ಬಂಟ್ವಾಳ: ಪ್ರಕೃತಿ ಸೌಂದರ್ಯದ ಶಿವಕ್ಷೇತ್ರ ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನದ ಪುನರ್ ನಿರ್ಮಾಣದ ಮಹಾಕಾರ್ಯದಲ್ಲಿ ಎಲ್ಲರೂ ಸಹಭಾಗಿಗಳಾಗಬೇಕು. ಜೀರ್ಣೋದ್ಧಾರ ಕಾರ್ಯಕ್ಕೆ ಸರಕಾರದಿಂದ ದೊರೆಯುವ ಎಲ್ಲ ಅನುದಾನಗಳನ್ನು ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ ಹೇಳಿದರು.
ಮಾಹಿತಿ ಫಲಕ
ಅವರು ನರಹರಿ ಪರ್ವತದಲ್ಲಿ ಜರಗಿದ ದೇವಸ್ಥಾನದ ಪುನರ್ ನಿರ್ಮಾಣದ ಪೂರ್ವಭಾವಿ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಗುಲ ಪುನರ್ ನಿರ್ಮಾಣದ ವಿವಿಧ ಹಂತಗಳ ಕಾಮಗಾರಿಗಳ ವಿವರ ಮತ್ತು ಅದಕ್ಕೆ ತಗಲುವ ವೆಚ್ಚಗಳ ಮಾಹಿತಿ , ವಾಸ್ತು ನೀಲನಕ್ಷೆಯನ್ನು ದೇವಸ್ಥಾನದಲ್ಲಿ ಫಲಕಗಳ ಮೂಲಕ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು. ದೇಗುಲ ಉತ್ಸವ ಸಮಿತಿ ಅಧ್ಯಕ್ಷ ಎ. ರುಕ್ಮಯ ಪೂಜಾರಿ ಪ್ರಸ್ತಾವಿಸಿ, ನರಹರಿ ಪರ್ವತ ಸುತ್ತಲಿನ 12 ಎಕ್ರೆಕಾಡು ಪ್ರದೇಶವನ್ನು ದೈವೀವನವನ್ನಾಗಿ ರೂಪಿಸುವಂತೆ ಸಚಿವರಲ್ಲಿ ವಿನಂತಿಸಿದರು.
ಬಂಟ್ವಾಳ ನಗರಾಭಿವೃದ್ಧಿ ಸಮಿತಿ ಅಧ್ಯಕ್ಷ ಸದಾಶಿವ ಬಂಗೇರ, ಆರ್‌ಎಫ್‌ಒ ಸುರೇಶ್, ಪ್ರೀತಂ, ಎ.ಪಿ.ಎಂ.ಸಿ. ಅಧ್ಯಕ್ಷ ಕೆ. ಪದ್ಮನಾಭ ರೈ, ಮೊಕ್ತೇಸರ ಪರಮೇಶ್ವರ ಮಯ್ಯ, ಕೃಷ್ಣ ನಾೖಕ್, ಸುಂದರ ಬಂಗೇರ, ಮಾಧವ ಶೆಣೈ, ಪ್ರತಿಭಾ ಎ. ರೈ, ಮೃಣಾಲಿನಿ ಸಿ. ನಾೖಕ್, ಎಂ.ಎನ್. ಕುಮಾರ್, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಜಿ. ನರೇಂದ್ರ ಬಾಬು, ಸಂಘಟನ ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಶಂಕರ ಆಚಾರ್ಯ, ಮೋಹನ್‌ರಾಜ್ ಚೌಟ, ಸತೀಶ ಪಿ. ಸಾಲಿಯಾನ್, ಗಣೇಶ ಅಮ್ಟೂರು, ರತ್ನಾಕರ ಪೂಜಾರಿ ಪಡೀಲ್, ತಾರಾನಾಥ ಪೂಜಾರಿ ಪಡೀಲ್, ದಾಮೋದರ್ ಮೆಲ್ಕಾರ್, ರುಕ್ಮಯ, ಕರುಣಾಕರ್ ಮೆಲ್ಕಾರ್, ಗಿರೀಶ್ ಸಾಲಿಯಾನ್ ಭಂಡಾರದ ಮನೆ, ಈಶ್ವರ್ ಆರ್.ಕೆ., ಪ್ರಕಾಶ್ ಬೋಳಂಗಡಿ, ಮೋಹನ್ ಪೂಜಾರಿ, ಪ್ರವೀಣಾ ಬೊಂಡಾಲ, ಜನಾರ್ದನ ಬೊಂಡಾಲ, ಮೋಹನ್ ನರಹರಿ ನಗರ, ದೇವದಾಸ ಬೊಂಡಾಲ, ದಯಾನಂದ ಬೊಂಡಾಲ, ಶ್ರೀ ಕ್ಷೇತ್ರದ ಮ್ಯಾನೇಜರ್ ಆನಂದ್ ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಪ್ರಶಾಂತ್ ಮಾರ್ಲ ಸ್ವಾಗತಿಸಿ, ಈ ವರೆಗಿನ ಅಭಿವೃದ್ಧಿ ಕಾಮಗಾರಿಗಳನ್ನು ವಿವರಿಸಿ, ದೇಗುಲದ ವಿಸ್ತಾರವಾದ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಿದ ಸಚಿವರನ್ನು ಅಭಿನಂದಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ|ಆತ್ಮರಂಜನ್ ರೈ ವಂದಿಸಿದರು. ಯಶು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ದೈವೀವನ ನಿರ್ಮಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.