Advertisement

Kerala: ಕೇರಳಕ್ಕೆ ಬರಲ್ಲ ನಂದಿನಿ ಮಳಿಗೆ

08:32 PM Jun 28, 2023 | Pranav MS |

ತಿರುವನಂತಪುರ: ಕೇರಳದಲ್ಲಿ ಮಾರುಕಟ್ಟೆ ವಿಸ್ತರಣೆಗೊಳಿಸುವ ಪ್ರಯತ್ನವನ್ನು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಸದ್ಯಕ್ಕೆ ಸ್ಥಗಿತಗೊಳಿಸಿದೆ. ಹೀಗೆಂದು ಕೇರಳ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವೆ ಜೆ.ಚಿಂಚುರಾಣಿ ಹೇಳಿದ್ದಾರೆ. ಅವರು ನೀಡಿದ ಮಾಹಿತಿ ಪ್ರಕಾರ “ಕೆಎಂಎಫ್‌ನ ಸಿಇಒ ನೀಡಿದ ಪ್ರಕಾರ ಕೇರಳದಲ್ಲಿ ಮಳಿಗೆಗಳನ್ನು ತೆರೆಯುವ ನಿರ್ಧಾರ ಸದ್ಯಕ್ಕೆ ಸ್ಥಗಿತಗೊಂಡಿದೆ. ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ)ಗೆ ಕೆಎಂಎಫ್ ವಿರುದ್ಧ ದೂರು ನೀಡಿದ ಬಳಿಕ ಅದು ಮಧ್ಯಪ್ರವೇಶಿಸಿದ ಬಳಿಕ ಈ ತೀರ್ಮಾನ ಪ್ರಕಟವಾಗಿದೆ” ಎಂದು ಸಚಿವೆ ಹೇಳಿದ್ದಾರೆ.

Advertisement

ಕೆಲದಿನಗಳ ಹಿಂದೆ ಕೆಎಂಎಫ್‌ನ ಉತ್ಪನ್ನಗಳು ಕಳಪೆಯಾಗಿವೆ ಎಂದು ಸಚಿವೆ ಚಿಂಚುರಾಣಿ ಹೇಳಿದ್ದರು. ಜತೆಗೆ ಕೇರಳ ಹಾಲು ಉತ್ಪಾದಕರ ಸಂಘ, ಮಿಲ್ಮದ ಅಧ್ಯಕ್ಷ ಕೆ.ಎಸ್‌.ಮಣಿ ಕೆಎಂಎಫ್‌ನ ಮಳಿಗೆಗಳಿಂದ ರಾಜ್ಯದ ಹೈನುಗಾರರಿಕೆ ತೊಂದರೆಯಾಗುತ್ತದೆ. ಅದರ ವಿರುದ್ಧ ಎನ್‌ಡಿಡಿಬಿಗೆ ದೂರು ನೀಡುವುದಾಗಿ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next