ಎಂದು ಸೋಲನ್ನು ವಿಶ್ಲೇಷಿಸುತ್ತಿದ್ದ ವೀನಸ್ ವಿಲಿಯಮ್ಸ್ ಸೋದರಿ ಸೆರೆನಾ ವಿಲಿಯಮ್ಸ್ ಸೋಲನ್ನು ಹೇಗೆ ವಿಶ್ಲೇಷಿಸುತ್ತಾರೋ ಗೊತ್ತಿಲ್ಲ. ಆದರೆ ಸೆರೆನಾ ಸೋಲು ಮಾತ್ರ ಅದಾವುದೋ ಮೂಲೆಯಿಂದ ಬಂದು ಅಪ್ಪಳಿಸಿದ್ದರೂ, ಆಕೆಯನ್ನು ಸೋಲಿಸಿದ ಜಪಾನ್‌ನ ನವೋಮಿ ಒಸಾಕಾ ಮಾತ್ರ ಈಗ ಸ್ವದೇಶದಲ್ಲಷ್ಟೇ ಅಲ್ಲ ವಿಶ್ವವನ್ನೇ ದಿಗ್ಬ†ಮೆಗೊಳಿಸಿದೆ.
Advertisement
ಹೌದು, ನವೋಮಿ ಒಸಾಕಾ ಕನಸಲ್ಲೂ ಅಮೆರಿಕದ ನೆಲದಲ್ಲೇ ವಿಶ್ವ ಟೆನಿಸ್‌ನ ಟಾಪ್ ಮೋಸ್ಟ್ ಆಟಗಾತಿಯನ್ನು ಸೋಲಿಸಿ ಚಾಂಪಿಯನ್ ಆಗುತ್ತೇನೆ ಎಂದುಕೊಂಡಿರಲಿಲ್ಲವೇನೊ. ಆದರೆ ಕನಸು ನನಸಾಗಿದೆ. ಒಸಾಕಾ ಪ್ರಸಕ್ತ ಸಾಲಿನ ಯುಎಸ್ ಓಪನ್ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡ ಜಪಾನ್‌ನ ಪ್ರಪ್ರಥಮ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಸಾಕಾ ಪಾಲಿಗೆ ಇದು ಚೊಚ್ಚಲ ಗ್ರಾಂಡ್ ಸ್ಲಾಮ್ ಫೈನಲ್ ಆಗಿತ್ತು. ಅದೇ ಪಂದ್ಯದಲ್ಲೇ ಸಾಕಷ್ಟು ಅನುಭವಿ ಆಟಗಾರ್ತಿಯಾಗಿರುವ ಸೆರೆನಾ ಅವರನ್ನು 6-2, 6-4 ನೇರ ಸೆಟ್‌ಗಳಿಂದ ಮಣಿಸಿ ಪ್ರಾಬಲ್ಯ ಮೆರೆದಿರುವುದು ವಿಶೇಷ.
ನವೋಮಿ ಒಸಾಕಾಗೆ ಇದೇ ಮೊದಲ ಗ್ರಾಂಡ್ ಸ್ಲಾಮ್ ಟೂರ್ನಿಯೇನಲ್ಲ. 2016ರಲ್ಲಿ ಚೊಚ್ಚಲ ಗ್ರಾಂಡ್ ಸ್ಲಾಮ್ ಟೂರ್ನಿ ಆಡಿದ ಒಸಾಕಾ, ಮೊದಲ ಮೂರ್‍ನಾಲ್ಕು ಸುತ್ತುಗಳಲ್ಲೇ ನಿರ್ಗಮಿಸುತ್ತ ಬಂದಿದ್ದರು. ಅಲ್ಲಿಂದ ಇಲ್ಲಿಯ ವರೆಗಿನ ಅವರ ಎಲ್ಲಾ ಪಂದ್ಯಗಳ ಫಲಿತಾಂಶ ಗಮನಿಸಿದಾಗ ಪ್ರಸಕ್ತ ಸಾಲಿನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವುದು ಸ್ಪಷ್ಟ.
