ದು, ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬೆನ್ನುಡಿ ಬರೆದಿರುತ್ತಾರೆ.

ಇದನ್ನೂ ಓದಿ:ಮೊರ್ಯರ ಶಿಲಾ ಸಮಾಧಿಗಳ ಬೆಟ್ಟ ವಿಶ್ವದ ಆಕರ್ಷಣೀಯ ಸ್ಥಳವಾಗಬೇಕಿದೆ

ಕೃತಿ ಬಿಡುಗಡೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಗೃಹಮಂತ್ರಿ ಆರಗ ಜ್ಞಾನೇಂದ್ರ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ,ಶಾಸಕರಾದ ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ರಾಜೇಶ್‌ ನಾೖಕ್‌, ಸಂಜೀವ ಮಠಂದೂರು, ಹರೀಶ್‌ ಪೂಂಜ, ಪ್ರಮುಖರಾದ ರಾಧಾಕೃಷ್ಣ ಕೆ.ಎಸ್‌., ಡಿ.ಕೃಷ್ಣರಾಜ್‌, ವಾಸುದೇವ ರಾವ್‌ ಕಕ್ಕಿನೇಜಿ, ರಾಮಕುಂಜದ ಸುಬ್ರಹ್ಮಣ್ಯ ಆರ್‌.ಎಂ. ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next