ನರಗುಂದ: ರಾಷ್ಟ್ರಾಭಿಮಾನ ನಮ್ಮ ಮನೆ ಮನಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಂಚಿನಾಳದ ಭಕ್ತಿ ಯೋಗಾಶ್ರಮದ
ಶ್ರೀ ಮಹೇಶಾನಂದ ಸ್ವಾಮಿಗಳು ಹೇಳಿದರು. ತಾಲೂಕಿನ ಶಿರೋಳ ಗ್ರಾಮದ ಯಚ್ಚರ ಸ್ವಾಮಿಗಳ ಗವಿಮಠದ ಜಾತ್ರಾ ಮಹೋತ್ಸವದ ಎರಡನೇ ದಿನದಂದು ನಡೆದ ರೈತ ಮತ್ತು ಸೈನಿಕ ಹಿತಚಿಂತನಾ ಸಭೆ ಹಾಗೂ ಪಾದಪೂಜೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಶ್ರೀಗಳು ಮಾತನಾಡಿ, ಭಾರತ ಉನ್ನತ ಸಂಸ್ಕೃತಿ, ಸಂಸ್ಕಾರ ಹೊಂದಿದ ದೇಶವಾಗಿದೆ ಎಂದರು.
Advertisement
ನಮ್ಮ ದೇಶ ಆಧುನಿಕ ಕೃಷಿಯಿಂದ ವಿಮುಖವಾಗಿ ಸಾವಯವ ಕೃಷಿ ಕಡೆಗೆ ಬರುತ್ತಿರುವದನ್ನು ಕಾಣಬಹುದಾಗಿದೆ. ವಿಷಮುಕ್ತ ಕೃಷಿ ಆಗಬೇಕಾದರೆ ರೈತರು ಪ್ರತಿ ಮನೆಯಲ್ಲಿ ದೇಶಿಯ ಹಸು ಸಾಕಬೇಕು. ಅದರ ಹಾಲಿನಿಂದ ಉತ್ತಮ ಆರೋಗ್ಯ, ಸಗಣಿಯಿಂದ ಫಲವತ್ತಾದ ಬೆಳೆ ಪಡೆದು 100 ವರ್ಷ ಗಟ್ಟಿಯಾಗಿ ಬದುಕಲು ಸಾಧ್ಯ. ನಮಗೆ ಅನ್ನ ನೀಡುವ ರೈತ ಮತ್ತು ದೇಶ ಕಾಯುವ ಸೆ„ನಿಕರಿಗೆ ಪಾದಪೂಜೆ ಮಾಡಿ ಅವರ ಸ್ಮರಣೆ ಮಾಡ್ಡಿದ್ದು ನಮ್ಮಜೀವನದಲ್ಲಿ ಇದು ಹೆಮ್ಮೆಯ ವಿಷಯ ಎಂದರು.
ಪರಂಪರೆ ದೇಶ. ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಜಗತ್ತಿಗೆ ಗುರುವಾಗಿ ಮೆರೆದಿದೆ. ಈಗಿನ ಆಧುನಿಕ ಕಾಲದಲ್ಲಿ ನಾವು ನಮ್ಮ ಮಕ್ಕಳಿಗೆ ಅದನ್ನು ಹೇಳುವಲ್ಲಿ ಎಡವಿದ್ದೇವೆ. ತಮ್ಮ ಕುಟುಂಬದಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸುವಲ್ಲಿ ಆಧ್ಯಾತ್ಮ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಹುಬ್ಬಳ್ಳಿಯ ನಿವೃತ್ತ ಸೇನಾಧಿಕಾರಿ ಸುಧೀಂದ್ರ ಇಟ್ನಾಳ ಮಾತನಾಡಿ, ನಮ್ಮ ಶಾಲೆ, ಕಾಲೇಜು ಗಳಲ್ಲಿ ನಮ್ಮ ಮಕ್ಕಳಿಗೆ ನಮ್ಮ ದೇಶಾಭಿಮಾನ ಮೂಡಿಸುವ ವಿಷಯಗಳನ್ನು ಅಳವಡಿಸಬೇಕು. ಸೈನಿಕ ಶಿಕ್ಷಣ ನೀಡಬೇಕಾಗಿದೆ ಎಂದರು.
Related Articles
ಹಾಗೂ ಸೈನಿಕರಿಗೆ ಜಾತ್ರಾ ಮಹೋತ್ಸವದಲ್ಲಿ ಪಾದಪೂಜೆ ಮಾಡಿ ಸನ್ಮಾನಿಸಲಾಯಿತು.
Advertisement
ಕಾರ್ಯಕ್ರಮದಲ್ಲಿ ಯಚ್ಚರಸ್ವಾಮಿ ಗವಿಮಠದ ಶ್ರೀ ಅಭಿನವ ಯಚ್ಚರ ಸ್ವಾಮಿಗಳು, ಹುಬ್ಬಳ್ಳಿ ಮಹಾನಗರ ಪಾಲಿಕೆ ಮಹಾಪೌರರು ರಾಮಣ್ಣ ಬಡಿಗೇರ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಜಾನಮಟ್ಟಿ, ಮೃತ್ಯುಂಜಯ ವಸ್ತ್ರದ, ಬಾಬು ಪತ್ತಾರ, ಲಿಂಗಬಸು ಅಂಗಡಿ, ಕೆ.ಬಿ. ಸಾಸಳ್ಳಿ, ಶ್ರೀಕಾಂತಗೌಡ ಪಾಟೀಲ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಹನಮಂತಗೌಡತಿರಕನಗೌಡ್ರ, ಉಪಾಧ್ಯಕ್ಷ ಪ್ರಕಾಶ ಸೊಬರದ, ಕಾರ್ಯದರ್ಶಿ ದ್ಯಾಮಣ್ಣ ಶಾಂತಗೇರಿ, ಸಹ ಕಾರ್ಯದರ್ಶಿ ರವಿ ಆಲಗುಂಡಿ
ಮುಂತಾದವರಿದ್ದರು.