Advertisement

ನರಗುಂದಕ್ಕೆ ‘ಅಮೃತ ನಿರ್ಮಲ ನಗರ’

04:12 PM Jul 11, 2022 | Team Udayavani |

ನರಗುಂದ: ಬಂಡಾಯದ ನಾಡು ನರಗುಂದ ಈಗ ರಾಜ್ಯ ಸರ್ಕಾರದ ಅಮೃತ ನಿರ್ಮಲ ನಗರ ಯೋಜನೆಗೆ ಆಯ್ಕೆಯಾಗಿದ್ದು, 1 ಕೋಟಿ ರೂ. ವೆಚ್ಚದಲ್ಲಿ ಸೌಂದರ್ಯೀಕರಣಕ್ಕೆ ಸಜ್ಜಾಗುತ್ತಿದೆ.

Advertisement

ರಾಜ್ಯದ 75 ನಗರಗಳನ್ನು ಈ ಯೋಜನೆಯಡಿ ತರಲಾಗಿದ್ದು, ಇದರಲ್ಲಿ ನರಗುಂದ ಕೂಡಾ ಆಯ್ಕೆಯಾಗಿದೆ. 2021ರ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.

ಸಚಿವ ಸಿ.ಸಿ.ಪಾಟೀಲ ಮುತುವರ್ಜಿ: ಲೋಕೋಪ ಯೋಗಿ ಸಚಿವ ಸಿ.ಸಿ.ಪಾಟೀಲ ಅವರ ಮುತುವರ್ಜಿಯಿಂದ ರಾಜ್ಯದ 75 ನಗರಗಳ ಪೈಕಿ ಗದಗ ಜಿಲ್ಲೆಯ ಗದಗ-ಬೆಟಗೇರಿ, ರೋಣ ಹಾಗೂ ನರಗುಂದ ಪುರಸಭೆ ಆಯ್ಕೆಯಾಗಿದೆ. ಸರ್ಕಾರದಿಂದ ಮಂಜೂರಾದ 1 ಕೋಟಿ ರೂ. ವೆಚ್ಚದಲ್ಲಿ ಪುರಸಭೆ ಹಲವಾರು ಯೋಜನೆ ಹಾಕಿಕೊಂಡಿದ್ದು, ಈಗಾಗಲೇ ಯೋಜನೆ ಅನುಷ್ಠಾನ ಹಂತದಲ್ಲಿದೆ.

