Advertisement

ನೈಜ ಘಟನೆ ಆಧರಿಸಿದ ನರಗುಂದದ ಬಂಡಾಯ

04:01 PM Jul 02, 2017 | |

ಈ ವರ್ಷದ ಆರಂಭದಲ್ಲಿ “ಹೈಕಮಾಂಡ್‌’ ಎಂಬ ಚಿತ್ರ ಮಾಡುವುದಾಗಿ ಹೇಳಿದ್ದರು ನಿರ್ದೇಶಕ ನಾಗೇಂದ್ರ ಮಾಗಡಿ. ಚಿತ್ರದ ಕಥೆಯೇನೋ ರೆಡಿಯಂತೆ. ನಿರ್ಮಾಪಕರಾದ ಸತೀಶ್‌ ಜಾರಕಿಹೊಳಿ ಅವರಿಗೆ ಒಮ್ಮೆ ಫೈನಲ್‌ ರೀಡಿಂಗ್‌ ಕೊಟ್ಟು, ಮುಂದುವರೆಯೋಣ ಎಂದು ಅವರಿಗೆ ಕಾದಿದ್ದಾರೆ. ಈ ಮಧ್ಯೆ, ಅವರು ಸದ್ದಿಲ್ಲದೆ ಇನ್ನೊಂದು ಚಿತ್ರವನ್ನು ಶುರು ಮಾಡುವುದಕ್ಕೆ ಸಜ್ಜಾಗಿದ್ದಾರೆ. ಹೆಸರು “ನರಗುಂದ ಬಂಡಾಯ’.

Advertisement

“ನರಗುಂದ ಬಂಡಾಯ’ ಚಿತ್ರವು 1980ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ್ದು, ಆ ಘಟನೆಗೆ ಕಥೆಯ ಸ್ವರೂಪ ಕೊಟ್ಟಿರುವವರು ಸಿದ್ಧೇಶ್‌ ವಿರಕ್ತಮಠ. 1980ರಲ್ಲಿ ಗುಂಡೂರಾಯರು ಮುಖ್ಯಮಂತ್ರಿಗಳಾಗಿದ್ದಾಗ ನರಗುಂದ ಮತ್ತು ನವಿಲುಗುಂದದಲ್ಲಿ ರೈತರ ಚಳವಳಿ ದೊಡ್ಡ ಮಟ್ಟದಲ್ಲಿ ನಡೆದು, ಇಬ್ಬರು ರೈತರು ಹುತಾತ್ಮರಾಗಿದ್ದರು. ಈ ವಿಷಯವನ್ನಿಟ್ಟುಕೊಂಡು ಸಿದ್ಧೇಶ್‌ ವಿರಕ್ತಮಠ ಕಥೆ ರಚಿಸಿದ್ದಾರೆ. ಸಿದ್ಧೇಶ್‌ ಸಹ ನರಗುಂದದವರಾದ್ದರಿಂದ, ಈ ಘಟನೆಯನ್ನು ಹೇಳಬೇಕು ಎಂಬ ಕಾರಣಕ್ಕೆ ಅವರು ಈ ಚಿತ್ರದ ಮೂಲಕ ಹುತಾತ್ಮರಾದ ವೀರಣ್ಣ ಮತ್ತು ಬಸವರಾಜರ ಕಥೆ ಹೇಳುವುದಕ್ಕೆ ಹೊರಟಿದ್ದಾರೆ.

ಕಾಣಿಸಿಕೊಳ್ಳುತ್ತಿರುವ ರಕ್ಷಿತ್‌, ಈ ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಶುಭಾ ಪೂಂಜ ನಟಿಸುತ್ತಿದ್ದಾರೆ. ಮಿಕ್ಕಂತೆ ಸಾಧು ಕೋಕಿಲ, ಅಚ್ಯುತ್‌ ಕುಮಾರ್‌, ಅವಿನಾಶ್‌ ಮುಂತಾದವರು ಅಭಿನಯಿಸುತ್ತಿದ್ದಾರೆ.

ಅಂದ ಹಾಗೆ, “ನರಗುಂದ ಬಂಡಾಯ’ ಚಿತ್ರದ ಟೈಟಲ್‌ ಬಿಡುಗಡೆ ಇಂದು ಸಂಜೆ ರಾಯಚೂರಿನಲ್ಲಿ ನಡೆಯಲಿದೆ. ರಾಯಚೂರಿನ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಚಿತ್ರದ ಟೈಟಲ್‌ ಬಿಡುಗಡೆಯಾಗಲಿದ್ದು, ಆಗಸ್ಟ್‌ 18ರಂದು ಚಿತ್ರೀಕರಣ ಪ್ರಾರಂಭವಾಗಲಿದೆ

Advertisement

Udayavani is now on Telegram. Click here to join our channel and stay updated with the latest news.

Next