Advertisement
ಯಾವುದೇ ಧಾರ್ಮಿಕ ಆಚರಣೆಗಳಿಗೆ ಚ್ಯುತಿ ಬಾರದಂತೆ ಈ ಬಾರಿಯ ಉತ್ಸವವನ್ನು ನಡೆಸಲಾಗಿತ್ತು. ವ್ಯವಹಾರಗಳಿರದೇ, ಮಕ್ಕಳ ಆಟಿಕೆಯ ಅಂಗಡಿಗಳೂ ಇರದೆ ಜಾತ್ರೆಗೆ ಸೇರಿದ್ದ ಭಕ್ತರ ಸಂಖ್ಯೆಯೂ ನೀರಸವಾಗಿತ್ತು. ಬೆಳಗ್ಗೆ ದೇವರ ಮಹಾಪೂಜೆ, ಪ್ರಾರ್ಥನೆಗಳ ಬಳಿಕ, ರಥ ಶುದ್ಧಿ ನಡೆದು ಶ್ರೀ ದೇವರ ಬಲಿಯೊಂದಿಗೆ 11ಗಂಟೆಗೆ ರಥಾರೋಹಣವು ನಡೆಯಿತು.
ನಾಶಕ್ಕೆ ಸಾರ್ವಜನಿಕ ಪ್ರಾರ್ಥನೆ
ರಥಾರೋಹಣದ ಬಳಿಕ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಾನದಲ್ಲಿ ದೇಶದ ಸುಭಿಕ್ಷೆ, ಕೊರೊನಾ ಮಹಾಮಾರಿಯ ನಿವೃತ್ತಿಪೂರ್ವಕ ಸಮಸ್ತ ಅರಿಷಡ್ವೆ$çರಿಗಳ ವಿನಾಶ, ಆರೋಗ್ಯ ಪ್ರಾಪ್ತಿಗಾಗಿ ಶ್ರೀ ಕ್ಷೇತ್ರದ ತಂತ್ರಿಗಳಾದ ಕುತ್ಯಾರು ಕೇಂಜ ವೇ| ಮೂ| ಶ್ರೀಧರ ತಂತ್ರಿ ಸಾರ್ವಜನಿಕ ಪ್ರಾರ್ಥನೆಯನ್ನು ನಡೆಸಿದರು. ಕೊರೊನಾ ಮಾಹಿತಿ ಕರಪತ್ರ ವಿತರಣೆ
ಇದೇ ಸಂದರ್ಭ ಜಿಲ್ಲಾ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಮುದರಂಗಡಿ ಪ್ರಾ.ಆ. ಕೇಂದ್ರದ ಸಹಕಾರದೊಂದಿಗೆ ಕೊರೊನಾ ವಿರುದ್ಧ ಜಾಗೃತಿಗಾಗಿ ಮಾಹಿತಿ ಕರಪತ್ರವನ್ನು ನೆರೆದಿದ್ದ ಭಕ್ತರಿಗೆ ವಿತರಿಸಲಾಯಿತು. ಕೊರೊನಾ ಕುರಿತಾಗಿ ದೇಗುಲದ ಪ್ರವೇಶ ದ್ವಾರದಲ್ಲಿಯೇ ಭಿತ್ತಿಪತ್ರವನ್ನೂ ಶ್ರೀ ದೇವಸ್ಥಾನ ಹಾಗೂ ಆರೋಗ್ಯ ಇಲಾಖೆಗಳ ವತಿಯಿಂದಲೂ ಪ್ರದರ್ಶಿಸಲಾಗಿತ್ತು. ಅಂಗಡಿಗಳನ್ನು ತೆರೆಯುವ ಸನ್ನಾಹದಲ್ಲಿ ಆಗಮಿಸಿದ ಒಂದೆರಡು ವ್ಯಾಪಾರಿಗಳನ್ನು ಪಡುಬಿದ್ರಿ ಪೊಲೀಸ್ ಠಾಣಾ ಸಿಬಂದಿ ಮನವೊಲಿಸಿ ವಾಪಾಸು ಕಳಿಸಿದ್ದರು.
Related Articles
Advertisement