Advertisement

ಸಿಎಂ ಸಮ್ಮುಖದಲ್ಲೇ ಪಠ್ಯ ಪರಿಷ್ಕರಣೆ ಕುರಿತು ಅಸಮಾಧಾನ ತೋರಿದ ಸ್ಪಟಿಕಪುರಿ ಶ್ರೀ

01:33 PM Jun 27, 2022 | Team Udayavani |

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಾದ ಲೋಪದ ಬಗ್ಗೆ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವದೂತ ಸ್ವಾಮೀಜಿಗಳು ಸರಕಾರಿ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯದ ಎರಡು ದೊಡ್ಡ ಸಮುದಾಯವನ್ನು ಒಡೆಯುವುದಕ್ಕೆ ಹಿಡನ್ ಅಜೆಂಡಾಗಳು ಕೆಲಸ ಮಾಡುತ್ತಿವೆ ಎಂದು‌ ಸಿಎಂ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲೇ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಪೇಗೌಡ, ಬಸವಣ್ಣ, ಕುವೆಂಪು, ಅಂಬೇಡ್ಕರ್ ಗೆ ಅಪಮಾನವಾಗುತ್ತಿರುವುದು ಇದೇ‌ ಮೊದಲಲ್ಲ. ಹಲವು ವರ್ಷಗಳಿಂದಲೂ ಆಗುತ್ತಿದೆ. ಆದರೆ ರಾಜ್ಯ ಸರಕಾರ ಇದಕ್ಕೆ ಅವಕಾಶ ನೀಡಬಾರದು. ಆ ದೋಷಗಳನ್ನು ಸರಕಾರ ಬಗೆಹರಿಸಿದೆ ಎಂಬ ಭರವಸೆ ಇದೆ ಎಂದು ಹೇಳಿದರು.

ಪಠ್ಯ ಪುಸ್ತಕ ಪರಿಷ್ಕರಣೆಯಂಥ ಸಮಿತಿಗೆ ಅಧ್ಯಕ್ಷರ ನೇಮಕ ಮಾಡುವಾಗ ತಪ್ಪುಗಳಿಗೆ ಅವಕಾಶ ನೀಡಬಾರದು. ಅಧ್ಯಯನ ಶೀಲರನ್ನು ನೇಮಕ ಮಾಡಬಾರದು. ಎಡ, ಬಲ, ಎಂಬ ಸೈದ್ಧಾಂತಿಕ ವ್ಯಕ್ತಿಗಳನ್ನು ಆಯ್ಕೆ ಮಾಡದೇ ನೇರ ಮನಸ್ಥಿತಿ ಇರುವ ಸ್ಥಿತ ಪ್ರಜ್ಞರನ್ನು ನೇಮಕ ಮಾಡಬೇಕಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ:ಪ್ರತ್ಯೇಕ ರಾಜ್ಯ ಹೇಳಿಕೆಯನ್ನು ಪುನರ್ ಪರಿಶೀಲನೆ ನಡೆಸಿಕೊಳ್ಳಲಿ: ಗೃಹ ಸಚಿವ ಆರಗ ಜ್ಣಾನೇಂದ್ರ

ಅರ್ಹರು ನೇಮಕವಾಗದೇ ಇದ್ದರೇ ವೈಯಕ್ತಿಕ ವಿಲಕ್ಷಣಗಳು ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗುತ್ತವೆ. ಮಕ್ಕಳು ತಪ್ಪು ಉತ್ತರ ಬರೆಯಬೇಕಾಗುತ್ತದೆ. ಹೀಗಾಗಿ ರಾಜ್ಯ ಸರಕಾರ ಈ ತಪ್ಪನ್ನು ಸರಿಪಡಿಸುತ್ತದೆ ಎಂಬ ವಿಶ್ವಾಸವಿದೆ. ಅಂಬೇಡ್ಕರ್, ಬಸವ, ಕೆಂಪೇಗೌಡ, ಕುವೆಂಪು ಅವರ ಗೌರವ ಎತ್ತಿ ಹಿಡಿಯುತ್ತದೆ ಎಂಬ ವಿಶ್ವಾಸವಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next