ಹೊಸದಿಲ್ಲಿ: ಭಾರತದ ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆ ಇನ್ಫೋಸಿಸ್‌ನ ಸಕ್ರಿಯ ಜವಾಬ್ದಾರಿಯನ್ನು ಮತ್ತೆ ನಂದನ್
ನಿಲೇಕಣಿ ಹೊತ್ತುಕೊಳ್ಳುತ್ತಾರಾ? ಹೌದು ಎನ್ನುತ್ತವೆ ಕೆಲ ಮೂಲಗಳು.
ಸಿಇಒ ವಿಶಾಲ್ ಸಿಕ್ಕಾ ದಿಢೀರ್ ರಾಜೀನಾಮೆಯಿಂದ ಕುಸಿದಿರುವ ಇನ್ಫೋಸಿಸನ್ನು ಮೇಲೆತ್ತಲು ಸಹ ಸಂಸ್ಥಾಪಕರಾಗಿರುವ ನಿಲೇಕಣಿ ಪುನರಾಗಮನವಾಗಲಿದೆ ಎಂದು ಬಲವಾದ ಸುದ್ದಿಗಳು ಹಬ್ಬಿವೆ. ಆದರೆ ಅವರು ಸಂಸ್ಥೆಯಲ್ಲಿ ಯಾವ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ ಎನ್ನುವುದು ಮುಂದಿನ 2 ದಿನಗಳಲ್ಲಿ ಖಚಿತವಾಗಲಿದೆ ಎನ್ನಲಾಗಿದೆ.
ಕಳೆದ ವಾರ ಸಿಇಒ ಮತ್ತು ಎಂಡಿ ಸ್ಥಾನದಲ್ಲಿದ್ದ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದರು. ತನ್ನ ಕೆಲಸದಲ್ಲಿ ವಿಪರೀತ ಹಸ್ತಕ್ಷೇಪ ನಡೆಸಲಾಗುತ್ತಿದೆ, ಸತತವಾಗಿ ವೈಯಕ್ತಿಕ ದಾಳಿ ನಡೆಸಲಾಗುತ್ತಿದೆ ಎಂದು ಪರೋಕ್ಷವಾಗಿ ಸಂಸ್ಥಾಪಕ ನಾರಾಯಣ ಮೂರ್ತಿ ವಿರುದ್ಧವೇ ಹರಿಹಾಯ್ದಿದ್ದರು. ಬಳಿಕ ಷೇರು ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು.
ನಿಲೇಕಣಿ ಸಂಸ್ಥೆಯನ್ನು ಮರುಪ್ರವೇಶ ಮಾಡುತ್ತಾರೆಂಬ ಸುದ್ದಿ ಹಬ್ಬಿದ ಬೆನ್ನಲ್ಲೇ 899.95 ರೂಪಾಯಿಗೆ ಹಠಾತ್ ಏರಿಕೆ ಕಂಡಿದೆ. ಇದು ಷೇರುದಾರರಿಗೆ ಮತ್ತೆ ನಂಬಿಕೆ ಹುಟ್ಟಿರುವ ಸಂಕೇತವಾಗಿದೆ ಎಂದು ಆರ್ಥಿಕ ತಜ್ಞರು ವಿವರಿಸಿದ್ದಾರೆ.
ನಿಲೇಕಣಿ ಮತ್ತು ಇನ್ಫೋಸಿಸ್: 30 ವರ್ಷ ಗಳ ಹಿಂದೆ ಇನ್ಫೋಸಿಸ್ ಸ್ಥಾಪನೆ ಯಾದಾಗ ನಿಲೇಕಣಿ ಕೂಡ ಅದರ ಸಹ ಸಂಸ್ಥಾಪಕರಾ ಗಿದ್ದರು. 2002ರಿಂದ 2007ರ ಅವಧಿಯಲ್ಲಿ ಸಿಇಒ ಆಗಿ ಕಾರ್ಯನಿರ್ವಹಿ ಸಿದ್ದರು. 2009ರಲ್ಲಿ ಆಧಾರ್ ಕಾರ್ಡ್ ಜವಾಬ್ದಾರಿ ನಿರ್ವಹಿಸಲು ಸಂಸ್ಥೆಗೆ ರಾಜೀನಾಮೆ ನೀಡಿದ್ದರು.