Related Articles
ಸಾಮಾನ್ಯ ಎನಿಸಿದರೂ ಟೆನಿಸ್ ಸಾಧಕಿಯೊಬ್ಬರಿಗೆ ಇಂಥ ನಡತೆಗಳು ಒಮ್ಮೊಮ್ಮೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿ ಬಿಡುತ್ತದೆ. ಸೆರೆನಾ ಮಾಡಿಕೊಂಡಿದ್ದೂ ಅದನ್ನೇ. ಎರಡನೇ ಸೆಟ್ ಆಟದ ಮಧ್ಯೆ ರೆಫರಿ ಕಾರ್ಲೊಸ್ ರಾಮೋಸ್ ತಪ್ಪು ನಿರ್ಣಯ ನೀಡಿದರೆಂದು ಸೆರೆನಾ ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಕ್ಷಣ ಸೆರೆನಾ ಮತ್ತು ರೆಫರಿ ಕಾರ್ಲೊಸ್ ನಡುವೆ ವಾಗ್ವಾದವೇ ನಡೆಯಿತು. ಇಷ್ಟೆಲ್ಲಾ ನಡೆದ ಮೇಲೆ ಕಾರ್ಲೊಸ್ ಸುಮ್ಮನಾಗಲಿಲ್ಲ. ಸೆರೆನಾ ಶಿಸ್ತು ಉಲ್ಲಂಸಿದ್ದಾಗಿ ಪೆನಾಲ್ಟಿ ಪಾಯಿಂಟ್ ಘೋಷಿಸಿದರು. ಇದರಿಂದ ಇನ್ನಷ್ಟು ಸಿಡಿಮಿಡಿಗೊಂಡ ಸೆರೆನಾ ಅಷ್ಟೊಂದು ಮೇರು ಸಾಧಕಿಯಾಗಿ ಸಣ್ಣತನ ಪ್ರದರ್ಶಿಸಿ ಟೀಕೆಗೆ ಗುರಿಯಾಗಿದ್ದಾರೆ. ಸೆರೆನಾ ವೃತ್ತಿ ಜೀವನದಲ್ಲಿ ಇಂಥ ಇನ್ನೂ ಒಂದಿಷ್ಟು ಘಟನೆಗಳು ಸಿಕ್ಕಾವು. ಆದರೆ ಈ ಘಟನೆ ಅವರ ಪಾಲಿಗೆ ಕಪ್ಪು ಚುಕ್ಕೆ ಎನ್ನುವುದರಲ್ಲಿ ಅನುಮಾನವಿಲ್ಲ. ಜತೆಗೆ ತಾಯ್ನೆಲದಲ್ಲೇ ಇದೇ ಮೊದಲ ಬಾರಿಗೆ ಗ್ರಾಂಡ್ ಸ್ಲಾಮ್ ಫೈನಲ್ ಪ್ರವೇಶಿಸಿದ್ದ ಯುವ ಆಟಗಾರ್ತಿಯ ವಿರುದ್ಧದ ಸೋಲು ಒಂದು ದೊಡ್ಡ ಮುಖಭಂಗ.
Advertisement
ನೊವಾಕ್ ಪ್ರಾಬಲ್ಯಸೆರ್ಬಿಯಾದ ಸ್ಟಾರ್ ಆಟಗಾರ ನೊವಾಕ್ ಜೋಕೊವಿಚ್ ಪ್ರಸಕ್ತ ಸಾಲಿನ ಯುಎಸ್ ಓಪನ್ ಟೂರ್ನಿಯ ಚಾಂಪಿಯನ್. ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊರನ್ನು ಮಣಿಸಿದ ವಿಶ್ವ ನಂ.3 ಆಟಗಾರ ಜೋಕೊವಿಚ್ ಮತ್ತೂಮ್ಮೆ ಪ್ರಾಬಲ್ಯ ಸಾಬೀತು ಪಡಿಸಿದ್ದಾರೆ. ಇದು ನೊವಾಕ್‌ಗೆ ವೃತ್ತಿ ಜೀವನದ ಮೂರನೇ ಯುಎಸ್ ಓಪನ್ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಒಟ್ಟಾರೆ 14ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ. 6-3, 7-6(7-4), 6-3 ಅಂತರದಿಂದ ಪೊಟ್ರೋ ಮಣಿಸಿದ ನೊವಾಕ್ ಅವರು, ಟಿನಿಸ್‌ನ ದಿಗ್ಗಜ ರೋಜರ್ ಫೆಡರರ್ ಅವರ ದಾರಿ ತುಳಿದಿದ್ದಾರೆ. ಸಾಧನೆಯ ಬೆನ್ನತ್ತಿದ್ದಾರೆ. ಡಬಲ್ಸ್ ಕಿರೀಟ; ಫೆಡ್ ಇತಿಹಾಸ
ಯುಎಸ್ ಓಪನ್ ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲಿ ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಮತ್ತು ಅಮೆರಿಕದ ಲಿಜೆಲ್ ಹ್ಯೂಬರ್ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಮೆರಿಕದವರೇ ಆದ ಲಿಸಾ ರೇಮಂಡ್ ಮತ್ತು ಆಸ್ಟ್ರೇಲಿಯಾದ ಸಮಂ ಜೋಡಿಯನ್ನು 6-3, 7-6(6) ಅಂತರದಿಂದ ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈ ಜೋಡಿಗೆ ಇದು ನಾಲ್ಕನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯಾಗಿದೆ. ಇನ್ನು ಕಾರಾ ಬ್ಲ್ಯಾಕ್ ಅವರು ಮಿಶ್ರ ಡಬಲ್ಸ್‌ನಲ್ಲಿ ಭಾರತದ ಲಿಯಾಂಡರ್ ಪೇಸ್ ಅವರ ಜೊತೆಗೂಡಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಗಣಪತಿ ಅಗ್ನಿಹೋತ್ರಿ