Advertisement
ಈ ಯೋಜನೆ ಹಾದುಹೋಗುವ ಮಂಗಳೂರು ಹಾಗೂ ಬಂಟ್ವಾಳ ತಾಲೂಕು ಸೇರಿದಂತೆ ಉಭಯ ಜಿಲ್ಲೆಗಳ ರೈತರನ್ನು ವಿಶ್ವಾಸಕ್ಕೆ ಪಡೆಯದೆ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಹಲವು ಸಮಯದಿಂದ ರೈತರು ಪ್ರತಿಭಟನೆಯ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಆ ರೈತರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.
ಈ ಹೈಟೆನ್ಶನ್ ಲೈನ್ ಕೃಷಿ ಭೂಮಿಯಲ್ಲಿ ಹಾದು ಹೋಗುವು ದರಿಂದ ಮಳೆಗಾಲದಲ್ಲಿ ಇದರಿಂದಾಗ ಬಹುದಾದ ಅಪಾಯ ಊಹಿಸಲು ಅಸಾಧ್ಯ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರಕಾರದ ಗಮನ ಸೆಳೆಯಲಾಗಿದೆ. ನಾವು ಪರಿಹಾರದ ಬಗ್ಗೆ ಯೋಚಿಸುವುದೇ ಇಲ್ಲ, ಪರಿಹಾರದ ಅಗತ್ಯವಿಲ್ಲ, ಜಿಲ್ಲಾಡಳಿತ ರೈತರ ಪರ ನಿಂತು ಕ್ರಮ ವಹಿಸಬೇಕು ಎಂದು ಹೋರಾಟ ಸಮಿತಿಯ ಸಂಚಾಲಕ ಶ್ಯಾಂ ಪ್ರಸಾದ್ ತಿಳಿಸಿದರು.
Related Articles
Advertisement
“ಉಡುಪಿ, ದ.ಕ. ಜಿಲ್ಲೆಯ ಸುಮಾರು 17 ಗ್ರಾಮಗಳ 500ಕ್ಕೂ ಅಧಿಕ ಕುಟುಂಬಗಳು ಈ 400 ಕೆ.ವಿ. ಹೈಟೆನ್ಶನ್ ಲೈನ್ ವ್ಯಾಪ್ತಿಗೊಳಪಡುತ್ತಿದ್ದು, ಕಳೆದ ಮೂರೂವರೆ ವರ್ಷಗಳಿಂದ ನಮಗೆ ಪರಿಹಾರ ಬೇಡ, ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಹೋರಾಟ ಮಾಡುತ್ತಿದ್ದೇವೆ. ಈಗಾಗಲೇ ಕೇಂದ್ರ ಸರಕಾರವು ಭಾರತದಿಂದ ದುಬಾೖಗೆ ಸಮುದ್ರದ ಮೂಲಕ ಕೇಬಲ್ ಹಾಕಿ ವಿದ್ಯುತ್ ಸಂಪರ್ಕಕ್ಕೆ ಮುಂದಾಗಿದ್ದು, ಅದೇ ತಂತ್ರಜ್ಞಾನದೊಂದಿಗೆ ಇಲ್ಲಿಯೂ ಕ್ರಮ ವಹಿಸಬಹುದಾಗಿದೆ. ವೀರಕಂಭದ 600 ಹೆಕ್ಟೇರ್ ಪ್ರದೇಶದ ಸಿರಿಚಂದನ ವನ್ನು ಗುರುತಿಸಿ ಮೀಸಲು ಅರಣ್ಯವಾಗಿ ಬೇಲಿ ಹಾಕುವ ಕಾರ್ಯವನ್ನು ಹಿಂದೆ ಅರಣ್ಯ ಸಚಿವರಾಗಿದ್ದಾಗ ರಮಾನಾಥ ರೈ ಮಾಡಿದ್ದಾರೆ. ಇದೀಗ ಈ ವಿದ್ಯುತ್ ಸಂಪರ್ಕದ ಯೋಜನೆಯು ಆ ಮೀಸಲು ಅರಣ್ಯದಲ್ಲಿಯೂ ಹಾದು ಹೋಗುತ್ತಿದೆ. – ಶ್ಯಾಂ ಪ್ರಸಾದ್, ರೈತ ಹಾಗೂ 400 ಕೆವಿ ವಿರೋಧಿ ಹೋರಾಟ ಸಮಿತಿ ಸಂಚಾಲಕ