Advertisement

91 ವರ್ಷದ ಎನ್.ಡಿ.ತಿವಾರಿ, ಪುತ್ರ ಬಿಜೆಪಿಗೆ ಸೇರ್ಪಡೆ;ಪ್ಯಾಕೇಜ್ ಡೀಲ್

01:46 PM Jan 18, 2017 | Team Udayavani |

ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಎನ್ ಡಿ ತಿವಾರಿ ಬುಧವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿವಾಸದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಆದರೆ ಬಿಜೆಪಿ ಕಾಂಗ್ರೆಸ್ ನಿಂದ ಆಮದು ಮಾಡಿಕೊಂಡಿರುವ 91 ವರ್ಷದ ಹಿರಿಯ ಮುಖಂಡನ ಜೊತೆಗೆ ಪುತ್ರನನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿದೆ. 2 ರಾಜ್ಯಗಳ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಹಾಗೂ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಎನ್ ಡಿ ತಿವಾರಿ ಲೈಂಗಿಕ ಹಗರಣದ ಪ್ರಕರಣದ ವಿವಾದದ ನಂತರ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

Advertisement

ಎನ್ ಡಿ ತಿವಾರಿ ಲೈಂಗಿಕ ಹಗರಣದ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಪಿತೃತ್ವ ವಿವಾದದ ಕೇಸ್ ಸುಮಾರು 6 ವರ್ಷಗಳ ಕಾಲ ನ್ಯಾಯಾಲಯದಲ್ಲಿ ನಡೆದಿತ್ತು. ಬಳಿಕ ಡಿಎನ್ ಎ ಪರೀಕ್ಷೆಯಲ್ಲಿ ರೋಹಿತ್ ಶೇಖರ್ ತಿವಾರಿ ಮಗ ಎಂದು ಸಾಬೀತಾಗಿತ್ತು.

ಇಂದು ತಿವಾರಿ ಮತ್ತು ರೋಹಿತ್ ಶೇಖರ್ ಜೊತೆಗೂಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮುಂದಿನ ತಿಂಗಳು ಉತ್ತರಾಖಂಡ್ ನಲ್ಲಿ ಚುನಾವಣೆ ನಡೆಯಲಿದ್ದು, ಬ್ರಾಹ್ಮಣ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಎನ್ ಡಿ ತಿವಾರಿ ಮತ್ತು ಮಗನನ್ನು ಪಕ್ಷಕ್ಕೆ ಸೆಳೆದುಕೊಂಡಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.

ಎನ್ ಡಿ ತಿವಾರಿ ಉತ್ತರಾಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ, ಅಷ್ಟೇ ಅಲ್ಲ ಉತ್ತರಪ್ರದೇಶದ(ಉತ್ತರಪ್ರದೇಶದಿಂದ ಉತ್ತರಾಖಂಡ್ ಪ್ರತ್ಯೇಕ ರಾಜ್ಯವಾಗುವ ಮುನ್ನ) ಸಿಎಂ ಆಗಿಯೂ ಕಾರ್ಯನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next