ಯೋಜನೆಗಳೇನು?: 30 ಲಕ್ಷ ರೂ. ವೆಚ್ಚದಲ್ಲಿ ಹಾಲಬಾವಿ ಕೊಳಚೆ ಪ್ರದೇಶದ ಪುರಸಭೆ ಜಾಗೆ, ಹಳೆ ಎಪಿಎಂಸಿ ಹತ್ತಿರ ಪುರಸಭೆ ಜಾಗ, ಬಸ್‌ ನಿಲ್ದಾಣ ಆವರಣದಲ್ಲಿ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ನ್ಯಾಪಕಿನ್‌ ವೆಂಡಿಂಗ್‌, ಡಿನ್ಪೋಸಲ್‌ ತಂತ್ರಜ್ಞಾನ ಯಂತ್ರ ಅಳವಡಿಸಿ ಶೌಚಾಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 22ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಧೂಳುಮುಕ್ತ ರಸ್ತೆಯನ್ನಾಗಿಸಲು 50 ಎಚ್‌ಪಿ ಟ್ರಾÂಕ್ಟರ್‌ ಮೌಂಟೆಡ್‌ ರೋಡ್‌ ಸ್ಕ್ರಿಪಿಂಗ್‌ ಮಶಿನ್‌ ಖರೀದಿಗೆ ಟೆಂಡರ್‌ ಕರೆಯಲಾಗಿದೆ. ನರಗುಂದ ಅರಸ ಬಾಬಾಸಾಹೇಬ ಭಾವೆ ಶೌರ್ಯ ಪರಾಕ್ರಮ ಸಾರುವ ಕೆಂಪಗಸಿ ಬಾಗಿಲು, ಬಾಬಾಸಾಹೇಬ ಅರಮನೆ ಸೌಂದಯೀìಕರಣ, ಬಾಬಾಸಾಹೇಬ ಕಲಾಭವನಕ್ಕೆ ವಾಲ್‌ ಪೇಂಟಿಂಗ್‌, ಸಾರ್ವಜನಿಕ ತ್ಯಾಜ್ಯ ವಿಲೇವಾರಿ ಜಾಗೃತಿಗೆ 4 ಕಾಂಪೌಂಡ್‌, 4 ಗೋಡೆಗಳಿಗೆ ಚಿತ್ರಸಹಿತ ಬರಹ ಪೂರ್ಣಗೊಂಡಿದೆ. 8 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ, ಮೂತ್ರಾಲಯಗಳ ನಿರ್ವಹಣೆಗೆ ವೆಹಿಕಲ್‌ ಮೌಂಟೆಡ್‌ ಜಿಟ್ಟಿಂಗ್‌ ಯಂತ್ರ ಖರೀದಿ, 10 ಲಕ್ಷ ರೂ.ವೆಚ್ಚದಲ್ಲಿ ಐತಿಹಾಸಿಕ ಕೆಂಪಗಸಿ, ಸುಣ್ಣದಗಸಿ, ಸರ್ವಜ್ಞ ವೃತ್ತಗಳಲ್ಲಿ ಸಸಿ ನೆಟ್ಟು ಸಂರಕ್ಷಣೆಗಾಗಿ ಟ್ರೀಗಾರ್ಡ್‌ ಅಳವಡಿಕೆಗೆ ಟೆಂಡರ್‌ ಕರೆಯಲಾಗಿದೆ.

Advertisement

ತ್ಯಾಜ್ಯ ವಿಲೇವಾರಿ ಸ್ಪಾಟ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ

12 ಲಕ್ಷ ರೂ.ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಬ್ಲಾಕ್‌ ಸ್ಪಾಟ್‌ಗಳಾದ ಚಾವಡಿ, ಹುಯಿಗೋಳ ದವಾಖಾನೆ, ಮಯೂರ್‌ ಟಾಕೀಸ್‌, ಕೆಂಪಗಸಿ, ಸುಣದಗಸಿ, ಜಗನ್ನಾಥ ಜೋಶಿ ವೃತ್ತ, ಹುರಳಿ ದವಾಖಾನೆ ಹತ್ತಿರ, ತರಕಾರಿ ಮಾರುಕಟ್ಟೆ ಸೇರಿ 8 ಕಡೆ ತ್ಯಾಜ್ಯ ವಿಲೇವಾರಿಗೆ ನಿಗಾ ವಹಿಸಲು ಸಿಸಿ ಕ್ಯಾಮೆರಾ ಅಳವಡಿಸಲು ಗುತ್ತಿಗೆ ನೀಡಲಾಗಿದೆ.

ಗಮನ ಸೆಳೆದ ಕಾರಂಜಿ

10 ಲಕ್ಷ ರೂ. ವೆಚ್ಚದಲ್ಲಿ ಪುರಸಭೆ ಆವರಣದ ಉದ್ಯಾನವನ, ಬಾಬಾಸಾಹೇಬ ಪುತ್ಥಳಿ ಮುಂಭಾಗ ಅಲಂಕಾರಿಕ ಸಸಿ, ನೀರಿನ ಕಾರಂಜಿ ಅಳವಡಿಸಿದ್ದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರ ಮುತುವರ್ಜಿಯಿಂದ ಅಮೃತ ನಿರ್ಮಲ ನಗರ ಯೋಜನೆಯಡಿ ಮಂಜೂರಾದ 1 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. –ಅಮಿತ್‌ ತಾರದಾಳೆ, ಪುರಸಭೆ ಮುಖ್ಯಾಧಿಕಾರಿ

-ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next