Advertisement
ವಿಶ್ವದ 44ನೇ ರ್‍ಯಾಂಕಿಂಗ್ ಆಟಗಾರ್ತಿಯಾಗಿರುವ ನವೋಮಿ ಒಸಾಕಾ ನಿರೀಕ್ಷೆಗೂ ಮಿಗಿಲಾದ ಹೋರಾಟ ಸಂಘಟಿಸಿ 6-3, 6-0 ಅಂತರದಿಂದ ಸಿಮೋನಾ ಹಾಲೆಪ್‌ಗೆ ಆಘಾತವಿಕ್ಕಿದರು. ದರಿಯಾ ಕಸತ್ಕಿನಾ 3 ಸೆಟ್‌ಗಳ ಕಾದಾಟ ನಡೆಸಿ ವೀನಸ್ ವಿಲಿಯಮ್ಸ್ ವಿರುದ್ಧ 4-6, 6-4, 7-5 ಅಂತರದ ರೋಚಕ ವಿಜಯ ಸಾಧಿಸಿದರು.
ಸಿಮೋನಾ ಹಾಲೆಪ್ ಮಾಜಿ ಚಾಂಪಿಯನ್ ಆಗಿದ್ದು, ಒಸಾಕಾ ರಭಸಕ್ಕೆ ತತ್ತರಿಸಿ ಹೋದರು. ಎಷ್ಟರ ಮಟ್ಟಿಗೆಂದರೆ, 2ನೇ ಸೆಟ್‌ನಲ್ಲಿ ಅವರಿಗೆ ಒಂದೂ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಒಸಾಕಾ ಕೇವಲ 64 ನಿಮಿಷಗಳಲ್ಲಿ ರೊಮೇನಿಯನ್ ಆಟಗಾರ್ತಿಯನ್ನು ಹಿಮ್ಮೆಟ್ಟಿಸಲು ಒಸಾಕಾಗೆ ಕೇವಲ 64 ನಿಮಿಷ ಸಾಕಾಯಿತು. “ನನ್ನ ಸೋಲಿಗೆ ಯಾವುದೇ ಸಬೂಬುಗಳಿಲ್ಲ. ಒಸಾಕಾ ಉತ್ತಮ ಮಟ್ಟದ ಆಟವಾಡಿದರು. ನಾನು ಸಾಕಷ್ಟು ತಪ್ಪು ಹೊಡೆತಗಳನ್ನಿಕ್ಕಿದೆ. ಟೆನಿಸ್‌ನಲ್ಲೀಗ ಯುವ ಆಟಗಾರ್ತಿಯರ ಹವಾ ಬೀಸುತ್ತಿರುವುದಕ್ಕೆ ಈ ಎರಡೂ ಸೆಮಿಫೈನಲ್ ಸಾಕ್ಷಿ…’ ಎಂದು ಸಿಮೋನಾ ಹಾಲೆಪ್ ಪ್ರತಿಕ್ರಿಯಿಸಿದರು. ಅವರು 3 ವರ್ಷಗಳ ಹಿಂದೆ ಜೆಲೆನಾ ಜಾನ್ಕೋವಿಕ್‌ಗೆ ಸೋಲುಣಿಸಿ ಇಂಡಿಯನ್ ವೆಲ್ಸ್ ಪ್ರಶಸ್ತಿ ಜಯಿಸಿದ್ದರು.
Related Articles
Advertisement
“ಫೈನಲ್ ತಲುಪಿದ್ದಕ್ಕೆ ಖುಷಿಯಾಗುತ್ತಿದೆ. ಜತೆಗೆ ನರ್ವಸ್ ಕೂಡ ಆಗಿದ್ದೇನೆ’ ಎಂಬುದು ನವೋಮಿ ಒಸಾಕಾ ಪ್ರತಿಕ್ರಿಯೆ.ವೀನಸ್ ವಿಲಿಯಮ್ಸ್ ಅವರನ್ನು ಮಣಿಸುವ ಮೂಲಕ ಈ ಕೂಟದಲ್ಲಿ ದರಿಯಾ ಕಸತ್ಕಿನಾ ಸತತ 3ನೇ ಟಾಪ್-10 ಆಟಗಾರ್ತಿಯನ್ನು ಮನೆಗಟ್ಟಿದಂತಾಯಿತು. ಇವರಿಬ್ಬರ ಕಾಳಗ 2 ಗಂಟೆ, 49 ನಿಮಿಷಗಳ ತನಕ ಸಾಗಿತು.