Advertisement

Saripodhaa Sanivaaram: ಬೆಂಗಳೂರು ರೌಂಡ್ಸ್‌ ಹಾಕಿದ ನಾನಿ

03:27 PM Aug 29, 2024 | Team Udayavani |

ತೆಲುಗಿನಲ್ಲಿ ನ್ಯಾಚುರಲ್‌ ಸ್ಟಾರ್‌ ಎಂದೇ ಖ್ಯಾತಿ ಪಡೆದಿರುವ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರ ನಟನೆಯ “ಸರಿಪೋದಾ ಶನಿವಾರಂ’ ತಮಿಳು ಸಿನಿಮಾ ಕನ್ನಡದಲ್ಲಿ “ಸೂರ್ಯನ ಸಾಟರ್ಡೆ’ ಹೆಸರಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರದ ವೇಳೆ ಮಾತನಾಡಿದ ನಾನಿ, ಕನ್ನಡ ಸಿನಿಮಾಗಳು ಹಾಗೂ ಪ್ರಶಸ್ತಿಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

“ಸೂರ್ಯನ ಸಾಟರ್ಡೆ’ ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿಯೂ ಸಿನಿಮಾ ತೆರೆಗೆ ಬರುತ್ತಿದ್ದು, ಥಿಯೇಟರ್‌ನಲ್ಲಿ ಸಿನಿಮಾ ನೋಡುವಂತೆ ಮನವಿ ಮಾಡಿಕೊಂಡರು. ನಾನಿ ದೊಡ್ಮನೆಗೂ ವಿಸಿಟ್‌ ಹಾಕಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಿ ತಮ್ಮ ಚಿತ್ರದ ಬಗ್ಗೆ ಒಂದಷ್ಟು ಮಾತಕತೆ ನಡೆಸಿದ್ದಾರೆ. ಈ ಹಿಂದೆ ನಾನಿ ನಟನೆಯ “ಹಾಯ್‌ ನಾನಾ’ ಸಿನಿಮಾವನ್ನು ನೋಡಿ ಶಿವಣ್ಣ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು.

“ಸೂರ್ಯನ ಸಾಟರ್ಡೆ’ ಚಿತ್ರವನ್ನು ವಿವೇಕ್‌ ಆತ್ರೇಯಾ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ “ಅಂಟೆ ಸುಂದರಾನಿಕಿ’ ಸಿನಿಮಾದಲ್ಲೂ ಇದೇನಿರ್ದೇಶಕ-ನಾಯಕ ನಟ ಒಂದಾಗಿದ್ದರು. ಇದು ಫ್ಯಾಮಿಲಿ ಮನರಂಜನೆ ಜತೆ ಹಾಸ್ಯಮಯ ಚಿತ್ರವಾಗಿತ್ತು. ಸೂರ್ಯನ ಸಾಟರ್ಡೆ ಸಿನಿಮಾ ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಗಳಲ್ಲಿ ತೆರೆ ಕಾಣುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next