ನವದೆಹಲಿ: ಭಾರತ ಮತ್ತು ಚೀನಾ ನಡುವೆ ಗಡಿ ವಿವಾದದ ಬಗ್ಗೆ ಸಮಗ್ರ ಒಪ್ಪಂದವಾಗುವ ವರೆಗೆ ಸಣ್ಣ ಮಟ್ಟದ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಹೀಗೆಂದು ಭೂಸೇನಾ ಮುಖ್ಯಸ್ಥ ಜ.ಎಂ.ಎಂ.ನರವಾಣೆ ಗುರುವಾರ ಹೇಳಿದ್ದಾರೆ.
ನವದೆಹಲಿಯಲ್ಲಿ ಪಿಎಚ್‌ಡಿ ಛೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚೀನಾ ಮುಂದಿ️ನ ದಿ️ನಗಳಲ್ಲಿ ಒಡ್ಡಲಿರುವ ಎಲ್ಲಾ ಸವಾಲುಗಳನ್ನು ನಮ್ಮ ಸೇನೆ ದಿ️ಟ್ಟವಾಗಿ ಎದುರಿಸಲಿದೆ ಎಂದು ಹೇಳಿದ್ದಾರೆ.
ಹಿಂದಿ️ನ ಸಂದರ್ಭದಲ್ಲಿಯೂ ಕೂಡ ಚೀನಾದ ದುಃಸ್ಸಾಹಸಕ್ಕೆ ಪ್ರತ್ಯುತ್ತರ ನೀಡಲಾಗಿದೆ ಎಂದರು. ಭಾರತ ಮತ್ತು ಚೀನಾ ನಡುವೆ ಸಮಗ್ರ ಗಡಿ ಒಪ್ಪಂದ ಜಾರಿಯಾಗಬೇಕು. ಅಲ್ಲಿಯ ವರೆಗೆ ಸಣ್ಣ ಪ್ರಮಾಣದ ಘರ್ಷಣೆಗಳು ಮುಂದುವರಿಯಲಿವೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಅವರು, ಆ ದೇಶದಲ್ಲಿ ಉಂಟಾಗಿರುವ ಬೆಳವಣಿಗೆ ದೇಶಕ್ಕೆ ನಿಜವಾಗಿಯೂ ಸವಾಲಿನದ್ದು. ಹೀಗಾಗಿ, ಪದೇ ಪದೆ ನಮ್ಮ ಸಿದ್ಧತೆಯನ್ನು ಆಗಾಗ ಪರಿಶೀಲನೆಗೆ ಒಳಪಡಿಸಿಕೊಳ್ಳಬೇಕಾಗುತ್ತದೆ ಎಂದರು. ಎಲ್ಲಾ ಹಂತದಲ್ಲಿಯೂ ಸವಾಲುಗಳಿಗೆ ಸಿದ್ಧವಾಗಿ ಇರಬೇಕಾಗಿ ಇರುವುದು ಸೇನೆಯ ಕರ್ತವ್ಯವೇ ಆಗಿದೆ ಎಂದು ಜ.ನರವಾಣೆ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ :ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿದೇಶಿ ಚಿತ್ರತಂಡಗಳ ಆಹ್ವಾನಕ್ಕೆ ಸಿಎಂ ಸಲಹೆ