ನವದೆಹಲಿ:ನಾರದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸೋಮವಾರ(ಮೇ 17) ಪಶ್ಚಿಮಬಂಗಾಳ ಕ್ಯಾಬಿನೆಟ್ ಮಂತ್ರಿಗಳಾದ ಫಿರ್ಹಾದ್ ಹಕೀಮ್ , ಸುಬ್ರತಾ ಮುಖರ್ಜಿ ಹಾಗೂ ಟಿಎಂಸಿ ಶಾಸಕ ಮದನ್ ಮಿತ್ರ, ಪಶ್ಚಿಮಬಂಗಾಳದ ಮಾಜಿ ಸಚಿವ ಸೋವನ್ ಚಟರ್ಜಿಯನ್ನು ಬಂಧಿಸಿದೆ.
ಇದನ್ನೂ ಓದಿ:ಟಗ್ ಸಿಬ್ಬಂದಿ ರಕ್ಷಣಾ ಕಾರ್ಯ: ಕೋಸ್ಟ್ ಗಾರ್ಡ್ ಡಿಐಜಿ ಜತೆ ಕೋಟ, ಕಟೀಲ್, ಡಿಸಿ ಚರ್ಚೆ
ನಾರದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸೋಮವಾರ ಬಂಧಿತರನ್ನು ಕೋರ್ಟ್ ಗೆ ಹಾಜರುಪಡಿಸುವ ಮೊದಲು ಆರೋಪಪಟ್ಟಿ ಸಲ್ಲಿಸಲಿದೆ ಎಂದು ತಿಳಿಸಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ನಾಲ್ವರು ಮಾಜಿ ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಶ್ಚಿಮಬಂಗಾಳ ಗವರ್ನರ್ ಜಗದೀಪ್ ಧಾನ್ಕರ್ ಅನುಮತಿ ನೀಡಿದ ಒಂದು ವಾರದ ನಂತರ ಈ ಬೆಳವಣಿಗೆ ನಡೆದಿರುವುದಾಗಿ ವರದಿ ವಿವರಿಸಿದೆ.
ಏನಿದು ಪ್ರಕರಣ:
ಪಶ್ಚಿಮಬಂಗಾಳ ಚುನಾವಣೆಗೂ ಮುನ್ನ ನಾರದ ಎಂಬ ಸುದ್ದಿ ವಾಹಿನಿ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಟಿಎಂಸಿ ನಾಯಕರು ಲಂಚ ಸ್ವೀಕರಿಸಿರುವುದು ಬಯಲಾಗಿತ್ತು. ಈ ದೃಶ್ಯದ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, 2017ರ ಮಾರ್ಚ್ ನಲ್ಲಿ ಕೋಲ್ಕತಾ ಹೈಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.