ಚೆನ್ನೈ: ಖ್ಯಾತ ತೆಲುಗು ನಟ ನಾನಿ ಹಾಗೂ ಮಲಯಾಳಂ ಬೆಡಗಿ ನಜ್ರಿಯ ಜೋಡಿಯಾಗಿ ನಟಿಸುತ್ತಿರುವ ‘ಅಂಟೆ ಸುಂದರಾನಿಕಿ’ ಚಿತ್ರದ ಟೈಟಲ್ ಟೀಸರ್ ಅನ್ನು ಚಿತ್ರ ತಂಡ ಶನಿವಾರ ಬಿಡುಗಡೆ ಮಾಡಿದೆ.
ತೆಲುಗು ಚಿತ್ರರಂಗದಲ್ಲಿ ನಾನಿ ಅವರ 28ನೇ ಸಿನಿಮಾ ಇದಾಗಿದ್ದು, ನಟಿ ನಜ್ರಿಯಗೆ ಇದು ಚೊಚ್ಚಲ ಸಿನಿಮಾ. ಅಂಟೆ ಸುಂದರಾನಿಕಿ ಮೂಲಕ ನಜ್ರಿಯ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.
ಈ ಸಿನಿಮಾದ ಕುರಿತಾಗಿ ನಟಿ ನಜ್ರಿಯ ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸಿಕೊಂಡಿದ್ದು. ತೆಲುಗು ಚಿತ್ರರಂಗದಲ್ಲಿ ಇದು ನನ್ನ ಮೊದಲ ಸಿನಿಮಾ . ಈ ಚಿತ್ರದಲ್ಲಿ ನಟಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ ಎಂದಿದ್ದಾರೆ.
ಸಿನಿಮಾದ ಕುರಿತಾಗಿ ನಟ ನಾನಿ ಕೂಡಾ ತಮ್ಮ ಟ್ವಿಟರ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Related Articles
ಇನ್ನೂ ಓದಿ:ಡಿಜಿಟಲ್ ಗ್ರಂಥಾಲಯಕ್ಕೆ 6ಲಕ್ಷ ಸದಸ್ಯತ್ವ
ಈ ಹಿಂದೆ ತೆಲುಗು ಚಿತ್ರರಂಗಕ್ಕೆ ಬ್ರೋಚೇವರೇವರ ಹಾಗೂ ಮೆನ್ಟಲ್ ಮಾಧಿಲೋ ನಂತಹಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ನಿರ್ದೇಶಕ ವಿವೇಕ್ ಅಥ್ರೇಯ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇನ್ನು ಸಂಗೀತದಲ್ಲಿ ವಿವೇಕ್ ಸಾಗರ್, ಛಾಯಾಗ್ರಹಣದಲ್ಲಿ ನಿಕೇತ್ ಬೊಮ್ಮಿ, ವಿವೇಕ್ ಅಥ್ರೇಯಗೆ ಸಾಥ್ ನೀಡಲಿದ್ದಾರೆ.
ಚಿತ್ರದ ಚಿತ್ರಿಕರಣ ಇನ್ನಷ್ಟೇ ಆರಂಭಗೊಳ್ಳಬೇಕಿದ್ದು, 2021ರ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿದೆ.