ನವದೆಹಲಿ: ಕೇಂದ್ರ ಸಶಸ್ತ್ರ ಪಡೆಗಳ ವಿರುದ್ಧ ಮತ್ತೆ ಆರೋಪ ಎಸಗಿದ ಕಾರಣಕ್ಕಾಗಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗ ನೊಟೀಸ್ ಜಾರಿಗೊಳಿಸಿದೆ. ಚುನಾವಣಾ ಕರ್ತವ್ಯ ವಿಚಾ ರದಲ್ಲಿ ಕೇಂದ್ರ ಪಡೆಗಳು ಮತದಾರರಿಗೆ ಬೆದರಿಕೆಯೊಡ್ಡು ತ್ತಿವೆ ಎಂದು ಮಮತಾ ಬ್ಯಾನರ್ಜಿ ಮಾಡಿರುವ ಆರೋಪ ವಿವಿಧ ಐಪಿಸಿ ಸೆಕ್ಷನ್‌ಗಳ ಉಲ್ಲಂಘನೆ. ಈ ಕುರಿತು ಅವರು ಶನಿ ವಾರ ಬೆಳಗ್ಗೆ 11ರೊಳಗೆ ಸ್ಪಷ್ಟನೆ ನೀಡಬೇಕು ಎಂದು ಆಯೋಗ ಸೂಚಿಸಿದೆ.
ಸುವೇಂದುಗೂ ನೊಟೀಸ್: “ದೀದಿ ಬೇಗಮ್‌ಗೆ ಮತ ಹಾ ಕಿದರೆ, ನಂದಿಗ್ರಾಮ ಮಿನಿ ಪಾಕಿಸ್ತಾನ ಆಗುತ್ತೆ’ ಎಂದು ನಂದಿ ಗ್ರಾಮ ಅಭ್ಯರ್ಥಿ ಸುವೇಂದು ಅಧಿಕಾರಿ, ಕಳೆದ ವಾರ ನೀಡಿದ್ದ ವಿವಾದಿತ ಹೇಳಿಕೆಗೆ ಆಯೋಗ ಗರಂ ಆಗಿದೆ. ಆಯೋಗ ಈ ಸಂಬಂಧ ಶುಕ್ರವಾರ ನೊಟೀಸ್ ಜಾರಿಮಾಡಿದ್ದು, 24 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿದೆ.
ಬಿಜೆಪಿ ಕಚೇರಿ ಧ್ವಂಸ: ಬಸುಧಾ ಪ್ರದೇಶದ ದುರ್ಗಾಪುರ ದಲ್ಲಿನ ಬಿಜೆಪಿ ಕಚೇರಿ ಯನ್ನು ಟಿಎಂಸಿ ಕಾರ್ಯಕರ್ತರು ಗುರುವಾರ ರಾತ್ರಿ ಧ್ವಂಸಗೊಳಿಸಿದ ಘಟನೆ ನಡೆದಿದೆ.
4ನೇ ಹಂತಕ್ಕೆ ಇಂದು ಮತ: ಪ. ಬಂಗಾಳದಲ್ಲಿ 4ನೇ ಹಂತದ ಮತದಾನ ಶನಿವಾರ ಜರುಗಲಿದ್ದು, 44 ವಿಧಾನಸಭಾ ಕ್ಷೇತ್ರಗಳ ಜನ ಹಕ್ಕು ಚಲಾಯಿಸಲಿದ್ದಾರೆ. ಕೋಚ್ ಬೆಹಾರ್, ಅಲಿಪುರ್ ದ್ವಾರ್, ದಕ್ಷಿಣ ಪರಗಣಾಸ್‌ನ ಕೆಲವು ಭಾಗ, ಹೌರಾ, ಹೂಗ್ಲಿ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. 1.15 ಕೋಟಿ ಮತದಾರರು 373 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ.
ದೀದಿ ತವರಲ್ಲಿ ಶಾ ಮತ ಯಾಚನೆ:ಮಮತಾ ಬ್ಯಾನರ್ಜಿ ಅವರ “ತವರು ಕ್ಷೇತ್ರ’ ಅಂತಲೇ ಬಣ್ಣಿಸಲ್ಪಡುವ ಕೋಲ್ಕತ್ತಾದ ಭವಾನಿಪುರದಲ್ಲಿ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಮನೆ ಮನೆ ಪ್ರಚಾರ ಕೈಗೊಂಡಿದ್ದರು. ಸ್ಥಳೀಯ ಕಾರ್ಯಕರ್ತನ ಮನೆಯಲ್ಲಿ ಲಘು ಉಪಾಹಾರ ಸೇವಿಸಿದ ಬಳಿಕ ಅವರು, ನೂರಾರು ಸಂಖ್ಯೆಯ ಕಾರ್ಯಕ ರ್ತರೊಂದಿಗೆ ತೆರಳಿ, ಬಿಜೆಪಿ ಅಭ್ಯರ್ಥಿ ರುದ್ರಾ ನಿಲ್ ಘೋಷ್ ಪರ ಮತ ಯಾಚಿಸಿದರು. ಬಳಿಕ ಸಂಜೆ, ರುದ್ರಾಣಿ ಘೋಷ್ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾಗ, ಟಿಎಂಸಿ ಮತ್ತು ಬಿಜೆಪಿ ಕಾರ್ಯ ಕರ್ತರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಟಿಎಂಸಿ ಬೆಂಬಲಿಗರು ಬಿಜೆಪಿಗರ ಮೇಲೆ ಕಲ್ಲು, ಇಟ್ಟಿಗೆ ತೂರುತ್ತಿರುವ ವಿಡಿಯೊ ವೈರಲ್ ಆಗಿದೆ.
ಅಸ್ಸಾಂ ಕೈ ಅಭ್ಯರ್ಥಿಗಳು ರಾಜಸ್ಥಾನಕ್ಕೆ ಶಿಫ್ಟ್!
ಅಸ್ಸಾಂನಲ್ಲಿ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಹೈಡ್ರಾಮಾ ಶುರುವಾಗಿದೆ. ಗೆಲ್ಲುವ ನಿರೀಕ್ಷೆಯಿರುವ ಅಭ್ಯ ರ್ಥಿಗಳ ಕುದುರೆ ವ್ಯಾಪಾರದ ಭೀತಿಯಿಂದಾಗಿ
ಕಾಂಗ್ರೆಸ್- ಎಐಯುಡಿಎಫ್ ಮೈತ್ರಿಕೂಟದ 20 ಅಭ್ಯರ್ಥಿ ಗಳು ರಾಜಸ್ಥಾನದ ಜೈಪುರಕ್ಕೆ ಶಿಫ್ಟ್ ಆಗಿದ್ದಾರೆ. ಜೈಪುರದ ಫೈರ್ ಮಾಂಟ್ ಹೋಟೆಲ್ ನಲ್ಲಿ ಕಾಂಗ್ರೆಸ್ ಇವರಿಗೆ ಲಕ್ಷುರಿ ವಸತಿ ಕಲ್ಪಿಸಿದೆ. 3 ಹಂತದ ಮತದಾನ ಪೂರೈಸಿ ರುವ ಅಸ್ಸಾಂನಲ್ಲಿ ಮೇ 2ರಂದು ಫಲಿತಾಂಶ ಹೊರಬೀಳಲಿದೆ.